ETV Bharat / bharat

ದೇಶದ ಐಐಟಿಗಳಲ್ಲೂ ಹುದ್ದೆಗಳು ಖಾಲಿ: ಬೇಕಿದೆ 4,300 ಬೋಧಕರು!

ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಿರುವ ಕಾರಣ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ. ಜತೆಗೆ ಐಐಟಿಗಳಲ್ಲಿ ಸಿಬ್ಬಂದಿ ನೇಮಕಾತಿಯೂ ಅಧಿಕವಾಗಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್​ ಹೇಳಿದ್ದಾರೆ.

IITs
IITs
author img

By

Published : Mar 16, 2022, 8:22 PM IST

ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳಲ್ಲೂ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಬೋಧಕರ ಹುದ್ದೆಗಳು ಖಾಲಿ ಇದ್ದು, ಇನ್ನೂ 4,300ಕ್ಕೂ ಅಧಿಕ ಬೋಧಕರ ಹುದ್ದೆಗಳನ್ನು ತುಂಬಬೇಕಿದೆ.

ದೇಶಾದ್ಯಂತ ಇರುವ ಐಐಟಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್​ ಬುಧವಾರ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ಖರಗ್‌ಪುರ ಐಐಟಿಯಲ್ಲಿ ಅತಿ ಹೆಚ್ಚು ಅಂದರೆ 815 ಬೋಧಕರ ಹುದ್ದೆಗಳು ಖಾಲಿ ಇವೆ. ಕರ್ನಾಟಕದ ಧಾರವಾಡ ಐಐಟಿಯಲ್ಲೂ 39 ಹುದ್ದೆಗಳು ಇನ್ನೂ ಖಾಲಿ ಇವೆ.

ಜತೆಗೆ ಬಾಂಬೆ (532), ಧನ್‌ಬಾದ್ (447), ಮದ್ರಾಸ್ (396), ಕಾನ್ಪುರ (351), ರೂರ್ಕಿ (296) ಮತ್ತು ಬಿಎಚ್‌ಯು (289) ದೆಹಲಿ (73), ಭುವನೇಶ್ವರ (115), ಗಾಂಧಿನಗರ (45), ಹೈದ್ರಾಬಾದ್ (132), ಇಂದೋರ್ (81), ಜೋಧ್‌ಪುರ (65), ಮಂಡಿ (73), ಪಾಟ್ನಾ (100), ರೋಪರ್ (69), ತಿರುಪತಿ (18), ಪಾಲಕ್ಕಾಡ್ (24), ಜಮ್ಮು (31), ಭಿಲ್ಲೈ (43) ಹಾಗೂ ಗೋವಾ ಐಐಟಿಯಲ್ಲಿ 40 ಜನ ಅಧ್ಯಾಪಕರ ಹುದ್ದೆಗಳು ಖಾಲಿ ಇವೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಿರುವ ಕಾರಣ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ. ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳು ಮತ್ತು ಎಸ್​​ಸಿ-ಎಸ್​​ಟಿ ಮೀಸಲಾತಿ ಹೊರತಾಗಿ ಈ ಶೇ.10ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಆದ್ದರಿಂದ ಐಐಟಿಗಳಲ್ಲಿ ಸಿಬ್ಬಂದಿ ನೇಮಕಾತಿಯೂ ಅಧಿಕವಾಗಿದೆ ಎಂದು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಅಧ್ಯಾಪಕರ ನೇಮಕಾತಿಯು ಸಾಕಷ್ಟು ಹಂತಗಳನ್ನು ಒಳಗೊಂಡಿರುವುದರಿಂದ ಸಮಯ ತೆಗೆದುಕೊಳ್ಳುತ್ತದೆ. ಆದರೂ, ಎಲ್ಲ ಐಐಟಿಗಳಿಗೆ ಖಾಲಿ ಹುದ್ದೆಗಳನ್ನು ವಿಶೇಷ ನೇಮಕಾತಿಯಡಿ ಕೇಡರ್​ವಾರು ಭರ್ತಿ ಮಾಡುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ 5.3 ಲಕ್ಷಕ್ಕೂ ಅಧಿಕ ಪೊಲೀಸ್​ ಹುದ್ದೆಗಳು ಖಾಲಿ: ಅತಿ ಹೆಚ್ಚು ಖಾಲಿ ಇರೋದು ಎಲ್ಲಿ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.