ETV Bharat / bharat

ಹರಿದ್ವಾರ ಗಂಗಾ ಆರತಿಯಲ್ಲಿ ಭಾಗಿಯಾದ ಭಕ್ತರಲ್ಲಿ 1,700 ಜನರಿಗೆ ಕೋವಿಡ್​ ಪಾಸಿಟಿವ್​ !

author img

By

Published : Apr 15, 2021, 4:59 PM IST

ಉತ್ತರಾಖಂಡದ ಹರಿದ್ವಾರದಲ್ಲಿ ಆಯೋಜನೆ ಮಾಡಲಾಗಿರುವ ಕುಂಭಮೇಳದಲ್ಲಿ ಆಯೋಜನೆ ಮಾಡಲಾಗಿರುವ ಗಂಗಾ ಆರತಿಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದು, ಕೊರೊನಾ ಸೋಂಕಿಗೆ ಆಹ್ವಾನ ನೀಡಿದೆ.

Kumbh Mela
Kumbh Mela

ಹರಿದ್ವಾರ(ಉತ್ತರಾಖಂಡ್​): ಮಹಾಮಾರಿ ಕೊರೊನಾ ವೈರಸ್​ ಹಾವಳಿ ನಡುವೆ ಕೂಡ ಉತ್ತರಾಖಂಡ್​ದ ಹರಿದ್ವಾರದಲ್ಲಿ ಗಂಗಾ ಆರತಿ ನಡೆಯುತ್ತಿದ್ದು, ಇದರಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.

ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳ ಆಯೋಜನೆ ಮಾಡಲಾಗಿದ್ದು, ಅಲ್ಲಿ ನಡೆಯುತ್ತಿರುವ ಗಂಗಾ ಆರತಿಯಲ್ಲಿ ಸಾವಿರಾರು ಭಕ್ತರಲ್ಲಿ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 1,700 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದ್ದು, ಇದೀಗ ಕುಂಭಮೇಳ ಕೋವಿಡ್​ ಹಾಟ್​ಸ್ಪಾಟ್​ ಆಗಿ ಮಾರ್ಪಟ್ಟಿದೆ. ಏಪ್ರಿಲ್​ 10ರಿಂದ 14ರವರೆಗೆ ಈ ಸಮಾರಂಭ ನಡೆದಿದ್ದು, ಇಷ್ಟೊಂದು ಸೋಂಕಿತ ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ: ಕೊರೊನಾ ಮಾರ್ಗಸೂಚಿಗಿಲ್ಲ ಬೆಲೆ.. ಗಂಗಾ ಆರತಿಯಲ್ಲಿ ಸಾವಿರಾರು ಭಕ್ತರು ಭಾಗಿ!

ಕುಂಭಮೇಳದಲ್ಲಿ ಭಾಗಿಯಾಗಿರುವ ಭಕ್ತರಿಗೆ ಆರ್​ಟಿ - ಪಿಸಿಆರ್​​ ಟೆಸ್ಟ್​ ಮಾಡಿಸಲಾಗಿದ್ದು, ಇನ್ನು ಸಾವಿರಾರು ಭಕ್ತರ ವರದಿ ಬರುವುದು ಬಾಕಿ ಉಳಿದಿದೆ. ಹೆಚ್ಚಿನ ಸೋಂಕಿತ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಹರಿದ್ವಾರ್​ ಮುಖ್ಯ ವೈದ್ಯಕೀಯ ಅಧಿಕಾರಿ ಶಂಭು ಕುಮಾರ್​ ಜಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.