ನವದೆಹಲಿ : ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೂ 140 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ಪೂರೈಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಮಾಹಿತಿ ನೀಡಿದೆ.
ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಎಲ್ಲರಿಗೂ ಉಚಿತ ಲಸಿಕೆ ವಿತರಿಸುತ್ತಿದೆ. ಆದ್ರೆ, ಲಸಿಕೆ ಪಡೆಯಲು ಒಂದಿಷ್ಟು ಮಂದಿ ಹಿಂದೇಟು ಹಾಕಿದ್ದು ಮಾತ್ರ ವಿಪರ್ಯಾಸ.
ಈವರೆಗೂ ಕೇಂದ್ರ 140 ಕೋಟಿಗೂ ಹೆಚ್ಚು ಲಸಿಕೆ ಪೂರೈಸಿದೆ. 18.80 ಕೋಟಿಗೂ ಹೆಚ್ಚು ಲಸಿಕೆಗಳು ಬಳಕೆಯಾಗದೇ ಬಾಕಿ ಉಳಿದಿವೆ ಎಂದು ಸಚಿವಾಲಯ ತಿಳಿಸಿದೆ.
ಭಾರತ ಸರ್ಕಾರ ಇದುವರೆಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 140 ಕೋಟಿಗೂ ಹೆಚ್ಚು (1,40,04,00,230) ಲಸಿಕೆಯ ಡೋಸ್‌ಗಳನ್ನು ಒದಗಿಸಿದೆ. 18.80 ಕೋಟಿಗೂ ಹೆಚ್ಚು (18,80,33,706) ಡೋಸ್‌ಗಳು ಇನ್ನೂ ಬಳಕೆಯಾಗದೇ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ದೇಶದಲ್ಲಿ 8,503 ಹೊಸ ಕೋವಿಡ್ ಕೇಸ್ ಪತ್ತೆ, 624 ಸಾವು
ಕೇಂದ್ರ ಸರ್ಕಾರವು ಲಸಿಕಾಭಿಯಾನದ ವೇಗವನ್ನು ಹೆಚ್ಚಿಸಲು ಬದ್ಧವಾಗಿದೆ ಎಂದು ತಿಳಿಸಿದೆ. 2021ರ ಜನವರಿ 16ರಿಂದ ರಾಷ್ಟ್ರವ್ಯಾಪಿ ಲಸಿಕಾಭಿಯಾನ ಪ್ರಾರಂಭವಾಯಿತು. 2021ರ ಜೂನ್ 21ರಂದು ವ್ಯಾಕ್ಸಿನೇಷನ್‌ನ ಹೊಸ ಹಂತ ಪ್ರಾರಂಭವಾಗಿ, ಲಸಿಕಾಭಿಯಾನ ಚುರುಕುಗೊಂಡಿದೆ.
ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 3,46,74,744ಕ್ಕೇರಿದೆ. ಮೃತರ ಸಂಖ್ಯೆ 4,74,735ಕ್ಕೆ ತಲುಪಿದೆ. ವ್ಯಾಕ್ಸಿನೇಷನ್ ಅಭಿಯಾನದಡಿ ದೇಶವ್ಯಾಪಿ ಇದುವರೆಗೆ ಒಟ್ಟು 131.18 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ.