ETV Bharat / bharat

ಉಕ್ರೇನ್​​​ನಿಂದ 11 ಸಾವಿರ ಜನರ ಸ್ಥಳಾಂತರ.. ನವದೆಹಲಿಗೆ ಆಗಮಿಸಿದ 170 ನಾಗರಿಕರ ಹೊತ್ತ ವಿಮಾನ

author img

By

Published : Mar 5, 2022, 7:42 AM IST

ಉಕ್ರೇನ್​​​​​ನಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುಮಾರು 170 ನಾಗರಿಕರನ್ನು ಸಚಿವರು ಬರಮಾಡಿಕೊಂಡರು. ಬಳಿಕ ಈ ಸಂಬಂಧ ಟ್ವೀಟ್​ ಮಾಡಿರುವ ಮುರಳೀಧರನ್​, "ಆಪರೇಷನ್ ಗಂಗಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದಿದ್ದಾರೆ.

Over 11,000 Indian nationals evacuated from Ukraine so far: MoS Muraleedharan
ಉಕ್ರೇನ್​​​ನಿಂದ 11 ಸಾವಿರ ಜನರ ಸ್ಥಳಾಂತರ.. ನವದೆಹಲಿಗೆ ಆಗಮಿಸಿದ 170 ನಾಗರಿಕರ ಹೊತ್ತ ವಿಮಾನ

ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿ ಇಂದಿಗೆ 10ನೇ ದಿನಕ್ಕೆ ತಲುಪಿದೆ. ಉಕ್ರೇನ್​​​​ನ ದೊಡ್ಡ ನಗರಗಳಿಗೆ ಲಗ್ಗೆ ಇಡುತ್ತಿರುವ ರಷ್ಯಾ ಸೇನೆ ಉಕ್ರೇನ್​ ಮೇಲೆ ಭೀಕರ ದಾಳಿ ಮುಂದುವರಿಸಿದೆ. ಈ ಭಯಂಕರ ದಾಳಿ ನಡುವೆ ಭಾರತ 11,000 ಕ್ಕೂ ಹೆಚ್ಚು ಭಾರತೀಯರನ್ನು ಸಂಘರ್ಷ ಪೀಡಿತ ದೇಶದಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್​​​​​ನಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುಮಾರು 170 ನಾಗರಿಕರನ್ನು ಸಚಿವರು ಬರಮಾಡಿಕೊಂಡರು. ಬಳಿಕ ಈ ಸಂಬಂಧ ಟ್ವೀಟ್​ ಮಾಡಿರುವ ಮುರಳೀಧರನ್​, "ಆಪರೇಷನ್ ಗಂಗಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದುವರೆಗೆ ಸುಮಾರು 11,000 ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. 170 ಭಾರತೀಯರನ್ನ ಹೊತ್ತ ಮತ್ತೊಂದು ವಿಮಾನ ಇಂದು ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಸಂತಸ ತಂದಿದೆ ಎಂದಿದ್ದಾರೆ.

ಉಕ್ರೇನ್‌ ಗಡಿಯಲ್ಲಿರುವ ನಾಲ್ಕು ನೆರೆಯ ದೇಶಗಳ ಗಡಿಯಲ್ಲಿ ಬೀಡು ಬಿಟ್ಟಿರುವ ಕೇಂದ್ರದ ನಾಲ್ವರು ಸಚಿವರು ಉಕ್ರೇನ್​​​​ನಲ್ಲಿರುವ ಭಾರತೀಯ ಪ್ರಜೆಗಳ ಸ್ಥಳಾಂತರಿಸುವ ಪ್ರಕ್ರಿಯೆ ಮತ್ತು ಅದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆಪರೇಷನ್ ಗಂಗಾ ಅಡಿ ಭಾರತೀಯ ವಾಯುಪಡೆಯ ಸಿ-17 ವಿಮಾನ ಸೇರಿದಂತೆ ಇತರ ವಿಮಾನಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ.

ಫೆಬ್ರವರಿ 24 ರಿಂದ ರಷ್ಯಾ ಪಡೆಗಳು ಉಕ್ರೇನ್‌ ಮೇಲೆ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿವೆ.

ಇದನ್ನು ಓದಿ:Great Escape: ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ನಡೆದಿತ್ತು 3 ಬಾರಿ ಯತ್ನ.. ಆದರೆ ಸಂಚು ವಿಫಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.