ಯೆಮೆನ್ : ಹೌತಿ ಬಂಡುಕೋರರಿಂದ ಮತ್ತೊಂದು ಭೀಕರ ದಾಳಿ ನಡೆದಿದೆ. ಯೆಮೆನ್ನ ಸಾದಾ ಜೈಲಿನ ಮೇಲೆ ಬಂಡುಕೋರರು ವೈಮಾನಿಕ ದಾಳಿ ನಡೆಸಿದ್ದು, 100ಕ್ಕೂ ಅಧಿಕ ಕೈದಿಗಳು ಮೃತಪಟ್ಟಿದ್ದಾರೆ. ಅಲ್ಲದೇ 200ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
'ಯೆಮೆನ್ನ ಸಾದಾ ಜೈಲಿನ ಮೇಲೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಡೆಸಿದ ದಾಳಿಯಿಂದ ಜೈಲಿನ ಕಟ್ಟಡ ಧ್ವಂಸವಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದವರನ್ನು ರಕ್ಷಣೆ ಮಾಡಲಾಗುತ್ತಿದೆ. ಸೌದಿಯ ರಕ್ಷಣಾ ಪಡೆಗಳು ಇಲ್ಲಿಗೆ ಧಾವಿಸುತ್ತಿವೆ' ಎಂದು ಯೆಮೆನ್ ರೆಡ್ಕ್ರಾಸ್ ಸಮಿತಿಯ ಅಧಿಕಾರಿ ಬಶೀರ್ ಒಮರ್ ತಿಳಿಸಿದ್ದಾರೆ.
ಈಗಾಗಲೇ 100 ಅಧಿಕ ಶವಗಳನ್ನು ಹೊರ ತೆಗೆಯಲಾಗಿದೆ. ಕಟ್ಟಡದ ಅವಶೇಷಗಳಡಿ ಇನ್ನಷ್ಟು ಕೈದಿಗಳ ಶವಗಳು ಸಿಲುಕಿರುವ ಸಾಧ್ಯತೆ ಇದೆ. 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹತ್ಯೆಗೆ ಬಂದವರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಉಳಿಸಿಕೊಂಡ ತೆಲಂಗಾಣದ ದಿಟ್ಟ ಮಹಿಳೆ!