ETV Bharat / bharat

ದೇಶಾದ್ಯಂತ 1.17 ಕೋಟಿ ವ್ಯಾಕ್ಸಿನೇಷನ್.. ಪಾಸಿಟಿವ್ ರೇಟ್‌ ಶೇ.5.19ಕ್ಕೆ ಕುಸಿತ..

ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇರಳದಲ್ಲಿ 38% ಇದ್ದರೆ, ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 37% ದಷ್ಟಿದೆ. ಕರ್ನಾಟಕದಲ್ಲಿ 4% ಮತ್ತು ತಮಿಳುನಾಡಿನಲ್ಲಿ 2.78% ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ..

rajesh
rajesh
author img

By

Published : Feb 23, 2021, 7:57 PM IST

ನವದೆಹಲಿ : ದೇಶಾದ್ಯಂತ 1.17 ಕೋಟಿ ಲಸಿಕೆ ಪ್ರಮಾಣ ನೀಡಲಾಗಿದೆ. ಮೊದಲನೇ ಡೋಸ್​ನಲ್ಲಿ 1.04 ಕೋಟಿ ಹಾಗೂ ಎರಡನೇ ಡೋಸ್​ನಲ್ಲಿ 12.61 ಲಕ್ಷ ಲಸಿಕೆ ನೀಡಲಾಗಿದೆ. ಸಕ್ರಿಯ ಪ್ರಕರಣಗಳು 1.50 ಲಕ್ಷಕ್ಕಿಂತ ಕಡಿಮೆಯಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪಾಸಿಟಿವ್ ರೇಟ್ 5.19% ಆಗಿದ್ದು, ಇದು ನಿರಂತರವಾಗಿ ಕ್ಷೀಣಿಸುತ್ತಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ 72% ಸಕ್ರಿಯ ಪ್ರಕರಣಗಳಿವೆ.

ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇರಳದಲ್ಲಿ 38% ಇದ್ದರೆ, ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 37% ದಷ್ಟಿದೆ. ಕರ್ನಾಟಕದಲ್ಲಿ 4% ಮತ್ತು ತಮಿಳುನಾಡಿನಲ್ಲಿ 2.78% ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ.

ಇಂದು ಮಧ್ಯಾಹ್ನದವರೆಗೆ 1,17,64,788 ವ್ಯಾಕ್ಸಿನೇಷನ್ ಮಾಡಗಿದೆ. ಈ ಪೈಕಿ 68% ಆರೋಗ್ಯ ಕಾರ್ಯಕರ್ತರಿಗೆ 1ನೇ ಡೋಸ್ ಮತ್ತು 62% ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ ನೀಡಲಾಗಿದೆ. ಮುಂಚೂಣಿ ಕಾರ್ಮಿಕರಲ್ಲಿ 41%ಕ್ಕಿಂತಲೂ ಹೆಚ್ಚಿನವರಿಗೆ 1ನೇ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.