ETV Bharat / bharat

ಪಾಕಿಸ್ತಾನವನ್ನು 'ಭಯೋತ್ಪಾದಕ ರಾಷ್ಟ್ರ'ವಾಗಿ ಘೋಷಿಸಲು ವಿಶ್ವಸಂಸ್ಥೆಗೆ ಕಾಶ್ಮೀರಿ ಪಂಡಿತರ ಮನವಿ - Pakistan as a terrorist country

ಜಮ್ಮು ಕಾಶ್ಮೀರದಲ್ಲಿ ಪಂಡಿತರ ಹತ್ಯಾಕಾಂಡ ನಿರಂತರವಾಗಿದೆ. ಇದಕ್ಕೆಲ್ಲಾ ಕಾರಣ ಪಾಕಿಸ್ತಾನ ಎಂದು ದೂಷಿಸಿರುವ ಕಾಶ್ಮೀರಿ ಪಂಡಿತರ ಸಂಘಟನೆಯು ಆ ದೇಶವನ್ನು ಭಯೋತ್ಪಾದಕ ರಾಷ್ಟ್ರವನ್ನಾಗಿ ಘೋಷಿಸಲು ವಿಶ್ವಸಂಸ್ಥೆಗೆ ಮನವಿ ಮಾಡಿದೆ.

ಪಾಕಿಸ್ತಾನ 'ಭಯೋತ್ಪಾದಕ ರಾಷ್ಟ್ರ'ವಾಗಿ ಘೋಷಿಸಲು ವಿಶ್ವಸಂಸ್ಥೆಗೆ ಕಾಶ್ಮೀರಿ ಪಂಡಿತರ ಮನವಿ

author img

By

Published : Jun 21, 2022, 4:14 PM IST

ಜಮ್ಮು: ಕಾಶ್ಮೀರ ಕಣಿವೆಯಲ್ಲಿ ನೆರೆಯ ಪಾಕಿಸ್ತಾನ ದೇಶವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಹೀಗಾಗಿ ಅದನ್ನು 'ಭಯೋತ್ಪಾದಕ ರಾಷ್ಟ್ರ'ವಾಗಿ ಘೋಷಿಸುವಂತೆ ಒತ್ತಾಯಿಸಿ ಕಾಶ್ಮೀರಿ ಪಂಡಿತ್ ಯುನೈಟೆಡ್ ಫ್ರಂಟ್ (ಕೆಪಿಯುಎಫ್) ಸಂಘಟನೆ ಸೋಮವಾರ ವಿಶ್ವಸಂಸ್ಥೆಗೆ ಮನವಿ ಮಾಡಿದೆ.

ಇಂದು 'ವಿಶ್ವ ನಿರಾಶ್ರಿತರ ದಿನ'ದ ಅಂಗವಾಗಿ ಸಂಘಟನೆಯಿಂದ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ವೇಳೆ ಸಂಘಟನೆಯ ಸತೇಶ್ ಕಿಸ್ಸು ಮಾತನಾಡಿ, "ಕಣಿವೆಯಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಪಾಕಿಸ್ತಾನವನ್ನು ವಿಶ್ವಸಂಸ್ಥೆಯು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲು ಸಂಘಟನೆಯು ಒತ್ತಾಯಿಸುತ್ತದೆ. ನೆರೆಯ ರಾಷ್ಟ್ರವನ್ನು ನಿಯಂತ್ರಿಸದ ಹೊರತಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ತಡೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಇನ್ನೊಂದು ಸಂಘಟನೆಯಾದ 'ಪನುನ್ ಕಾಶ್ಮೀರ'ವೂ ಕೂಡ ವಿಶ್ವ ನಿರಾಶ್ರಿತರ ದಿನದ ಅಂಗವಾಗಿ ಇಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಕಾಶ್ಮೀರ ಪಂಡಿತರ ಹತ್ಯೆ ಪ್ರಕರಣವನ್ನು ಪನುನ್ ಕಾಶ್ಮೀರ ಸಂಘಟನೆಯ ಅಧ್ಯಕ್ಷ ಅಜಯ್ ಚ್ರುಂಗೂ ಟೀಕಿಸಿದ್ದರು.

ಇದನ್ನೂ ಓದಿ: ಅಗ್ನಿಪಥ್​ ಯೋಜನೆ ಹಿಂಪಡೆವ ಮಾತೇ ಇಲ್ಲ, ಇದು ದಶಕಗಳ ಚಿಂತನೆಯ ಫಲ: ಅಜಿತ್​ ದೋವಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.