ETV Bharat / bharat

ಗರ್ಭಿಣಿಯರು ಒತ್ತಡ ಉಂಟಾದರೆ 'ಹೆರಿಗೆ ಶಿಕ್ಷಣ ತರಗತಿ' ಆಯ್ಕೆ ಮಾಡಿಕೊಳ್ಳಿ:ಟೆನ್ಷನ್​ ಫ್ರೀಯಾಗಿ

ಗರ್ಭಾವಸ್ಥೆಯು ಹೆಣ್ಣಿನ ಪಾಲಿಗೆ ಅತೀ ಸಂತೋಷದಾಯಕ ಮತ್ತು ಗಾಡ್​ ಗಿಫ್ಟ್​ ಎಂದೇ ಹೇಳಲಾಗುತ್ತೆ. ಆದರೆ ಈ ಸಮಯ ಸಾಕಷ್ಟು ಸವಾಲನ್ನು ಸಹ ತರುತ್ತದೆ. ಮಹಿಳೆಯ ದೇಹದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳೆರಡೂ ಆಗುತ್ತವೆ. ಅವು ಕೆಲವೊಮ್ಮೆ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಹೆರಿಗೆ ತರಗತಿಗಳು( Childbirth Education) ಸಹಾಯಕವಾಗಬಹುದು..

DOC Title Opt For Childbirth Education Class For A Stress-Free Pregnancy
ಹೆರಿಗೆ ಶಿಕ್ಷಣ ತರಗತಿ
author img

By

Published : Nov 13, 2021, 9:20 PM IST

ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಬೆಳಗ್ಗೆ ವೇಳೆ ಆಯಾಸ, ಆಲಸ್ಯ, ವಾಕರಿಕೆ, ವಾಂತಿ, ಆಯಾಸ, ಕ್ರಮೇಣ ತೂಕ ಹೆಚ್ಚಾಗುವುದು, ಪಾದಗಳು ಊದಿಕೊಳ್ಳುವುದು, ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು ಇತ್ಯಾದಿಗಳ ಜೊತೆಗೆ ಇತರ ಕೆಲವು ಸಮಸ್ಯೆಗಳು.

ಗರ್ಭಿಣಿಯಾಗುವ ಮೊದಲು ಯಾವುದೇ ಸಹಾಯವಿಲ್ಲದೆ ಸುಲಭವಾಗಿ ಮಾಡಬಹುದಾದ ಕೆಲಸಗಳು ಗರ್ಭಧಾರಣೆಯ ನಂತರ ಕಷ್ಟಕರವಾಗುತ್ತವೆ. ಮತ್ತು ಈ ಎಲ್ಲಾ ಬದಲಾವಣೆಗಳು ಗರ್ಭಿಣಿಯರಿಗೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು.

ಗರ್ಭಾವಸ್ಥೆಯಲ್ಲಿ ಒತ್ತಡದ ಇತರ ಕಾರಣಗಳು ಹೀಗಿರಬಹುದು:

  • ಗರ್ಭಧಾರಣೆ ಹಿನ್ನೆಲೆ ಉಂಟಾಗುವ ದೈಹಿಕ ಬದಲಾವಣೆಗಳು
  • 1ನೇ ತ್ರೈಮಾಸಿಕದಲ್ಲಿ ರಕ್ತಸ್ರಾವ, ತೀವ್ರವಾದ ಹೈಪರ್‌ರೆಮಿಸಿಸ್ ಮತ್ತು ಆರಂಭಿಕ ಗರ್ಭಾವಸ್ಥೆಯಲ್ಲಿ ಬೆಡ್‌ರೆಸ್ಟ್‌ನ ಅಗತ್ಯತೆಯಂತಹ ಗರ್ಭಾವಸ್ಥೆಯ ತೊಡಕುಗಳು
  • ಈ ಹಿಂದಿನ ಗರ್ಭಪಾತ
  • ಗರ್ಭಪಾತದ ಭಯ
  • ಹುಟ್ಟಲಿರುವ ಮಗುವಿನ ಆರೋಗ್ಯದ ಬಗ್ಗೆ ಚಿಂತೆ
  • ಹೆರಿಗೆಯ ಭಯ ಮತ್ತು ಮಗು ಜನಿಸಿದ ನಂತರ ಅದನ್ನು ನೋಡಿಕೊಳ್ಳುವ ಚಿಂತೆ
  • ಮೊದಲೇ ಕಾಡುತ್ತಿರುವ ಆತಂಕ(anxiety) ಅಥವಾ ಖಿನ್ನತೆಯ ಸಮಸ್ಯೆಗಳು(depression issues)

ಒತ್ತಡವು ಗರ್ಭಿಣಿ ಮಹಿಳೆ ಮತ್ತು ಹುಟ್ಟಲಿರುವ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಗರ್ಭಾವಸ್ಥೆಯಲ್ಲಿ ಒತ್ತಡವು ತಾಯಿ ಮತ್ತು ಮಗುವಿನ ಮೇಲೆ ಬಹಳಷ್ಟು ಅನಪೇಕ್ಷಿತ ಪರಿಣಾಮಗಳನ್ನು ಉಂಟು ಮಾಡುತ್ತದೆ. ಕ್ಯಾರೊಲಿನ್ ಲಿಲ್ಲಿಕ್ರೆಟ್ಜ್, ಜೊಹಾನ್ನಾ ಲಾರೆನ್, ಗುನಿಲ್ಲಾ ಸಿಡ್ಸ್ಜೋ ಮತ್ತು ಆನ್ ಜೋಸೆಫ್ಸನ್ ಅವರ ಸಂಶೋಧನೆಯಾದ 'ಗರ್ಭಾವಸ್ಥೆಯಲ್ಲಿ ತಾಯಿಯ ಒತ್ತಡದ ಪರಿಣಾಮವು ಪ್ರಸವಪೂರ್ವ ಜನನದ ಅಪಾಯದ ಮೇಲೆ' (Effect of maternal stress during pregnancy on the risk of preterm birth)ಅಧ್ಯಯನದಲ್ಲಿ ಸುಮಾರು 20 ಪ್ರತಿಶತದಷ್ಟು ಪ್ರಸವಪೂರ್ವ ಜನನಗಳು ಗರ್ಭಾವಸ್ಥೆಯಲ್ಲಿ ತಾಯಿಯ ಒತ್ತಡಕ್ಕೆ ಒಳಗಾಗುವುದನ್ನು ಅವಲಂಬಿಸಿವೆ ಎಂದು ತೀರ್ಮಾನಿಸಿದೆ. ಹೀಗಾಗಿ, ಗರ್ಭಾವಸ್ಥೆಯಲ್ಲಿ ಒತ್ತಡವನ್ನು ಕಡಿಮೆ ಮಾಡಲು ಒತ್ತಡವನ್ನು ಅಥವಾ ಒತ್ತಡದ ಕಾರಣವನ್ನು ಗುರುತಿಸುವುದು ಮುಖ್ಯವಾಗಿದೆ.

ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮಾರ್ಗಗಳು:

ನಿಯಮಿತ ಪ್ರಸವಪೂರ್ವ ವ್ಯಾಯಾಮದ ಅವಧಿಗಳಿಗೆ ಹಾಜರಾಗುವುದರಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಲವಾದ ಸ್ನಾಯುಗಳು, ನಿಮಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಗರ್ಭಧಾರಣೆಯ ಸಂಬಂಧಿತ ಮಸ್ಕ್ಯುಲೋಸ್ಕೆಲಿಟಲ್ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಎಂಡಾರ್ಫಿನ್ ಹಾರ್ಮೋನ್ ಸ್ರವಿಸುವುದರಿಂದ ವ್ಯಾಯಾಮವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದು ವಿಶ್ರಾಂತಿಯನ್ನು ಪ್ರೇರೇಪಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಉತ್ತಮ ಬೆಂಬಲ, ಒಳ್ಳೆಯ ಕುಟುಂಬ ಅಥವಾ ಆಪ್ತ ಸ್ನೇಹಿತರನ್ನು ಹೊಂದಿರುವ ನೀವು ನಿಮ್ಮ ಅನುಮಾನಗಳನ್ನು ಮತ್ತು ಭಯಗಳನ್ನು ಅವರಲ್ಲಿ ಹಂಚಿಕೊಳ್ಳಬಹುದು.

ನಿಮ್ಮ ಬೆಸ್ಟ್​ ಫ್ರೆಂಡ್​, ಸಹೋದರಿ, ತಾಯಿ ಅಥವಾ ನಿಮ್ಮ ಪತಿ ಜೊತೆಗೆ ಹೆರಿಗೆ ಶಿಕ್ಷಣ ತರಗತಿಗಳಿಗೆ ಹಾಜರಾಗಿ. ಈ ಹೆರಿಗೆಯ ಶಿಕ್ಷಣವು ಗರ್ಭಿಣಿಯರಿಗೆ ಗರ್ಭಧಾರಣೆ, ಹೆರಿಗೆ, ಹೆರಿಗೆಯ ನಂತರ ನವಜಾತ ಶಿಶುವಿನ ಆರೈಕೆಯನ್ನು ಮಾಡಲು ಆತ್ಮವಿಶ್ವಾಸ ಮೂಡಿಸಲು ಸಹಾಯ ಮಾಡುತ್ತದೆ.

ಹೊಸ ಹವ್ಯಾಸಗಳನ್ನು ಪ್ರಯತ್ನಿಸಿ ಅಥವಾ ಹೊಲಿಗೆ, ಕ್ರಾಸ್​-ಹೊಲಿಗೆ, ಪೇಪರ್​ ವರ್ಕಿಂಗ್​, ಬೇಕಿಂಗ್, ಓದುವುದು, ಬರೆಯುವುದು ಇತ್ಯಾದಿಗಳಂತಹ ನಿಮ್ಮ ನೆಚ್ಚಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಮಗುವಿನೊಂದಿಗೆ ಹೆಚ್ಚು ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ. ಅಲ್ಲದೆ, ಹೊಸ ಹವ್ಯಾಸಗಳು ನಿಮ್ಮ ಒತ್ತಡ ಮತ್ತು ಚಿಂತೆಗಳು ಹತ್ತಿರ ಬರದಂತೆ ತಡೆಯುತ್ತವೆ.

ಇದರ ಹೊರತಾಗಿ, ಲ್ಯಾಮೇಜ್ ಹೆರಿಗೆ ಶಿಕ್ಷಣವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ ಮತ್ತು ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಸ್ವಾಭಾವಿಕವಾಗಿ ಜನ್ಮ ನೀಡುವ( Normal delivery) ಸಾಮರ್ಥ್ಯದ ಬಗ್ಗೆ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು Lamaze ಗುರಿಯಾಗಿದೆ.

Lamaze ಹೆರಿಗೆಯ ಶಿಕ್ಷಣ ತರಗತಿಗೆ ಹಾಜರಾಗುವುದು ನಿಮಗೆ ಹೇಗೆ ಪ್ರಯೋಜನಕಾರಿಯಾಗಿದೆ?

Lamaze ತರಗತಿಯಲ್ಲಿ ನೀವು ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆಯ ನಂತರದ ಆರೈಕೆಯ ಬಗ್ಗೆ ಹೊಸ ಮತ್ತು ಆಸಕ್ತಿದಾಯಕ ವಿಷಯಗಳನ್ನು ಕಲಿಯುವಿರಿ. ನಿಮ್ಮ ಮಗು ಮತ್ತು ಸಂಗಾತಿಯೊಂದಿಗೆ ಹೇಗೆ ಉತ್ತಮ ಸಂಪರ್ಕ ಸಾಧಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.

ಕೆಲವು ಸರಳ ಸಾಧನಗಳ ಬಳಕೆಯಂತಹ ತಂತ್ರಗಳ ಮೂಲಕ ಗರ್ಭಿಣಿಯರು ವಿಶ್ರಾಂತಿ, ಚಲನೆಗಳು, ಮಸಾಜ್, ಉಸಿರಾಟ, ಒತ್ತಡ ಬಿಡುಗಡೆ, ಮೂವ್​ಮೆಂಟ್​ ಇಂತವುಗಳನ್ನು ನಿಭಾಯಿಸಲು ಸರಳವಾದ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು, ಕಲಿಯಲು ಮತ್ತು ಅನ್ವೇಷಿಸಲು ಇದು ಸಹಾಯ ಮಾಡುತ್ತದೆ.

Lamaze ಕ್ಲಾಸ್​​ ನಿಮಗೆ ವಿವಿಧ ರೀತಿಯ ಭಯವನ್ನು ಪರಿಹರಿಸಲು ಮತ್ತು ಚರ್ಚಿಸಲು ಸಮಯವನ್ನು ನೀಡುತ್ತದೆ.ಹೆರಿಗೆಯ ಶಿಕ್ಷಣತಜ್ಞರು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಮತ್ತು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಪುರಾವೆ ಆಧಾರಿತ ಸಂಶೋಧನೆಗಳೊಂದಿಗೆ ಉತ್ತರಿಸುತ್ತಾರೆ.ತಮ್ಮ ಭಯ ಹಾಗೂ ಮಗುವಿನ ಕಾಳಜಿ ಕುರಿತು ಚರ್ಚಿಸುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.

ನವಜಾತ ಶಿಶುವನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ನೀವು ಬಹಳಷ್ಟು ಕಲಿಯುವಿರಿ.ಅಲ್ಲದೆ, ಗರ್ಭಧಾರಣೆ ಮತ್ತು ಹೆರಿಗೆಯ ಕುರಿತಾದ ಪೂರ್ವಗ್ರಹ ಪೀಡಿತ ತಪ್ಪುಕಲ್ಪನೆಗಳನ್ನು ಹೊರಹಾಕಿ ಸತ್ಯಗಳನ್ನು ಚರ್ಚಿಸಲಾಗುತ್ತದೆ.

Lamaze ಹೆರಿಗೆಯ ಶಿಕ್ಷಣ ತರಗತಿಯು ಒಂದು ಗುಂಪು ಸೆಷನ್ ಆಗಿರಬಹುದು, ಒಂದು ಪ್ರತ್ಯೇಕವಾದ ಸೆಷನ್ ಆಗಿರಬಹುದು ಅಥವಾ ಆಫ್‌ಲೈನ್ ಅಥವಾ ಆನ್‌ಲೈನ್ ಕ್ಲಾಸ್​ ಆಗಿರಬಹುದು. ಮೂರನೇ ತ್ರೈಮಾಸಿಕದಲ್ಲಿ ಹೆರಿಗೆಯ ಶಿಕ್ಷಣವನ್ನು ಪ್ರೋತ್ಸಾಹಿಸಲಾಗುತ್ತದೆ, ಆದರೆ ಗರ್ಭಿಣಿಯರು 2 ನೇ ತ್ರೈಮಾಸಿಕದಿಂದಲೇ ಸೆಷನ್‌ಗಳಿಗೆ ಹಾಜರಾಗುವುದು ಉತ್ತಮ.

ಎಲ್ಲಾ ಮಾಹಿತಿ ಮತ್ತು ಆರೋಗ್ಯಪೂರ್ಣ ಚರ್ಚೆಗಳೊಂದಿಗೆ ಗರ್ಭಿಣಿ ತನ್ನ ಯೋಚನೆಗಳನ್ನು ಪರಿಹರಿಸಬಹುದು ಮತ್ತು ಆರೋಗ್ಯಕರ ಗರ್ಭಧಾರಣೆಗಾಗಿ ಹೇಗೆ ವಿಶ್ರಾಂತಿ ಪಡೆಯಬೇಕೆಂದು ಕಲಿಯಬಹುದು.ನಿಯಂತ್ರಿತ ಉಸಿರಾಟ ಮತ್ತು ಮಸಾಜ್‌ನಂತಹ ನೈಸರ್ಗಿಕ ನೋವು ನಿರ್ವಹಣೆ ತಂತ್ರಗಳನ್ನು ಸಹ ನೀವು ಈ ತರಗತಿಯಲ್ಲಿ ಕಲಿಯುವಿರಿ.ಮೂಲತಃ ಈ ತರಗತಿ ಗರ್ಭಧಾರಣೆ ಮತ್ತು ಹೆರಿಗೆಯ ಬಗ್ಗೆ ಎಲ್ಲವನ್ನೂ ಒಳಗೊಂಡಿರುತ್ತದೆ

(Lalchawimawi Sanate, Senior Physiotherapist & Lamaze Certified Childbirth Educator, Cloudnine Group of Hospitals, Sahkarnagar, Bengaluru)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.