ಪಾಟ್ನಾ (ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೇಶದ ರಾಜಕೀಯದ ಮೇಲೆ ಕಣ್ಣಿಟ್ಟಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರಲು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ಮಾಡಿದರು. ಇನ್ನೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಬೇಕಿದೆ.
ಸಿಎಂ ನಿತೀಶ್‌ಗಿದೆ ದೊಡ್ಡ ಸವಾಲು: ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಇಂದು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ನಂತರ ಲಕ್ನೋಗೆ ತೆರಳಲಿದ್ದಾರೆ. ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವೂ ಇದೆ. ಒಂದೆಡೆ ಬಿಜೆಪಿ ಮುಕ್ತ ಭಾರತವಾಗಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಪ್ರತಿಪಾದಿಸುತ್ತಿದ್ದಾರೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಬಿಜೆಪಿ ಮುಕ್ತ ಭಾರತವನ್ನು ಬಯಸುತ್ತಾರೆ.
ಆದರೆ, ಅದಕ್ಕಾಗಿ ಕಾಂಗ್ರೆಸ್ ಜೊತೆ ಹೋಗಲು ಸಿದ್ಧರಿಲ್ಲ. ಕಳೆದ ತಿಂಗಳು ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿ ಅವರನ್ನು ಕಾಳಿಘಾಟ್‌ನಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಪ್ರತಿಪಾದಿಸಿದ್ದರು. ಇದರೊಂದಿಗೆ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಳ್ಳುವ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ.
ಮುಂದುವರಿದ ತೀವ್ರ ವಾಗ್ದಾಳಿ: ಒಂದೆಡೆ ಬಿಜೆಪಿ ತೆಗಳಿಕೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರ ಪಠಿಸುವುದಲ್ಲಿ ನಿರತರಾಗಿದ್ದಾರೆ. ಬಿಹಾರದಿಂದ ಆರಂಭವಾಗಿರುವ ಕೇಂದ್ರದ ಹಾಲಿ ಸರ್ಕಾರದ ಪ್ರತಿಪಕ್ಷಗಳ ಒಗ್ಗಟ್ಟಿನ ಅಭಿಯಾನವನ್ನು ಇಡೀ ದೇಶದಲ್ಲಿ ಮಾಡಲಾಗುವುದು ಎಂದು ಜೆಡಿಯು ಮುಖ್ಯ ವಕ್ತಾರ ನೀರಜ್ ಕುಮಾರ್ ಹೇಳಿದ್ದಾರೆ. ಮತ್ತೊಂದೆಡೆ, ಬಿಹಾರದಲ್ಲಿ ವಿಪಕ್ಷಗಳ ಒಗ್ಗಟ್ಟು ಹೇಗೆ ನಡೆಯುತ್ತಿದೆಯೋ, ಅದೇ ರೀತಿ ರೀತಿಯ ವಿಪಕ್ಷಗಳ ಒಗ್ಗಟ್ಟು ಕೂಡಾ ದೇಶಾದ್ಯಂತ ರಂಗು ಪಡೆದಿದೆ ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ತಿಳಿಸಿದ್ದಾರೆ.
ಮೋದಿ ಸರ್ಕಾರ ಕಿತ್ತೊಗೆಯಲಾಗುವುದು -ತಿವಾರಿ: "2024ರಲ್ಲಿ ಬಿಜೆಪಿ ಮುಕ್ತ ಭಾರತ ಮಾಡುವ ಪ್ರತಿಜ್ಞೆ ಮಾಡುವ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಚಾರದಲ್ಲಿ ನಿತೀಶ್, ತೇಜಸ್ವಿ ಅವರು ತೊಡಗಿಸಿಕೊಂಡಿರುವ ರೀತಿ. ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರೊಂದಿಗೆ ಸಿಎಂ ನಿತೀಶ್ ಭೇಟಿಯು ಫಲಿತಾಂಶ ತರಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಈ ಒಗ್ಗಟ್ಟು ಪ್ರಸ್ತುತ ಕೇಂದ್ರದಲ್ಲಿರುವ ಮೋದಿ ಸರ್ಕಾರವನ್ನು ಕಿತ್ತೊಗೆಯಲಾಗುವುದು'' ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದರು.
"ಬಿಜೆಪಿಯೇತರ ರಾಜಕೀಯ ಪಕ್ಷಗಳು ಹಾಗೂ ಪ್ರತಿಪಕ್ಷಗಳ ಒಗ್ಗಟ್ಟಿನ ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. 2024ರಲ್ಲಿ ದೇಶದಲ್ಲಿ ಮತ್ತೊಮ್ಮೆ ಪ್ರತಿಪಕ್ಷಗಳ ಒಗ್ಗಟ್ಟು ಪ್ರಬಲವಾಗಲಿದೆ ಹಾಗೂ ಕೇಂದ್ರದಲ್ಲಿ ಮೋದಿ ಸರ್ಕಾರ ಉರುಳಿಸಲಿದೆ" ಎಂದು ಕಾಂಗ್ರೆಸ್ ವಕ್ತಾರ ರಾಜೇಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾಗಿ ಕೆಲಸ ಮಾಡಲು ಸಿದ್ಧ-ಮಮತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದರು. ಬಿಜೆಪಿಯನ್ನು ಸೋಲಿಸಲು ಅಹಂ ಬಿಟ್ಟು ಒಟ್ಟಾಗಿ ಕೆಲಸ ಮಾಡಲು ಸಿದ್ಧ ಎಂದು ಮಮತಾ ಹೇಳಿದ್ದಾರೆ.
![Opposition Unity](https://etvbharatimages.akamaized.net/etvbharat/prod-images/_24042023152221_2404f_1682329941_514_2404newsroom_1682330663_566.jpg)
ನಿತೀಶ್, ತೇಜಸ್ವಿ, ಬ್ಯಾನರ್ಜಿ ಸಭೆ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಗೂ ಮಮತಾ ಬ್ಯಾನರ್ಜಿ ಜೊತೆಗೆ ಸುಮಾರು 30 ನಿಮಿಷಗಳ ಕಾಲ ಸಭೆ ನಡೆಸಿದರು. ಬಳಿಕ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಮತ್ತು ತೇಜಸ್ವಿ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿದರು.
''24ನೇ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳ ಶಕ್ತಿಗಳನ್ನು ಒಗ್ಗೂಡಿಸುವುದು ಮುಖ್ಯ'' ಎಂದು ನಿತೀಶ್ ಕುಮಾರ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ''ಸಭೆಯಲ್ಲಿ ಒಳ್ಳೆಯ ಚರ್ಚೆ ನಡೆದಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲರೂ ಒಗ್ಗಟ್ಟಾಗಿ ತಯಾರಿ ನಡೆಸಬೇಕು ಎಂದು ಇಂದು ಚರ್ಚಿಸಿದ್ದೇವೆ. ಎಲ್ಲರೂ ಒಟ್ಟಾಗಿ ಕುಳಿತು ಮುಂದಿನ ಕ್ರಮವನ್ನು ನಿರ್ಧರಿಸೋಣ, ಏನಾಗುತ್ತದೆಯೋ ಅದು ದೇಶದ ಒಳಿತಿಗಾಗಿ ಇರುತ್ತದೆ'' ಎಂದು ಅವರು ಹೇಳಿದರು.
ಮೈತ್ರಿಕೂಟದ ಮೊದಲ ಸಭೆ ಬಿಹಾರದಲ್ಲಿ ನಡೆಯಬೇಕು- ಮಮತಾ: ಬಿಹಾರದ ಮುಖ್ಯಮಂತ್ರಿ ಮಾತುಗಳಿಗೆ ಮಮತಾ ಬ್ಯಾನರ್ಜಿ ಸಹಮತ ವ್ಯಕ್ತಪಡಿಸಿದರು, ''ಇದೇ ಮಾತನ್ನು ಈ ಹಿಂದೆಯೂ ಹೇಳಿದ್ದೆ, ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ ಅಹಂ ಬಿಟ್ಟು ಒಂದೇ ವೇದಿಕೆಗೆ ಬರಲು ಸಿದ್ಧವಾಗಿದೆ'' ಎಂದು ಮಮತಾ ಹೇಳಿದ್ದಾರೆ. "ಜೈಪ್ರಕಾಶ್ ನಾರಾಯಣ್ ಅವರು ಬಿಹಾರದಿಂದ ಚಳವಳಿ ಆರಂಭಿಸಬೇಕೆಂದು ನಾನು ನಿತೀಶ್‌ಜಿಗೆ ಮನವಿ ಮಾಡಿದ್ದೇನೆ. ಈ ಸಂದರ್ಭದಲ್ಲಿ ಮೈತ್ರಿಕೂಟದ ಮೊದಲ ಸಭೆಯನ್ನು ಬಿಹಾರದಲ್ಲಿ ನಡೆಸಬೇಕು. ಅಲ್ಲಿ ಕುಳಿತು ದೇಶೀಯವಾಗಿ ಏನು ಮಾಡಬೇಕು ಅಥವಾ ಎಲ್ಲಿಗೆ ಹೋಗಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಪ್ರಣಾಳಿಕೆ ಅಥವಾ ಉಳಿದೆಲ್ಲವೂ ನಂತರ ಆಗಲಿದೆ. ಮೊದಲು ಈ ಸಂದೇಶವನ್ನು ದೇಶದ ಜನತೆಗೆ ತಿಳಿಸುವ ಅವಶ್ಯಕತೆಯಿದೆ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಮಮತಾ ತಿಳಿಸಿದರು.
''ಬಿಜೆಪಿ ಶೂನ್ಯಕ್ಕೆ ತಲುಪಬೇಕು. ಏನೂ ಮಾಡದೇ ಕೇವಲ ಮಾಧ್ಯಮಗಳ ಬೆಂಬಲದಿಂದ ಬಿಜೆಪಿ ಹೀರೋ ಆಗಿದೆ. ಸುಳ್ಳು ವೀಡಿಯೋ ಸೃಷ್ಟಿಸಿ, ಸುಳ್ಳು ಹಬ್ಬಿಸಿ, ಗೂಂಡಾಗಿರಿ ಮಾಡಿ ಅಧಿಕಾರದಲ್ಲಿ ಇರಲು ಬಯಸುತ್ತಿದೆ. ಇದು ಹೀಗೆ ಮುಂದುವರೆಯಲು ಸಾಧ್ಯವಿಲ್ಲ. ಇದಕ್ಕಾಗಿ ಎಲ್ಲರೊಂದಿಗೆ ಮಾತನಾಡುತ್ತಿದ್ದೇನೆ. ನಾವು ಒಟ್ಟಿಗೆ ನಡೆಯುತ್ತೇವೆ" ಎಂದರು.
ಇದನ್ನೂ ಓದಿ: ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ; 242 ಹುದ್ದೆಗಳಿಗೆ ಅರ್ಜಿ ಆಹ್ವಾನ