ETV Bharat / bharat

ಕೇರಳ ವಿಧಾನಸಭೆ ಸ್ಪೀಕರ್ ರಾಜೀನಾಮೆಗೆ ಒತ್ತಾಯ; ರಾಜ್ಯಪಾಲರ ಭಾಷಣಕ್ಕೆ ಬಹಿಷ್ಕಾರ

ಚಿನ್ನದ ಕಳ್ಳಸಾಗಣೆ ಮತ್ತು ಡಾಲರ್ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ರಾಜೀನಾಮೆ ನೀಡಬೇಕೆಂದು ಯುಡಿಎಫ್​ ಒತ್ತಾಯಿಸಿದೆ.

Opposition boycotts Governor's policy address in Ker Assembly
ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರ ನೀತಿ ಭಾಷಣವನ್ನು ಬಹಿಷ್ಕರಿಸಿದ ಪ್ರತಿಪಕ್ಷಗಳು
author img

By

Published : Jan 8, 2021, 3:33 PM IST

ತಿರುವನಂತಪುರಂ: ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರ ರಾಜೀನಾಮೆಗೆ ಒತ್ತಾಯಿಸಿ, ಬಜೆಟ್ ಅಧಿವೇಶನದ ಮೊದಲ ದಿನದಂದು ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನೀತಿ ಭಾಷಣವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹಿಷ್ಕರಿಸಿದೆ.

ಬ್ಯಾನರ್ ಮತ್ತು ಪೋಸ್ಟರ್‌ಗಳೊಂದಿಗೆ ಬಂದ ಪ್ರತಿಪಕ್ಷದ ಶಾಸಕರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ವಿರುದ್ಧ ಘೋಷಣೆ ಕೂಗಿದರು.

ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರ ನೀತಿ ಭಾಷಣವನ್ನು ಬಹಿಷ್ಕರಿಸಿದ ಪ್ರತಿಪಕ್ಷಗಳು

ಘೋಷಣೆಗಳ ಹೊರತಾಗಿಯೂ, ರಾಜ್ಯಪಾಲರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಆದರೂ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರೆಸಿದರು. ಇದರಿಂದ ಅಸಮಾಧಾನಗೊಂಡ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಪೂರೈಸಲು ಸಹಕರಿಸುವಂತೆ ಮೂರು ಬಾರಿ ವಿರೋಧ ಪಕ್ಷದ ಸದಸ್ಯರನ್ನು ಕೇಳಿದರು. ಆದರೆ ಅವರ ಮನವಿಗೆ ಯಾರೊಬ್ಬರು ಕಿವಿಗೊಡಲಿಲ್ಲ. ಬಳಿಕ ಪ್ರತಿಪಕ್ಷದ ಶಾಸಕರು ಸಭಾಂಗಣದಿಂದ ಹೊರನಡೆದು, ಪೋರ್ಟಲ್‌ನಲ್ಲಿ ಧರಣಿ ನಡೆಸಿ, ಘೋಷಣೆ ಕೂಗುತ್ತಾ, ಬ್ಯಾನರ್‌ ಮತ್ತು ಪೋಸ್ಟರ್‌ ಪ್ರದರ್ಶಿಸಿದರು.

ಏತನ್ಮಧ್ಯೆ, ತಮ್ಮ ಭಾಷಣವನ್ನು ಮುಂದುವರೆಸಿದ ರಾಜ್ಯಪಾಲರು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಲೂ ಎಲ್​ಡಿಎಫ್ ಸರ್ಕಾರ ಸವಾಲುಗಳನ್ನು ಎದುರಿಸುತ್ತಿದೆ ಎಂದು ವಿಜಯನ್ ಸರ್ಕಾರ ಕೈಗೊಂಡ ವಿವಿಧ ಜನಪರ ಕ್ರಮಗಳನ್ನು ವಿವರಿಸಿದರು. ಲಾಕ್​ಡೌನ್ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ರಾಜ್ಯವು ಅಗತ್ಯವಿರುವವರಿಗೆ ಸಮುದಾಯ ಅಡುಗೆ ಮನೆಗಳನ್ನು ಪ್ರಾರಂಭಿಸಿತು. 20,000 ಕೋಟಿ ರೂ.ಗಳ ಸಾಂಕ್ರಾಮಿಕ ಪರಿಹಾರ ಪ್ಯಾಕೇಜ್ ಘೋಷಿಸಿದ ಮೊದಲ ರಾಜ್ಯ ಕೇರಳ. ರಾಜ್ಯದ ಜನಸಂಖ್ಯೆಯ ಸುಮಾರು 9 ಪ್ರತಿಶತದಷ್ಟು ಜನರು ವಿದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೋವಿಡ್-19 ರ ಪ್ರಭಾವದಿಂದಾಗಿ ಸುಮಾರು ಆರು ಲಕ್ಷ ವಲಸಿಗರು ಮರಳುತ್ತಿದ್ದಾರೆ. ಇದು ಹಣ ರವಾನೆಗೆ ಅಡ್ಡಿಯಾಗುತ್ತದೆ ಮತ್ತು ಇದು ರಾಜ್ಯದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ವಿರುದ್ಧ ಯುಡಿಎಫ್​ ಅಸಮಾಧಾನ: ಚಿನ್ನದ ಕಳ್ಳಸಾಗಣೆ ಮತ್ತು ಡಾಲರ್ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ರಾಜೀನಾಮೆ ನೀಡಬೇಕೆಂದು ಯುಡಿಎಫ್​ ಒತ್ತಾಯಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.