ETV Bharat / bharat

Pegasus ತನಿಖೆಗೆ ಆಗ್ರಹಿಸಿ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಗೆ ಮುಂದಾಗಲಿವೆ ವಿಪಕ್ಷಗಳು

ಉಭಯ ಸದನದಲ್ಲೀಗ ಪೆಗಾಸಸ್​​, ಕೃಷಿ ಕಾಯ್ದೆ ಕುರಿತ ಚರ್ಚೆ ಮತ್ತೆ ಗದ್ದಲಕ್ಕೆ ಕಾರಣವಾಗುವ ಸೂಚನೆ ಸಿಕ್ಕಿದೆ. ಪೆಗಾಸಸ್ ವಿವಾದ ಕುರಿತು ತನಿಖೆ ನಡೆಸಲು ಆದೇಶಿಸುವಂತೆ ಪಟ್ಟು ಹಿಡಿದಿರುವ ವಿಪಕ್ಷಗಳು ಇಂದೂ ಸಹ ತಮ್ಮ ತಂತ್ರಗಾರಿಕೆ ಮುಂದುವರಿಸುವ ಸಾಧ್ಯತೆ ಇದೆ.

ಪೆಗಾಸಸ್ ತನಿಖೆ
ಪೆಗಾಸಸ್ ತನಿಖೆ
author img

By

Published : Jul 28, 2021, 7:35 AM IST

ನವದೆಹಲಿ: ಮಾನ್ಸೂನ್ ಅಧಿವೇಶನದಲ್ಲಿ ಪೆಗಾಸಸ್​ ಬೇಹುಗಾರಿಕೆ ಪ್ರಕರಣ ಸದ್ದು ಮಾಡಿತ್ತಿದೆ. ಸದನ ಆರಂಭಗೊಂಡ ದಿನದಿಂದಲೂ ಪೆಗಾಸಸ್ ಪ್ರಕರಣದಿಂದಲೇ ಅಧಿವೇಶನ ಗಲಾಟೆ ಗದ್ದಲದಿಂದ ಮುಂದೂಡಲ್ಪಡುತ್ತಿದೆ. ಜೊತೆಗೆ ಆಡಳಿತ ಪಕ್ಷ ವಿಪಕ್ಷಗಳ ಆರೋಪಗಳಿಗೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಪ್ರತಿಪಕ್ಷಗಳು ಮತ್ತೆ ಸದನದಲ್ಲಿ ಕೋಲಾಹಲ ಸೃಷ್ಟಿಸುವ ಸೂಚನೆ ಸಿಕ್ಕಿದೆ.

ಈ ಬಗ್ಗೆ ನಿನ್ನೆ ಸಂಜೆ ಸಭೆ ನಡೆಸಿರುವ ಸದಸ್ಯರ ಇಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿವೆ. ಇಂದು ಸದನದಲ್ಲಿ ಪೆಗಾಸಸ್ ಕುರಿತು ತನಿಖೆಗೆ ಆದೇಶಿಸಿ ನಿಲುವಳಿ ಸೂಚನೆಗೆ ಮುಂದಾಗಲಿದ್ದೇವೆ ಎಂದು ಕೆಳಮನೆ ಕಾಂಗ್ರೆಸ್ ವಿಪ್ ಕೆ.ಸುರೇಶ್ ತಿಳಿಸಿದ್ದಾರೆ.

ಸದನದಲ್ಲಿ ಕಲಾಪ ನಡೆಯದೇ ಮುಂದೂಡಲ್ಪಡುತ್ತಿದ್ದು, ವಿಪಕ್ಷವು ಪೆಗಾಸಸ್ ಹಾಗೂ ಕೃಷಿ ನೀತಿ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿದೆ. ಸರ್ಕಾರ ಸಂಸತ್ತಿನೊಳಗೆ ಈ ವಿವಾದಗಳ ಕುರಿತು ಈ ಕುರಿತ ಚರ್ಚೆಗೆ ಸಿದ್ಧವಾಗಿಲ್ಲ. ಆ ಬಗ್ಗೆ ಆಸಕ್ತಿಯೂ ಇಲ್ಲ. ಹೀಗಾಗಿ ನಾವು ಸದನದ ಹೊರಗೂ ಹೋರಾಟ ಮಾಡುತ್ತೇವೆ. ಸರ್ಕಾರ ಯಾವುದನ್ನು ಮುಚ್ಚಿಡಲು ಬಯಸಲ್ಲ ಎಂದರೆ ಇಂದೇ ಚರ್ಚೆಗೆ ಆಗಮಿಸಲಿ ಎಂದು ಆಗ್ರಹಿಸಿವೆ.

ಇದನ್ನೂ ಓದಿ: SCO ಸಮಾವೇಶ: ಭದ್ರತಾ ಸವಾಲುಗಳ ಬಗ್ಗೆ ದನಿ ಎತ್ತಿದ ರಾಜನಾಥ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.