ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ 68 ಸದಸ್ಯ ಬಲದ ವಿಧಾನಸಭೆಯಲ್ಲಿ ಇನ್ಮುಂದೆ ಓರ್ವ ಮಹಿಳೆ ಮಾತ್ರ ಇರಲಿದ್ದಾರೆ. ನವೆಂಬರ್ 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಾಧನೆ ನೀರಸವಾಗಿತ್ತು. ಅಲ್ಲದೇ ಕಣದಲ್ಲಿದ್ದ 24 ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಗೆದ್ದಿದ್ದಾರೆ.
ಬಿಜೆಪಿಯಿಂದ ಆರು, ಆಮ್ ಆದ್ಮಿ ಪಕ್ಷ (ಎಎಪಿ)ದಿಂದ 5 ಮತ್ತು ಕಾಂಗ್ರೆಸ್ ಮೂರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆದರೆ, ಕೊನೆಗೆ ಬಿಜೆಪಿಯ ರೀನಾ ಕಶ್ಯಪ್ ಮಾತ್ರ ಚುನಾವಣೆಯಲ್ಲಿ ಗೆದ್ದಿದ್ದಾರೆ. 2021 ರಲ್ಲಿ ಪಚ್ಚಾಡ್‌ನ (SC) ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದಿದ್ದ ಕಶ್ಯಪ್ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ: ಕೆಲವೆಡೆ ಕುಟುಂಬಸ್ಥರಲ್ಲೇ ಸ್ಪರ್ಧೆ, ತಮ್ಮವರಿಂದಲೇ ಸೋಲು!
2017ರ ವಿಧಾನಸಭೆ ಚುನಾವಣೆಯಲ್ಲಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಸೋತವರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆ ಮತ್ತು ಕಂಗ್ರಾದ ಶಾಹಪುರ್‌ನಿಂದ ನಾಲ್ಕು ಬಾರಿ ಶಾಸಕರಾದ ಸರ್ವೀನ್ ಚೌಧರಿ ಸೇರಿದ್ದಾರೆ. ರಾಜ್ಯದ ಒಟ್ಟು ಮತದಾರರಲ್ಲಿ ಶೇ.49ರಷ್ಟು ಮಹಿಳೆಯರಿದ್ದಾರೆ.