ETV Bharat / bharat

ಮನಸ್ಸಿಲ್ಲದ ಏಕೈಕ ಸರ್ಕಾರ ಅಂದ್ರೆ ಅದು ಭಾರತ ಸರ್ಕಾರ: ಚಿದಂಬರಂ ಕಿಡಿಕಿಡಿ

ಪೆಗಾಸಸ್​​ ಕಣ್ಗಾವಲು ತಂತ್ರಾಂಶದ ಆರೋಪದ ವಿಚಾರವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Chidambaram
Chidambaram
author img

By

Published : Jul 26, 2021, 1:58 PM IST

ನವದೆಹಲಿ: ಪೆಗಾಸಸ್​​ ಕಣ್ಗಾವಲು ತಂತ್ರಾಂಶದ ಆರೋಪದ ಬಗ್ಗೆ ಇಸ್ರೇಲ್​ ಪ್ರಧಾನಿ ನಫ್ತಾಲಿ ಜತೆ ಫ್ರಾನ್ಸ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ ಮಾತಾಡಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೆಗಾಸಸ್ ಬಗ್ಗೆ ಫ್ರಾನ್ಸ್​​​​​ ಸರ್ಕಾರ, ಇಸ್ರೇಲ್​ ಜತೆ ಮಾತುಕತೆ ನಡೆಸಿದೆ. ಆದರೆ, ಮೋದಿ ಸರ್ಕಾರ ಮನಸ್ಸಿಲ್ಲದ ಸರ್ಕಾರವಾಗಿದ್ದು, ಯಾವುದೇ ಮಾತುಕತೆ ನಡೆಸಿಲ್ಲ ಎಂದು ಕಿಡಿಕಾರಿದ್ದಾರೆ.

ಮೊರಾಕೊದ ಭದ್ರತಾ ಪಡೆಗಳು ಪೆಗಾಸಸ್ ಸ್ಪೈವೇರ್ ಬಳಸಿ ನನ್ನ ಮೊಬೈಲ್​ ಹ್ಯಾಕ್ ಮಾಡಿರಬಹುದು ಎಂಬ ವರದಿ ಕುರಿತು ಫ್ರೆಂಚ್ ಅಧ್ಯಕ್ಷ, ಇಸ್ರೇಲ್​ ಜತೆ ಮಾತುಕತೆ ನಡೆಸಿದ್ದಾರೆ. ಮ್ಯಾಕ್ರನ್ ಜುಲೈ 22 ರಂದು ಬೆನೆಟ್​ಗೆ ಕರೆ ಮಾಡಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ ಎಂದು ಇಸ್ರೇಲ್​ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ವರದಿ ಕುರಿತು ಟ್ವೀಟ್ ಮಾಡಿರುವ ಪಿ.ಚಿದಂಬರಂ, ಪೆಗಾಸಸ್​​ ಬಗ್ಗೆ ಯಾವುದೇ ತನಿಖೆ ನಡೆಸದ, ಮನಸ್ಸಿಲ್ಲದ ಏಕೈಕ ಸರ್ಕಾರ ನಮ್ಮ ಭಾರತ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.

  • एकमात्र सरकार जिसे कोई फिक्र नहीं है वह भारत सरकार है!

    क्या ऐसा इसलिए है क्योंकि सरकार जासूसी के बारे में पूरी तरह से अवगत थी और उसे इज़राइल या एनएसओ समूह से किसी और जानकारी की आवश्यकता नहीं है?

    — P. Chidambaram (@PChidambaram_IN) July 26, 2021 " class="align-text-top noRightClick twitterSection" data=" ">

ಕೇಂದ್ರ ಸರ್ಕಾರವು, ಪೆಗಾಸಸ್​​ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕು ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಒತ್ತಾಯಿಸಬೇಕೆಂದು ಪಿ.ಚಿದಂಬರಂ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Pegasus ಮೂಲಕ 1,400 WhatsApp​ ಬಳಕೆದಾರರ ಮಾಹಿತಿ ಸೋರಿಕೆಯಾಗಿತ್ತು: ಸಿಇಒ ವಿಲ್​​ ಕ್ಯಾಥ್​ಕಾರ್ಟ್

ಪೆಗಾಸಸ್​​ ಆರೋಪದ ಬಗ್ಗೆ ಪ್ರಧಾನಿ ಮೋದಿ ಸಂಸತ್​ನಲ್ಲಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.