ETV Bharat / bharat

ಈ ವರ್ಷ ಸರ್ಕಾರಿ ಸ್ವಾಮ್ಯದ ತೈಲ-ನೈಸರ್ಗಿಕ ಅನಿಲ ನಿಗಮಕ್ಕೆ 40,305 ಕೋಟಿ ರೂ. ನಿವ್ವಳ ಲಾಭ!

2021ರ ಏಪ್ರಿಲ್​ನಿಂದ 2022ರ ಮಾರ್ಚ್​​ನ ಆರ್ಥಿಕ ವರ್ಷದಲ್ಲಿ ಶೇ.258ರಷ್ಟು ಲಾಭವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಒಎನ್​​ಜಿಸಿ 40,305 ಕೋಟಿ ರೂ.ಗಳ ಲಾಭ ಸಾಧಿಸಿದೆ.

State owned Oil and Natural Gas Corporation get record net profit
ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ ಭರ್ಜರಿ ಲಾಭ
author img

By

Published : May 29, 2022, 1:22 PM IST

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್​ (ಒಎನ್​​ಜಿಸಿ) ದಾಖಲೆಯ 40,305 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಬಳಿಕ ಭಾರತದ ಎರಡನೇ ಅತಿ ಹೆಚ್ಚು ಲಾಭದಾಯಕ ಕಂಪನಿ ಎಂಬ ಹೆಗ್ಗಳಿಕೆ ಗಳಿಸಿದೆ.

ಕಳೆದ ವರ್ಷ ಒಎನ್​​ಜಿಸಿ ಕೇವಲ 11,246.44 ಕೋಟಿ ರೂ. ಲಾಭದಲ್ಲಿತ್ತು. ಆದರೆ, ತಾನು ಉತ್ಪಾದಿಸುವ ಕಚ್ಚಾ ತೈಲಕ್ಕೆ ಉತ್ತಮ ಬೆಲೆ ಬಂದ ಕಾರಣ 2021ರ ಏಪ್ರಿಲ್​ನಿಂದ 2022ರ ಮಾರ್ಚ್​​ನ ಆರ್ಥಿಕ ವರ್ಷದಲ್ಲಿ ಶೇ.258ರಷ್ಟು ಲಾಭಾಂಶ ಹೆಚ್ಚಿಸಿಕೊಂಡು 40,305 ಕೋಟಿ ರೂ.ಗಳ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಪ್ರತಿ ಬ್ಯಾರೆಲ್​​ ಕಚ್ಚಾ ತೈಲ ಉತ್ಪಾದನೆ ಮತ್ತು ಮಾರಾಟಕ್ಕೆ ಶೇ.42.78ರಷ್ಟು ನಿವ್ವಳ ಲಾಭ ಬಂದಿತ್ತು. ಆದರೆ, ಈ ವರ್ಷದಲ್ಲಿ ಪ್ರತಿ ಬ್ಯಾರೆಲ್​ಗೆ ಶೇ.76.62ರಷ್ಟು ಲಾಭ ಗಳಿಸಿದೆ.

ಅಲ್ಲದೇ, ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲೇ ಒಎನ್​​ಜಿಸಿ ಗಳಿಸಿದ ಅತ್ಯುತ್ತಮ ಲಾಭದ ಬೆಲೆ ಇದಾಗಿದೆ. ಇನ್ನು, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಪರಿಣಾಮ 14 ವರ್ಷಗಳ ನಂತರ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 139 ಯುಎಸ್​​ ಡಾಲರ್​ಗೆ ತಲುಪಿತ್ತು. ಅಚ್ಚರಿ ಎಂದರೆ 2008ರಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ ದಾಖಲೆಯ 147 ಯುಎಸ್​​ ಡಾಲರ್​ಗೆ ಮುಟ್ಟಿತ್ತು. ಆದರೆ, ಆಗ ಒಎನ್​​ಜಿಸಿ ತುಂಬಾ ಕೆಳಮಟ್ಟಕ್ಕೆ ಇಳಿದಿತ್ತು. ಯಾಕೆಂದರೆ, ಆಗ ವ್ಯಾಪಾರಿಗಳಿಗೆ ಸಬ್ಸಿಡಿ ದರದಲ್ಲಿ ಇಂಧನ ನೀಡಲಾಗಿತ್ತು. ಇದರಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆಯನ್ನು ತನ್ನ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ.

ಇನ್ನು, ರಿಲಯನ್ಸ್ ಇಂಡಸ್ಟ್ರೀಸ್ ಇದೇ ಆರ್ಥಿಕ ವರ್ಷದಲ್ಲಿ 792,756 ಕೋಟಿ ರೂ. ಆದಾಯ ಗಳಿಸಿದ್ದು, ಇದರಲ್ಲಿ 67,845 ಕೋಟಿ ರೂ. ನಿವ್ವಳ ಲಾಭವನ್ನು ದಾಖಲಿಸಿದೆ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.