ETV Bharat / bharat

ಫೋಲ್ಡಬಲ್ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ OnePlus ಎಂಟ್ರಿ

author img

By

Published : Feb 28, 2023, 7:39 PM IST

ಜಾಗತಿಕವಾಗಿ ಫೋಲ್ಡಬಲ್ ಫೋನ್​ಗಳ ಮಾರುಕಟ್ಟೆ ನಿಧಾನವಾಗಿ ಬೆಳೆಯುತ್ತಿದೆ. ಸದ್ಯ ವಿಶ್ವದ ಪ್ರಮುಖ ಮೊಬೈಲ್ ಫೋನ್ ತಯಾರಕ ಕಂಪನಿ OnePlus ಫೋಲ್ಡಬಲ್ ಫೋನ್ ಮಾರುಕಟ್ಟೆಗೆ ಪ್ರವೇಶಿಸಿದೆ.

Another smartphone player to enter foldable race this year

ಬಾರ್ಸಿಲೋನಾ : ಫೋಲ್ಡಬಲ್ ಫೋನ್‌ಗಳ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗುತ್ತಿರುವಂತೆ, ಫೋಲ್ಡಬಲ್ ಫೋನ್​ಗಳ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಕಂಪನಿ ಪ್ರವೇಶಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಮೊಬೈಲ್ ವರ್ಲ್ಡ್​ ಕಾಂಗ್ರೆಸ್- 2023 ರ ಸಂದರ್ಭದಲ್ಲಿ, ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ OnePlus 2023 ರ ದ್ವಿತೀಯಾರ್ಧದಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು.

ನಮ್ಮ ಮೊದಲ ಫೋಲ್ಡಬಲ್ ಫೋನ್, ಒನ್​ ಪ್ಲಸ್​ನ ವಿಶೇಷತೆಯಾದ ವೇಗ ಮತ್ತು ಸುಗಮ ಬಳಕೆಯ ಅನುಭವವನ್ನು ಹೊಂದಿರುತ್ತದೆ. ಇದು ತನ್ನ ವಿಶೇಷ ವಿನ್ಯಾಸ, ತಂತ್ರಜ್ಞಾನ ಮತ್ತು ಇತರ ಅಂಶಗಳಿಂದಾಗಿ ಪ್ರಮುಖ ಮಾದರಿಯ ಫೋಲ್ಡಬಲ್ ಫೋನ್ ಆಗಿರಬೇಕು ಎಂದು ಸಮಾರಂಭದಲ್ಲಿ ಒನ್ ಪ್ಲಸ್ ನ ಅಧ್ಯಕ್ಷ ಮತ್ತು ಸಿಒಒ ಕಿಂಡರ್ ಲಿಯು ಹೇಳಿದರು. ಪ್ರಸ್ತುತ, ಮಡಚಬಹುದಾದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಪ್ರಾಬಲ್ಯ ಹೊಂದಿದೆ.

ಜಾಗತಿಕ ಫೋಲ್ಡಬಲ್ ಸ್ಮಾರ್ಟ್‌ಫೋನ್ ಉತ್ಪಾದನಾ ಸಂಖ್ಯೆಯು ಹಣಕಾಸು ವರ್ಷ 2023 ರಲ್ಲಿ ಶೇ 52 ರಷ್ಟು ಬೆಳವಣಿಗೆಯಾಗಿ (YoY) 22.7 ಮಿಲಿಯನ್ ಯುನಿಟ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಮಾಧ್ಯಮ ಸಂಸ್ಥೆಯೊಂದರ ವರದಿಯ ಪ್ರಕಾರ ಮಾರುಕಟ್ಟೆಯಲ್ಲಿನ ಪ್ರಮುಖ ಕಂಪನಿಗಳಾದ ಸ್ಯಾಮ್‌ಸಂಗ್ ಮತ್ತು ಚೈನೀಸ್ ಮೂಲ ಉಪಕರಣ ತಯಾರಕರು (OEM ಗಳು) ವಿಶೇಷವಾಗಿ ಯುರೋಪ್ ಮತ್ತು ಚೀನಾದಲ್ಲಿ ತಮ್ಮ ಪ್ರಾಬಲ್ಯ ವೃದ್ಧಿಸಿಕೊಳ್ಳಲು ಬಯಸುತ್ತಿದ್ದಾರೆ. ಹಣಕಾಸು ವರ್ಷ 2022 ಕ್ಕೆ ಜಾಗತಿಕ ಫೋಲ್ಡಬಲ್ ಫೋನ್​ ಉತ್ಪಾದನೆಗಳ ಸಂಖ್ಯೆ 14.9 ಮಿಲಿಯನ್ ಯುನಿಟ್‌ ಆಗಿತ್ತು. 2022 ರ ಮೊದಲ ತ್ರೈಮಾಸಿಕದಿಂದ ಮೂರನೇ ತ್ರೈಮಾಸಿಕದವರೆಗೆ ಸಂಚಿತ ಉತ್ಪಾದನಾ ಸಂಖ್ಯೆಯು ಶೇ 90 ರಷ್ಟು ಏರಿಕೆಯಾಗಿ 9.5 ಮಿಲಿಯನ್ ಯುನಿಟ್‌ ಆಗಿತ್ತು.

ಸ್ಮಾರ್ಟ್​ ಫೋನ್​ಗಳ ವಿಶಾಲ ಮಾರುಕಟ್ಟೆಯನ್ನು ನೋಡಿದಾಗ ಫೋಲ್ಡಬಲ್ ಫೋನ್​ಗಳ ಮಾರಾಟ ಸಂಖ್ಯೆಗಳು ಚಿಕ್ಕದಾಗಿದೆ. ಆದರೆ ಯಾವಾಗಲೂ ಪ್ರಾಮುಖ್ಯತೆ ಪಡೆದ ಅಲ್ಟ್ರಾ-ಪ್ರೀಮಿಯಂ ವಿಭಾಗದಲ್ಲಿ ($ 1,000 ಮತ್ತು ಅದಕ್ಕಿಂತ ಹೆಚ್ಚಿನವು) ಫೋಲ್ಡಬಲ್ ಫೋನ್​ಗಳು ಪ್ರಾಬಲ್ಯ ಸಾಧಿಸುತ್ತಿವೆ ಎಂದು ಕೌಂಟರ್‌ಪಾಯಿಂಟ್‌ನ ನಿರ್ದೇಶಕ ತರುಣ್ ಪಾಠಕ್ ಹೇಳಿದ್ದಾರೆ. ಆದಾಗ್ಯೂ, ಸ್ಯಾಮ್ಸಂಗ್ ಈ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆದಿದೆ. ಹಾನರ್, ಮೊಟೊರೊಲಾ ಮತ್ತು ಶಿಯೋಮಿ ಇವು ಚೀನಾದ ಹೊರಗಿನ ಫೋಲ್ಡಬಲ್ ಫೋನ್ ಮಾರುಕಟ್ಟೆಗಳಿಗೆ ಗಂಭೀರವಾಗಿ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. 2023 ರಲ್ಲಿ ಈ ಕ್ಷೇತ್ರಕ್ಕೆ ಪ್ರವೇಶಿಸುವ OEM ಗಳ ಸಂಖ್ಯೆ ಹೆಚ್ಚಾಗುವುದರಿಂದ ಜಾಗತಿಕ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಯು ತೀವ್ರಗೊಳ್ಳಲಿದೆ ಎಂದು ಹಿರಿಯ ವಿಶ್ಲೇಷಕ ಜೀನ್ ಪಾರ್ಕ್ ಹೇಳಿದ್ದಾರೆ.

ಫೋಲ್ಡಬಲ್ ಫೋನ್ ಎಂದರೆ ಕಾಗದದ ಹಾಳೆಯಂತೆ ಅರ್ಧದಷ್ಟು ಮಡಚಬಹುದಾದ ವಿಶೇಷ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್. 2011 ರಲ್ಲಿ ಸ್ಯಾಮ್ಸಂಗ್ ಪ್ರಥಮ ಬಾರಿಗೆ ಮಡಚಬಹುದಾದ ಅಥವಾ ಸುತ್ತಿಕೊಳ್ಳಬಹುದಾದ ಫೋನ್​ಗಳ ಬಗ್ಗೆ ಉಲ್ಲೇಖಿಸಿತ್ತು. 2018 ರಲ್ಲಿ ಮೊದಲ ಫೋಲ್ಡಬಲ್ ಫೋನ್ ಅನ್ನು ಅನಾವರಣಗೊಳಿಸಲಾಯಿತು. ಮಡಚಬಹುದಾದ ಸ್ಕ್ರೀನ್​ಗಳ ತಯಾರಿಕೆ ಹೊಸದೇನಲ್ಲ. ಆದರೆ ಆ ತಂತ್ರಜ್ಞಾನ ಬಳಸಿ ಸ್ಮಾರ್ಟ್​ಫೋನ್ ತಯಾರಿಕೆ ಇತ್ತೀಚಿನ ವರ್ಷಗಳಲ್ಲಿ ಆರಂಭವಾಯಿತು.

ಇದನ್ನೂ ಓದಿ : iPhone ನಿಂದ ಚಿತ್ರೀಕರಣಗೊಂಡ ಫಿಲಂ 'ಫುರಸತ್': ಆ್ಯಪಲ್ ಸಿಇಒ ಟಿಮ್ ಕುಕ್ ಶ್ಲಾಘನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.