ನೋಯ್ಡಾ(ಉತ್ತರಪ್ರದೇಶ): ಪ್ರಥಮ ವರ್ಷದ ಹುಟ್ಟುಹಬ್ಬದ ದಿನವೇ ಕಟ್ಟಡದ 12ನೇ ಮಹಡಿಯಿಂದ ಬಿದ್ದ ಮಗುವೊಂದು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಸಂಭ್ರಮದಿಂದ ತೇಲಾಡುತ್ತಿದ್ದ ಕುಟುಂಬದಲ್ಲಿ ಕ್ಷಣಾರ್ಧದಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಗ್ರೇಟರ್ ನೋಯ್ಡಾಡದ ಬಿಸ್ರಾಖ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಸಾ ಗ್ರೀನ್ಸ್ 1 ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿರುವ ಮಗುವನ್ನ ರಿವಾನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿರಿ: ಎಲ್ಲ ಶಾಲಾ - ಕಾಲೇಜು, ಅಂಗನವಾಡಿ ಕೇಂದ್ರಗಳು ಸೆ. 1ರಿಂದ ಪುನಾರಂಭ.. ತೆಲಂಗಾಣ ಸಿಎಂ ಮಹತ್ವದ ಘೋಷಣೆ
ಇಂದು ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವಿತ್ತು. ಹೀಗಾಗಿ ತಂದೆ ಸತ್ಯೇಂದ್ರ ಕುಟುಂಬದ ಸದಸ್ಯರೊಂದಿಗೆ ಮನೆ ಅಲಂಕಾರ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ವೇಳೆ ಮಗು ರಿವಾನ್ ಫ್ಲ್ಯಾಟ್ನ ಹೊರಭಾಗದಲ್ಲಿ ಆಟವಾಡುತ್ತಿತ್ತು. ಈ ವೇಳೆ ಆಯಾತಪ್ಪಿ ಬಿದ್ದು, ಸಾವನ್ನಪ್ಪಿದೆ. ಮಗು ಕೆಳಗೆ ಬೀಳುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.