ETV Bharat / bharat

ವಂದಲೂರು ಝೂನಲ್ಲಿ ಕೊರೊನಾ ಅಟ್ಟಹಾಸ : ಮತ್ತೊಂದು ಸಿಂಹ ಕೋವಿಡ್-19ನಿಂದ ಸಾವು! - One more lion of Vandalur zoological park died of Covid 19

ವಂದಲೂರು ಪ್ರಾಣಿ ಉದ್ಯಾನವನದ ಇನ್ನೊಂದು ಸಿಂಹ ಕೋವಿಡ್-19ನಿಂದ ಮೃತಪಟ್ಟಿದೆ. ಈ ಹಿಂದೆ ನೀಲಾ ಎಂಬ 9 ವರ್ಷದ ಸಿಂಹಿಣಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿತ್ತು..

lion
lion
author img

By

Published : Jun 16, 2021, 9:22 PM IST

ಚೆನ್ನೈ(ತಮಿಳುನಾಡು) : ವಂದಲೂರು ಪ್ರಾಣಿ ಉದ್ಯಾನವನದ ಇನ್ನೊಂದು ಸಿಂಹ ಕೋವಿಡ್-19ನಿಂದ ಮೃತಪಟ್ಟಿದೆ. ತಂಬರಂ ಪಕ್ಕದಲ್ಲಿರುವ ಅರಿಗ್ನಾರ್ ಅಣ್ಣಾ ವಂಡಲೂರು ಪ್ರಾಣಿಶಾಸ್ತ್ರ ಉದ್ಯಾನವನದಲ್ಲಿ 2,000ಕ್ಕೂ ಹೆಚ್ಚು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಇಡಲಾಗಿದೆ. ಲಾಕ್‌ಡೌನ್‌ನಲ್ಲಿ ಮೃಗಾಲಯವನ್ನು ಮೊದಲೇ ಮುಚ್ಚಲಾಗಿತ್ತು ಮತ್ತು ನಿರ್ವಹಣೆಗಾಗಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ವಿಧಿಸಲಾಗಿತ್ತು.

ಅದರ ಹೊರತಾಗಿಯೂ, ನೀಲಾ ಎಂಬ 9 ವರ್ಷದ ಸಿಂಹಿಣಿ ಈ ಹಿಂದೆ ಮೃತಪಟ್ಟಿತ್ತು. ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದ ಕಾರಣ, ಶವದ ಮಾದರಿಗಳನ್ನು ವಿಶ್ಲೇಷಣೆಗಾಗಿ ಭೋಪಾಲ್‌ನ ರಾಷ್ಟ್ರೀಯ ಪ್ರಾಣಿಗಳ ಕಾಯಿಲೆಗಳ ಸಂಸ್ಥೆಗೆ ಕಳುಹಿಸಲಾಗಿತ್ತು ಮತ್ತು ಕೋವಿಡ್-19 ಸೋಂಕಿನಿಂದ ಸಿಂಹ ಮೃತಪಟ್ಟಿರುವುದಾಗಿ ದೃಢಪಟ್ಟಿತ್ತು.

ಅದರ ನಂತರ ಉಳಿದ 11 ಸಿಂಹಗಳ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಯಿತು. ಅದರಲ್ಲಿ 9 ಸಿಂಹಗಳಿಗೆ ಸೋಂಕು ತಗುಲಿದೆಯೆಂದು ದೃಢಪಟ್ಟ ಬಳಿಕ ಚಿಕಿತ್ಸೆ ನೀಡಲಾಯಿತು. ಮತ್ತು ಈಗ ಕೋವಿಡ್-19ನಿಂದಾಗಿ ಇನ್ನೊಂದು ಸಿಂಹ ಸಾವನ್ನಪ್ಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.