ETV Bharat / bharat

ಮತ್ತೊಂದು ನಮೀಬಿಯಾ ಚೀತಾ ಕಾಡಿಗೆ ರಿಲೀಸ್​: 7ಕ್ಕೆ ತಲುಪಿದ ಚೀತಾಗಳ ಸಂಖ್ಯೆ

ಭಾರತಕ್ಕೆ ತಂದಿದ್ದ ನಮೀಬಿಯಾದ ಚಿರತೆಗಳನ್ನು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಕೆಎನ್‌ಪಿ ಅಭಯಾರಣ್ಯಕ್ಕೆ ಬಿಡುಗಡೆ ಮಾಡಿದ್ದರು.

One more cheetah released into wild in Kuno National Park
ಮತ್ತೊಂದು ನಮೀಬಿಯಾ ಚೀತಾ ಕಾಡಿಗೆ ರಿಲೀಸ್​
author img

By

Published : May 29, 2023, 6:42 PM IST

ಶಿಯೋಪುರ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಮತ್ತೊಂದು ಚೀತಾವನ್ನು ದೊಡ್ಡ ಆವರಣದಿಂದ ಕಾಡಿಗೆ ಬಿಡಲಾಗಿದ್ದು, ಕಾಡಿಗೆ ಬಿಟ್ಟ ಚೀತಾಗಳ ಸಂಖ್ಯೆ ಏಳಕ್ಕೆ ತಲುಪಿದೆ. ದಕ್ಷಿಣ ಆಫ್ರಿಕಾದ 3-4 ವರ್ಷ ವಯಸ್ಸಿನ ಹೆಣ್ಣು ಚೀತಾ ನೀರ್ವವನ್ನು ಭಾನುವಾರ ಸಂಜೆ ಕೆಎನ್‌ಪಿಯ ದೊಡ್ಡ ಆವರಣದಿಂದ ಕಾಡಿಗೆ ಬಿಡಲಾಯಿತು ಎಂದು ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಇಲ್ಲಿಯವರೆಗೆ, ಏಳು ಚೀತಾಗಳನ್ನು ಮುಕ್ತ ಪ್ರದೇಶ ಕಾಡಿಗೆ ಬಿಡುಗಡೆ ಮಾಡಲಾಗಿದ್ದು, ಇನ್ನೂ 10 ಚೀತಾಗಳನ್ನು ದೊಡ್ಡ ಆವರಣಗಳಲ್ಲೇ ಇರಿಸಲಾಗಿದೆ. ಉಳಿದ ಚಿರತೆಗಳನ್ನು ಕಾಡಿಗೆ ಬಿಡುವ ಕುರಿತು ಕೇಂದ್ರ ರಚಿಸಿರುವ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಸಮಿತಿಯ ಸದಸ್ಯರು ಮಂಗಳವಾರ ಕೆಎನ್‌ಪಿಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾದಿಂದ ತರಲಾಗಿರುವ ಚೀತಾಗಳನ್ನು ಕೆಎನ್‌ಪಿಗೆ ಕರೆತಂದು, ಜಾತಿಗಳ ಮಹತ್ವಾಕಾಂಕ್ಷೆಯ ಮರುಪರಿಚಯ ಕಾರ್ಯಕ್ರಮದ ಭಾಗವಾಗಿ ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ವಿಶೇಷ ಆವರಣಗಳಿಗೆ ಬಿಡುಗಡೆ ಮಾಡಿದ್ದರು. ನಂತರ ಏಳು ಗಂಡು ಮತ್ತು ಐದು ಹೆಣ್ಣು ಸೇರಿ ಒಟ್ಟು 12 ಚೀತಾಗಳನ್ನು ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು.

ನಮೀಬಿಯಾದಿಂದ ಸ್ಥಳಾಂತರಗೊಂಡಿದ್ದ ಸಿಯಾಯಾ ಎಂದು ಕರೆಯಲ್ಪಡುವ ಚಿರತೆ ಜ್ವಾಲಾ ಈ ವರ್ಷದ ಮಾರ್ಚ್‌ನಲ್ಲಿ ಕೆಎನ್‌ಪಿಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ತಿಂಗಳ ಆರಂಭದಲ್ಲಿ ಮೂರು ಮರಿಗಳು ಸಾವನ್ನಪ್ಪಿದ್ದವು.

ಇಂದಿನ ಛತ್ತೀಸ್​ಗಢದ ಕೊರಿಯಾ ಜಿಲ್ಲೆಯಲ್ಲಿ 1947 ರಲ್ಲಿ ಕೊನೆಯ ಚೀತಾವನ್ನು ಬೇಟೆಯಾಡಿದ ನಂತರ ಮೊದಲ ಬಾರಿಗೆ ಭಾರತದ ನೆಲದ ಕಾಡಿನಲ್ಲಿ ಈ ಚೀತಾದ ಮರಿಗಳು ಜನಿಸಿವೆ. ಈ ಚಿರತೆಯ ಮರಿಗಳಲ್ಲದೇ, ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಸ್ಥಳಾಂತರಗೊಂಡ 20 ವಯಸ್ಕ ಚಿರತೆಗಳಲ್ಲಿ ಮೂರು ದಕ್ಷ, ಸಶಾ ಮತ್ತು ಉದಯ್ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿವೆ.

ನಮೀಬಿಯಾದ ಚಿರತೆ ಸಶಾ ಮಾರ್ಚ್ 27 ರಂದು ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿತ್ತು. ದಕ್ಷಿಣ ಆಫ್ರಿಕಾದಿಂದ ಕರೆತರಲಾದ ಉದಯ್ ಏಪ್ರಿಲ್ 13 ರಂದು ಕೊನೆಯುಸಿರೆಳೆದಿತ್ತು. ಆದರೆ, ದಕ್ಷಿಣ ಆಫ್ರಿಕಾದ ಚಿರತೆ ದಕ್ಷ ಮೇ 9 ರಂದು ಗಂಡು ಚೀತಾದೊಂದಿಗೆ ಸಂಯೋಗದ ಸಮಯದಲ್ಲಿ ಹಿಂಸಾತ್ಮಕ ಗಲಾಟೆ ನಂತರ ಗಾಯಗೊಂಡು ಸಾವನ್ನಪ್ಪಿತ್ತು.

ಇದನ್ನೂ ಓದಿ: ಆಫ್ರಿಕನ್​ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.