ಜಮ್ಮು-ಕಾಶ್ಮೀರ : ದಕ್ಷಿಣ ಕಾಶ್ಮೀರದ ಅವಂತಿಪೋರಾದ ನಂಬಲ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಂತಿಪೋರಾದ ನಂಬಲ್ ಪ್ರದೇಶದಲ್ಲಿ ಅಚಾನಕ್ಕಾಗಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಭದ್ರತಾ ಪಡೆಗಳು ಮರು ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದಾನೆ. ಉಗ್ರನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೇನಾ ಬಂಕರ್ ಮೇಲೆ ಗ್ರೆನೇಡ್ ದಾಳಿ
ಗಂದರ್‌ಬಾಲ್ ಜಿಲ್ಲೆಯ ಚಪರ್‌ಗುಂಗ್ ಪ್ರದೇಶದಲ್ಲಿ ಭದ್ರತಾ ಬಂಕರ್‌ನತ್ತ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ. ನಂಬಲ್ ಪ್ರದೇಶದಲ್ಲಿ ಉಗ್ರನನ್ನು ಹತ್ಯೆ ಮಾಡಿದ ಕಾರಣ ಈ ಗ್ರೆನೇಡ್ ದಾಳಿ ನಡೆದಿರುವ ಸಾಧ್ಯತೆ ಇದೆ.
-
J&K | Visuals from the spot, the whole area has been cordoned off.
— ANI (@ANI) February 7, 2022 " class="align-text-top noRightClick twitterSection" data="
(Visuals deferred by unspecified time) pic.twitter.com/lVn2yhJOiP
">J&K | Visuals from the spot, the whole area has been cordoned off.
— ANI (@ANI) February 7, 2022
(Visuals deferred by unspecified time) pic.twitter.com/lVn2yhJOiPJ&K | Visuals from the spot, the whole area has been cordoned off.
— ANI (@ANI) February 7, 2022
(Visuals deferred by unspecified time) pic.twitter.com/lVn2yhJOiP
ಉಗ್ರರು ಗ್ರೆನೇಡ್ ಅನ್ನು ಸೇನಾ ಬಂಕರ್ ಮೇಲೆ ಎಸೆದಿದ್ದಾರೆ. ಆದರೆ, ಅದು ಗುರಿ ತಪ್ಪಿ ರಸ್ತೆ ಮೇಲೆ ಬಿದ್ದಿದೆ. ಇದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ತಲೆ ಮೇಲೆ ಮಗಳ ಮದುವೆಗೆ ಮಾಡಿದ ಸಾಲದ ಭಾರ.. ಮಗನೊಂದಿಗೆ ದಂಪತಿ ನೇಣಿಗೆ ಶರಣು