ETV Bharat / bharat

ಚರಂಡಿ ಸ್ವಚ್ಛಗೊಳಿಸಲು ಮ್ಯಾನ್​ಹೋಲ್​ಗಿಳಿದ ಕಾರ್ಮಿಕ ಸಾವು.. ಇಬ್ಬರ ಸ್ಥಿತಿ ಗಂಭೀರ - during cleaning sewer tank

ಅಯೋಧ್ಯೆ ಪಾಲಿಕೆಯು ಒಳಚರಂಡಿ ಸ್ವಚ್ಛಗೊಳಿಸಲು ಖಾಸಗಿ ಕಂಪನಿ ತೋಷಿಬಾಗೆ ಗುತ್ತಿಗೆ ನೀಡಿದೆ. ಆದರೆ ಕಂಪನಿಯು ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ನೌಕರರನ್ನು ಒಳಚರಂಡಿಗಳಿಗೆ ಇಳಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಓರ್ವ ಕಾರ್ಮಿಕ ಸಾವು
ಓರ್ವ ಕಾರ್ಮಿಕ ಸಾವು
author img

By

Published : Mar 27, 2021, 10:38 PM IST

ಅಯೋಧ್ಯೆ: ಅಗತ್ಯ ಸುರಕ್ಷತಾ ಸಾಧನಗಳಿಲ್ಲದೆ ಒಳಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.

ಕಾರ್ಮಿಕರು ದೆಹಲಿಯ ಹಮೀರ್‌ಪುರ ನಿವಾಸಿಗಳು ಎಂದು ತಿಳಿದುಬಂದಿದೆ. ಇಲ್ಲಿನ ನಾಯಘಾಟ್ ಪ್ರದೇಶದ ತುಳಸಿಯುದನ್ ಬಳಿ ಘಟನೆ ಸಂಭವಿಸಿದೆ. ಮುನ್ಸಿಪಲ್ ಕಾರ್ಪೊರೇಶನ್‌ನ ನಿರ್ಲಕ್ಷ್ಯದಿಂದಾಗಿ, ಕಾರ್ಮಿಕ ಪ್ರಾಣ ಕಳೆದುಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸ್ವಚ್ಛಗೊಳಿಸಲು ಚರಂಡಿಗಿಳಿದ ಕಾರ್ಮಿಕ ಸಾವು

ಅಯೋಧ್ಯೆ ಪಾಲಿಕೆಯು ಒಳಚರಂಡಿ ಸ್ವಚ್ಛಗೊಳಿಸಲು ಖಾಸಗಿ ಕಂಪನಿ ತೋಷಿಬಾಗೆ ಗುತ್ತಿಗೆ ನೀಡಿದೆ. ಆದರೆ ಕಂಪನಿಯು ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ನೌಕರರನ್ನು ಒಳಚರಂಡಿಗಳಿಗೆ ಇಳಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಕುರಿತು ಇಲ್ಲಿನ ಮೇಯರ್ ಹೃಷಿಕೇಶ್ ಉಪಾಧ್ಯಾಯ ಪ್ರತಿಕ್ರಿಯಿಸಿ, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡಲಾಗುತ್ತಿದೆ. ಇಷ್ಟು ದೊಡ್ಡ ನಿರ್ಲಕ್ಷ್ಯಕ್ಕೆ ಕಾರಣವಾಗಿರುವವರ ವಿರುದ್ಧ ಕೌನ್ಸಿಲರ್ ಮಹೇಂದ್ರ ಶುಕ್ಲಾ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಇದನ್ನು ಓದಿ .. ನನ್ನ ಪೋಷಕರ ಮೇಲೆ ಪ್ರಭಾವ ಬೀರಿ ಬ್ಲ್ಯಾಕ್ ಮೇಲ್: ಯುವತಿಯಿಂದ 5ನೇ ವಿಡಿಯೋ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.