ಮುಂಬೈ(ಮಹಾರಾಷ್ಟ್ರ): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಶಾಖೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ನುಗ್ಗಿದ್ದ ಇಬ್ಬರು ಮುಸುಕುದಾರಿಗಳು ಗುಂಡು ಹಾರಿಸಿ, ಓರ್ವ ಉದ್ಯೋಗಿಯನ್ನ ಕೊಲೆ ಮಾಡಿ, ಎರಡೂವರೆ ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಕೇವಲ 8 ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈನ ದಹಿಸರ್ನ ಎಸ್ಬಿಐ ಬ್ಯಾಂಕ್ನಲ್ಲಿ ದರೋಡೆ ಮಾಡಿದ್ದ ಆರೋಪಿಗಳು ಗುಂಡು ಹಾರಿಸಿದ್ದರಿಂದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಶೋಧ ನಡೆಸಿದ್ದರು.
ಪ್ರಕರಣ ಭೇದಿಸುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 8 ತಂಡ ರಚನೆ ಮಾಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಹಾಯದಿಂದ ಇದೀಗ ಅವರನ್ನ ಬಂಧನ ಮಾಡಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ.
ಇದನ್ನೂ ಓದಿರಿ: ನಿತ್ಯ 633 ಕೆಜಿ ಅಕ್ರಮ ಗಾಂಜಾ ವಶ.. 2021ರಲ್ಲಿ ₹231.17 ಕೋಟಿ ಮೌಲ್ಯದ ಮಾದಕ ಜಪ್ತಿ
ಬ್ಯಾಂಕ್ನೊಳಗೆ ನುಗ್ಗಿದ್ದ ವೇಳೆ ಬ್ಯಾಂಕ್ ಸಿಬ್ಬಂದಿ ಸಂದೇಶ್ ಗೋಮನೆ ಹಣ ತುಂಬಿದ್ದ ಬ್ಯಾಗ್ ನೀಡಲು ನಿರಾಕರಿಸಿದ್ದರಿಂದ ಆತನ ಮೇಲೆ ಗುಂಡು ಹಾರಿಸಲಾಗಿತ್ತು. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ತದನಂತರ ಹಣ ದೋಚಿ ಪರಾರಿಯಾಗಿದ್ದರು.
ಆರೋಪಿಗಳ ಬಂಧನಕ್ಕೆ ಕಾರಣವಾಯ್ತು ಬಿಟ್ಟು ಹೋದ ಚಪ್ಪಲಿ
ಕಳ್ಳತನ ಮಾಡಲು ಬ್ಯಾಂಕ್ನೊಳಗೆ ನುಗ್ಗಿರುವ ದುಷ್ಕರ್ಮಿಗಳ ಪೈಕಿ ಓರ್ವ ಬ್ಯಾಂಕ್ನೊಳಗೆ ಒಂದು ಚಪ್ಪಲಿ ಬಿಟ್ಟು ಹೋಗಿದ್ದನು. ಅದರ ಸಹಾಯದಿಂದಲೇ ಪೊಲೀಸರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಶೋಧಕಾರ್ಯಕ್ಕಾಗಿ ಶ್ವಾನದಳದ ಸಹಾಯ ಪಡೆದುಕೊಳ್ಳಲಾಗಿತ್ತು ಎಂದಿದ್ದಾರೆ.