ETV Bharat / bharat

ಬಾಂದ್ರಾ ನದಿಯಲ್ಲಿ ಕೊಚ್ಚಿ ಹೋದ ಯುವಕರು.. ಓರ್ವನ ಮೃತದೇಹ ಪತ್ತೆ - ಶೋಧ ಕಾರ್ಯಾಚರಣೆ

ಬಾಂದ್ರಾದ ನದಿಯಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರ ಪೈಕಿ ಒಬ್ಬನ ಮೃತದೇಹ ಪತ್ತೆ ಆಗಿದೆ.

one died who drowned in Bandra river
ಬಾಂದ್ರಾದ ನದಿಯಲ್ಲಿ ಮುಳುಗಿ ಯುವಕ ಸಾವು
author img

By

Published : Aug 12, 2022, 11:06 AM IST

ಮುಂಬೈ: ಮುಂಬೈನ ಬಾಂದ್ರಾದ ಎಸ್.ವಿ ರಸ್ತೆ ಮತ್ತು ಸಿ ಲಿಂಕ್ ಜಂಕ್ಷನ್‌ನಲ್ಲಿನ ನದಿಯಲ್ಲಿ ಇಬ್ಬರು ಯುವಕರು ಬಿದ್ದು ಕೊಚ್ಚಿ ಹೋಗಿದ್ದಾರೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಯುವಕರು ನೀರಿನಲ್ಲಿ ಮುಳುಗಿರುವ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆಗಮಿಸಿ ಶೋಧ ಕಾರ್ಯ ಆರಂಭಿಸಲಾಗಿದೆ. ಓರ್ವನ ಮೃತದೇಹ ಪತ್ತೆಯಾಗಿದೆ. ಕುರ್ಲಾದಿಂದ ಕೆಲವು ಯುವಕರು ರಾತ್ರಿ ದರ್ಶನಕ್ಕಾಗಿ ಮಾಹಿಮ್ ದರ್ಗಾಕ್ಕೆ ಬಂದಿದ್ದರು. ಹೊರಗೆ ನದಿ ಬಳಿ ಪೂಜೆ ವೇಳೆ ಓರ್ವ ಸಮತೋಲನ ಕಳೆದುಕೊಂಡು ನದಿಗೆ ಬಿದ್ದಿದ್ದಾರೆ. ಸಹಾಯಕ್ಕೆ ಬಂದ ಮತ್ತೊಬ್ಬ ಯುವಕ ಕೂಡ ಕೆಳಗೆ ಬಿದ್ದಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಮುಂಬೈ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ನದಿ ಪಾತ್ರದಲ್ಲಿ ಹೂಳು ತುಂಬಿರುವುದರಿಂದ ಕಾರ್ಯಕ್ಕೆ ಅಡ್ಡಿಯಾಗಿದೆ. ಮುಂಜಾನೆ ಅಗ್ನಿಶಾಮಕ ದಳದವರು ಓರ್ವ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಉಳಿದ ಯುವಕನ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ನನಗೂ ಸ್ವಲ್ಪ ಜಾಗ ಬಿಡಿ.. ರೈಲಿನ ಇಂಜಿನ್ ಮೇಲೆ ಹತ್ತಿದ ನೂರಾರು ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.