ETV Bharat / bharat

ಬಸ್​ ಕೆಳಗೆ ಅಪ್ಪಚ್ಚಿಯಾದ ಬೈಕ್​: ಓರ್ವ ಸಾವು,ಇಬ್ಬರು ಗಂಭೀರ - ಬೈಕ್ ಬಸ್​ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಛತ್ತೀಸ್‌ಗಢದ ಕೊರ್ಬ ಜಿಲ್ಲೆಯ ಬಸ್​ ನಿಲ್ದಾಣದ ಬಳಿ ಬಸ್​ವೊಂದು ಬೈಕ್​​ ಮೇಲೆ ಹರಿದ ಪರಿಣಾಮ ಓರ್ವ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ನಡೆದಿದೆ.

Road accident in Katghora
ಬೈಕ್​ ಮೇಲೆ ಹರಿದ ಬಸ್​
author img

By

Published : Dec 2, 2020, 10:46 AM IST

ಕೊರ್ಬ: ಛತ್ತೀಸ್‌ಗಢದ ಕೊರ್ಬ ಜಿಲ್ಲೆಯ ಕಟ್ಘೋರಾ ಬಸ್ ನಿಲ್ದಾಣದ ಬಳಿ ಬೈಕ್​ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯ​

ಮಂಗಳವಾರ ಸಂಜೆ ಈ ಅಪಘಾತ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಫೂಟೇಜ್​​ನಲ್ಲಿ, ಬೈಕ್​ ಸವಾರರು ಬಸ್​ ಚಕ್ರಗಳ ಕೆಳಗೆ ಸಿಲುಕಿರುವುದನ್ನು ಕಾಣಬಹುದು. ಇನ್ನು ಅಪಘಾತವಾದ ಕೂಡಲೇ ಬಸ್​ ಚಾಲಕ ಪರಾರಿಯಾಗಿದ್ದಾನೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಬಸ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಸ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನಿಗಾಗಿ ಶೋಧ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.