ತಿರುವನಂತಪುರಂ : ಕ್ರಿಸ್‌ಮಸ್ ಅಂದರೆ ಮೊದಲು ನೆನಪಾಗುವುದೇ ದೇವರ ನಾಡು ಕೇರಳ. ಅತಿ ಹೆಚ್ಚು ಮಂದಿ ಕ್ರೈಸ್ತರನ್ನು ಹೊಂದಿರುವ ಕೇರಳ ಹೊಸ ದಾಖಲೆಯೊಂದನ್ನು ಬರೆದಿದೆ.
ಡಿಸೆಂಬರ್ 24ರಂದು ಒಂದೇ ದಿನ ಕೇರಳದಲ್ಲಿ 65 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ಕಳೆದ 10 ವರ್ಷಗಳಲ್ಲೇ ಅಧಿಕವಾಗಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ನಡೆಸುತ್ತಿರುವ ಬೆವ್‌ಕೊ(BEVCO) ಔಟ್‌ಲೆಟ್‌ಗಳ ಮೂಲಕ ಡಿ.24ರಂದು 65 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ತಿರುವನಂತಪುರಂನ ಪವರ್‌ಹೌಸ್‌ನಲ್ಲಿರುವ ಬೆವ್‌ಕೊ ಔಟ್‌ಲೆಟ್‌ನಲ್ಲಿ ಅತಿ ಹೆಚ್ಚು ಎಣ್ಣೆ ಮಾರಾಟವಾಗಿದೆ. ಇಲ್ಲಿ 73.54 ಲಕ್ಷ ಮೌಲ್ಯದ ಮದ್ಯ ಸೇಲ್ ಆಗಿದೆ.
ತ್ರಿಶೂರ್ ಜಿಲ್ಲೆಯ ಚಾಲಕುಡಿಯಲ್ಲಿನ ಒಂದು ಮಳಿಗೆ 70.72 ಲಕ್ಷ ವಹಿವಾಟು ಮೂಲಕ 2ನೇ ಸ್ಥಾನ ಪಡೆದಿದ್ದರೆ, ಇರಿಂಗಲಕುಡದ ಇನ್ನೊಂದು ಔಟ್‌ಲೆಟ್‌ನಲ್ಲಿ 63.60 ಲಕ್ಷ ರೂ.ಮೌಲ್ಯದ ಮದ್ಯ ಮಾರಾಟವಾಗಿದೆ.
ಕಳೆದ ವರ್ಷ ಡಿಸೆಂಬರ್ 24ರಂದು ಬೆವ್‌ಕೊ ಮಳಿಗೆಗಳಲ್ಲಿ 55 ಕೋಟಿ ಮೌಲ್ಯದ ಎಣ್ಣೆ ಸೇಲಾಗಿತ್ತು. ಹೀಗಾಗಿ, ಈ ಬಾರಿಯ ಮದ್ಯ ಮಾರಾಟದಲ್ಲಿ ಕೇರಳದ ಅಬಕಾರಿ ಇಲಾಖೆ ಹೊಸ ದಾಖಲೆ ಬರೆದಿದೆ.
ಇದನ್ನೂ ಓದಿ: ಎರ್ನಾಕುಲಂನಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ: 24 ವಲಸೆ ಕಾರ್ಮಿಕರ ಬಂಧನ