ETV Bharat / bharat

ಪಟಾಕಿ ಸಿಡಿದು ಒಂದುವರೆ ವರ್ಷದ ಮಗು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

author img

By

Published : Nov 15, 2020, 4:56 PM IST

ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಕಿಲ್ಪಕ್ಕಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ದರ್ಶಿತ್​ ಮೃತಪಟ್ಟಿದ್ದಾನೆ. ವಾರಣಾಸಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ..

boy dies in freak firecracker accident in Kallakurichi
ತಮಿಳುನಾಡಿನಲ್ಲಿ ಪಟಾಕಿ ಸಿಡಿದು ಮಗು ಸಾವು

ಕಲ್ಲಕುರಿಚಿ ( ತಮಿಳುನಾಡು) : ಪಟಾಕಿ ಸಿಡಿದು ಒಂದೂವರೆ ವರ್ಷದ ಮಗು ಮೃತಪಟ್ಟು, ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕೊಂಗರಾಯಪಾಳಯಂ ಗ್ರಾಮದಲ್ಲಿ ನಡೆದಿದೆ.

ಕೃಷ್ಣಸಾಮಿ ಎಂಬುವರ ಮಗ ದರ್ಶಿತ್ (11/2 ವರ್ಷ) ಮೃತ ಬಾಲಕ. ಕೃಷ್ಣಸಾಮಿ ಗ್ರಾಮದಲ್ಲಿ ಅಕ್ಕಿ ಅಂಗಡಿ ನಡೆಸುತ್ತಿದ್ದು, ಅಂಗಡಿಯ ಬಳಿ ಅವರ ಮಗ ದರ್ಶಿತ್, ನೆರೆ ಮನೆಯ ಮಕ್ಕಳಾದ ನಿವೇದ (7) ಮತ್ತು ವರ್ಷಾ (6) ಆಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಪಟಾಕಿ ಸಿಡಿಸಿದ್ದು, ಇದರಿಂದ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆ ನಡೆದ ತಕ್ಷಣ ಮೂವರನ್ನು ಕಲ್ಲಕುರಿಚಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ನಿವೇದ ಮತ್ತು ವರ್ಷಾಳನ್ನು ಸೇಲಂನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದರ್ಶಿತ್‌ನನ್ನು ಪುದುಚ್ಚೇರಿಯ ಜವಾಹರ್​ಲಾಲ್​ ಇನ್ಸಿಟ್ಯೂಟ್​ ಆಫ್ ಪೋಸ್ಟ್ ಗ್ರ್ಯಾಜುವೇಟ್ ಮೆಡಿಕಲ್ ಎಜುಕೇಶನ್ ಅಂಡ್​ ರಿಸರ್ಚ್​ಗೆ ಸ್ಥಳಾಂತರಿಸಲಾಯಿತು.

ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಕಿಲ್ಪಕ್ಕಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ದರ್ಶಿತ್​ ಮೃತಪಟ್ಟಿದ್ದಾನೆ. ವಾರಣಾಸಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.