ETV Bharat / bharat

ಹೊಟ್ಟೆಪಾಡಿಗೆ ಸಾಬೂನು ವ್ಯಾಪಾರ: ರಜಿನಿಕಾಂತ್ ಎದುರು ಹಿರೋಯಿನ್ ಆಗಿದ್ದ ನಟಿ ಇವರೇನಾ? - ಮೇರು ನಟಿ ಐಶ್ವರ್ಯಾ ಭಾಸ್ಕರನ್

ಆನ್ಲೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯಾ, ನನ್ನ ಬಳಿ ಸದ್ಯಕ್ಕೆ ಯಾವುದೇ ಉದ್ಯೋಗವಿಲ್ಲ, ಹಣವೂ ಇಲ್ಲ. ಬೀದಿಗಳಲ್ಲಿ ಸಾಬೂನು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವೆ ಎಂದಿದ್ದಾರೆ.

Once a heroine of Rajanikanth and Mohanlal; Aiswarya now sells soaps on the streets

author img

By

Published : Jun 17, 2022, 2:25 PM IST

ಹೈದರಾಬಾದ್: ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರರಂಗದ ಟಾಪ್ ಹೀರೊಗಳೊಂದಿಗೆ ಹೀರೊಯಿನ್ ಆಗಿ ನಟಿಸಿದ್ದ ಒಂದು ಕಾಲದ ಮೇರು ನಟಿ ಐಶ್ವರ್ಯಾ ಭಾಸ್ಕರನ್ ಈಗ ಹೊಟ್ಟೆಪಾಡಿಗೆ ಬೀದಿಗಳಲ್ಲಿ ಸಾಬೂನು ಮಾರುತ್ತಿರುವುದು ಕಂಡು ಬಂದಿದೆ. ಒಂದು ಕಾಲಕ್ಕೆ ಇವರು ರಜಿನಿಕಾಂತ್ ಹಾಗೂ ಮೋಹನ್ ಲಾಲ್ ಜೊತೆ ಹೀರೊಯಿನ್ ಆಗಿ ನಟಿಸಿದವರು ಎಂಬುದು ವಾಸ್ತವ.

ಆನ್ಲೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯಾ, ನನ್ನ ಬಳಿ ಸದ್ಯಕ್ಕೆ ಯಾವುದೇ ಉದ್ಯೋಗವಿಲ್ಲ, ಹಣವೂ ಇಲ್ಲ. ಬೀದಿಗಳಲ್ಲಿ ಸಾಬೂನು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವೆ ಎಂದಿದ್ದಾರೆ.

ಸಿನಿಮಾಗಳಲ್ಲಿ ಉತ್ತುಂಗಕ್ಕೇರಿದ ನಂತರ ಐಶ್ವರ್ಯಾ ಟಿವಿ ಧಾರಾವಾಹಿಗಳಲ್ಲೂ ಮಿಂಚಿದ್ದರು. ಆದರೆ, ದಿನಗಳೆದಂತೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತ ಕೊನೆಗೆ ನಿಂತೇ ಹೋದವು.

"ನನ್ನ ಬಳಿ ಕೆಲಸವಿಲ್ಲ, ಹಣವೂ ಇಲ್ಲ. ಸಾಬೂನು ಮಾರಿ ಬದುಕುತ್ತಿದ್ದೇನೆ. ನನಗೆ ಯಾವುದೇ ಸಾಲವೂ ಇಲ್ಲ. ನಾನು ಒಬ್ಬಂಟಿಯಾಗಿರುವೆ. ಮಗಳು ಮದುವೆಯಾದ ನಂತರ ದೂರವಾಗಿದ್ದಾಳೆ. ಯಾವುದೇ ಕೆಲಸವಾದರೂ ಸರಿ ಮಾಡುವೆ. ನಿಮ್ಮ ಸಂಸ್ಥೆಯಲ್ಲಿ ಒಂದು ಕೆಲಸ ಕೊಟ್ಟರೆ ಖುಷಿಯಿಂದ ಮಾಡುವೆ. ಶೌಚಾಲಯ ತೊಳೆದರೂ ಸರಿ, ಖುಷಿಯಿಂದಲೇ ಆ ಕೆಲಸವನ್ನೂ ಮಾಡುವೆ" ಎಂದು ಐಶ್ವರ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ. ಮತ್ತೊಮ್ಮೆ ನಟಿಸಲು ಅವಕಾಶ ಸಿಕ್ಕರೆ ಅದಕ್ಕೆ ಸಿದ್ಧ ಎಂದು ನಟಿ ಐಶ್ವರ್ಯಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.