ETV Bharat / bharat

ಅಮೃತಪಾಲ್ ಸಿಂಗ್ ಬಂಧಿಸುವವರೆಗೂ ಇಡೀ ರಾತ್ರಿ ನಿದ್ದೆ ಮಾಡಲಿಲ್ಲ: ಪಂಜಾಬ್ ಸಿಎಂ ಭಗವಂತ್ ಮಾನ್ - ಅಜ್ನಾಲಾ ಘಟನೆ

ವಾರಿಸ್ ಪಂಜಾಬ್ ಸಂಘಟನೆ ಮುಖ್ಯಸ್ಥ ಅಮೃತಪಾಲ್ ಸಿಂಗ್​ ಬಂಧನವಾಗಿದ್ದು, ಈ ಕುರಿತು ಪಂಜಾಬ್​ ಸಿಎಂ ಪ್ರತಿಕ್ರಿಯಿಸಿದ್ದಾರೆ.

Punjab CM Bhagwant Mann addressed the press conference.
ಪಂಜಾಬ್ ಸಿಎಂ ಭಗವಂತ್ ಮಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Apr 23, 2023, 6:24 PM IST

ಚಂಡೀಗಢ(ಪಂಜಾಬ): ವಾರಿಸ್ ಪಂಜಾಬ್ ಸಂಘಟನೆ ಮುಖ್ಯಸ್ಥ, ಖಲಿಸ್ಥಾನ ಪರ ಹೋರಾಟಗಾರ ಅಮೃತಪಾಲ್ ಸಿಂಗ್​ನನ್ನುಅವರನ್ನು ಭಾನುವಾರ ಬೆಳಗ್ಗೆ ಪಂಜಾಬ್‌ನ ಮೋಗಾದಲ್ಲಿ ಬಂಧಿಸಿದ ಬಳಿಕ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ಮಾಧ್ಯಮಗೋಷ್ಟಿಯಲ್ಲಿ ಇಂದು ಮಾತನಾಡಿದ ಅವರು, ಪೊಲೀಸರು ಖಲಿಸ್ಥಾನಿ ಐಕಾನ್‌ಗೆ ಹುಡುಕಾಟ ಆರಂಭಿಸಿ ಇಂದಿಗೆ 35 ದಿನಗಳು ಕಳೆದಿವೆ. ಆದರೆ ತಿಂಗಳ ಬಳಿಕ ಆರೋಪಿ ವಾರಿಸ್ ಪಂಜಾಬ್ ಸಂಘಟನೆ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದ ಅವರು, ಈ ವೇಳೆ ರಾಜ್ಯದಲ್ಲಿ ಶಾಂತಿ ಕಾಪಾಡಿದ್ದಕ್ಕಾಗಿ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಪಂಜಾಬ್‌ನ ಯುವಕರು ತಮ್ಮ ಕೈಯಲ್ಲಿ ಪದವಿ ಮತ್ತು ಕ್ರೀಡಾ ಪದಕ ಹೊಂದಬೇಕೆಂದು ನಾನು ಬಯಸುತ್ತೇನೆ. ನಮ್ಮ ರಾಜ್ಯದ ಯುವಕರು ಯಾವುದೇ ಆಮಿಷಕ್ಕೆ ಒಳಗಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿದರು.

  • 'आप' सरकार जनता की सुरक्षा और अमन कानून के लिए काम कर रही है और यह हमारी ज़िम्मेदारी व फर्ज़ भी है... @ArvindKejriwal pic.twitter.com/oOB9eKVlzt

    — Bhagwant Mann (@BhagwantMann) April 23, 2023 " class="align-text-top noRightClick twitterSection" data=" ">

ರಕ್ತಪಾತ ಬೇಕಿರಲಿಲ್ಲ: ಮಾರ್ಚ್ 18 ರಂದು ಸರ್ಕಾರ ಕ್ರಮ ಕೈಗೊಂಡಿದ್ದರೆ ಅದೇ ದಿನ ಅಮೃತ್​ಪಾಲ್​ನನ್ನು ಬಂಧಿಸಬಹುದಿತ್ತು. ಆದರೆ ಹಲವು ತಿಂಗಳಿನಿಂದ ಪಂಜಾಬ್‌ನಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದ ಸಿಎಂ, ಮಾರ್ಚ್ 18 ರಂದು ಕೆಲವು ಜನರು ಸಿಕ್ಕಿಬಿದ್ದಿದ್ದರು. ಆದರೆ ಅಂದು ಆಮ್ ಆದ್ಮಿ ಸರ್ಕಾರ ಯಾವುದೇ ಗುಂಡಿನ ದಾಳಿ ಅಥವಾ ರಕ್ತಪಾತವನ್ನು ಬಯಸಲಿಲ್ಲ ಎಂದರು.

ಗುರುಗ್ರಂಥ ಸಾಹಿಬ್ ಗುರಾಣಿಯಾಗಿ ಬಳಸಿಕೊಂಡರು: ಅಜ್ನಾಲಾ ಘಟನೆ ಬಗ್ಗೆ ಮಾತನಾಡಿದ ಸಿಎಂ ಮಾನ್​, ಕೆಲವರು ಪೊಲೀಸ್ ಠಾಣೆ ಪ್ರವೇಶಿಸಲು ಗುರುಗ್ರಂಥ ಸಾಹಿಬ್ ಅನ್ನು ಗುರಾಣಿಯಾಗಿ ಬಳಸಿಕೊಂಡರು. ಕೆಲವರು ಗುರುಸಾಹೇಬರ ಪಲ್ಲಕ್ಕಿಯೊಂದಿಗೆ ಬಂದರು. ಅಂದು ಕೂಡ ಡಿಜಿಪಿಗೆ ಅದೇ ಸೂಚನೆ ನೀಡಿದ್ದು, ಏನೇ ಆಗಲಿ, ಗುರು ಸಾಹೇಬರ ಘನತೆಗೆ ಧಕ್ಕೆಯಾಗಬಾರದು. ಆದಾಗ್ಯೂ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಅಮೃತಪಾಲ್ ಸಿಂಗ್​ನನ್ನು ಇಂದು ಬಂಧಿಸಲಾಗಿದೆ. ದೇಶದ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.

ರಾತ್ರಿಯಿಡೀ ಪರಿಸ್ಥಿತಿ ನಿಗಾ: ವಾರಿಸ್ ಪಂಜಾಬ್ ಸಂಘಟನೆ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬಂಧನದವರೆಗೂ ರಾತ್ರಿಯಿಡೀ ನಾನು ನಿದ್ದೆ ಮಾಡಲಿಲ್ಲ. ನಾನು ಪ್ರತಿ 15 ನಿಮಿಷದ ನಂತರ ಇಡೀ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಪಂಜಾಬ್‌ನ ಜನರು ನಮಗೆ ನೀಡಿದ್ದಾರೆ. ಪಂಜಾಬ್​ ಜನರಿಗಾಗಿ ಉತ್ತಮ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಸ್ವಾತಂತ್ರ್ಯದ ಹೋರಾಟಗಳಾಗಿರಲಿ, ಅಥವಾ ಇನ್ಯಾವುದೇ ಸಂದರ್ಭದಲ್ಲಿ ಪಂಜಾಬ್ ಯಾವಾಗಲೂ ದೇಶವನ್ನು ಮುನ್ನಡೆಸಿದೆ. ಪಂಜಾಬ್ ಅಭಿವೃದ್ಧಿ, ಶಿಕ್ಷಣ, ಮೂಲಸೌಕರ್ಯ ಮತ್ತು ಪ್ರಗತಿಯಲ್ಲಿ ನಂಬರ್ ಒನ್ ರಾಜ್ಯವಾಗಬೇಕೆಂದು ಬಯಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ.. ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್​ಪಾಲ್​ ಸಿಂಗ್ ಬಂಧನ: ಅಸ್ಸೋಂ ಜೈಲಿಗೆ ಶಿಫ್ಟ್​

ಪಂಜಾಬ್ ಮೊಗಾದಲ್ಲಿ ಬಂಧಿಸಿ ದಿಬ್ರುಗಢ ಜೈಲಿಗೆ ರವಾನೆ: ಖಲಿಸ್ಥಾನ್​ ಬೆಂಬಲಿಗ ಹಾಗೂ ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್ ಸಿಂಗ್​ನನ್ನು ಪಂಜಾಬ್ ಮೊಗಾದಲ್ಲಿ ಪೊಲೀಸರು ಬಂಧಿಸಿದ್ದು, ಸದ್ಯ ಆತನನ್ನು ಅಸ್ಸೋಂನ ದಿಬ್ರುಗಢ ಜೈಲಿಗೆ ಕಳುಹಿಸಲಾಗುವುದು ಎಂದು ಪಂಜಾಬ್ ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದ ಖಲಿಸ್ಥಾನ ಪರ ಹೋರಾಟಗಾರ ಅಮೃತ್​ಪಾಲ್ ಸಿಂಗ್ ಬಂಧನಕ್ಕೆ ತಿಂಗಳಿಂದ ಪಂಜಾಬ್ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಮಾರ್ಚ್​ 18ರಂದು ಆತನ ಸಹಚರರನ್ನು ಬಂಧಿಸಿ ಅಪಾರ ಪ್ರಮಾಣದಲ್ಲಿ ಶಸ್ತಾಸ್ತ್ರ ವಶಪಡಿಸಿಕೊಂಡಿದ್ದರು.

ವೇಷ ಮರೆಸಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಅಲೆದಾಡುತ್ತಿದ್ದ ಅಮೃತ್‌ಪಾಲ್‌ ಸಿಂಗ್, ಪಂಜಾಬ್‌ನ ನಿಗೂಢ ಸ್ಥಳದಲ್ಲಿ ಅಡಗಿರುವುದು ಪೊಲೀಸರಿಗೆ ಮಾಹಿತಿ ದೊರಕಿತು. ಅಮೃತ್​ಪಾಲ್ ಸಿಂಗ್​ನನ್ನು ಪಂಜಾಬ್ ಮೊಗಾದಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಜೈಲಿಗೆ ಹೋಗುತ್ತಾರೆ : ಸುಬ್ರಮಣಿಯನ್​​ ಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.