ಪಾಟ್ನಾ(ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ವರ್ಕೌಟ್ ಆರಂಭಿಸಿದ್ದಾರೆ. ಇತ್ತೀಚೆಗೆ ಅವರು ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಳೆದ ಎರಡು ವಾರಗಳಲ್ಲಿ ಬಿಹಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ತಮ್ಮ ಫಿಟ್‌ನೆಸ್ ವರ್ಕೌಟ್ ವಿಡಿಯೋವನ್ನು ಮತ್ತೆ ಎರಡನೇ ಬಾರಿಗೆ ಹಂಚಿಕೊಂಡಿದ್ದಾರೆ.
ತೂಕ ಇಳಿಸಿಕೊಳ್ಳಲು ಪ್ರಧಾನಿ ಮೋದಿಯವರು ಸಲಹೆ ನೀಡಿದ ನಂತರ ತೇಜಸ್ವಿ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದ್ದಾರೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ, ತೇಜಸ್ವಿ ಯಾದವ್ ಕ್ರಿಕೆಟ್ ಆಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಜುಲೈ 12 ರಂದು ಬಿಹಾರ ವಿಧಾನಸಭೆಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ಪಾಟ್ನಾಗೆ ಬಂದಿದ್ದರು. ಈ ವೇಳೆ ಸಭೆಯಲ್ಲಿ ಇಬ್ಬರೂ ಆರೋಗ್ಯದ ಕುರಿತು ಮಾತುಕತೆ ನಡೆಸಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ, ಪ್ರಧಾನಿ ಅವರು ತೇಜಸ್ವಿಗೆ ಸ್ವಲ್ಪ ತೂಕ ಇಳಿಸಿಕೊಳ್ಳಲು ಸಲಹೆ ನೀಡಿದ್ರಂತೆ.
-
Life or game, one should always play to win. The more you plan in head, the more you perform on field.
— Tejashwi Yadav (@yadavtejashwi) July 17, 2022 " class="align-text-top noRightClick twitterSection" data="
Pleasure to try hands on bat & ball after ages. It becomes more satisfying when driver, cook, sweeper, gardener & care takers are your playmates and keen to hit & bowl you out. pic.twitter.com/ChvK9evzi2
">Life or game, one should always play to win. The more you plan in head, the more you perform on field.
— Tejashwi Yadav (@yadavtejashwi) July 17, 2022
Pleasure to try hands on bat & ball after ages. It becomes more satisfying when driver, cook, sweeper, gardener & care takers are your playmates and keen to hit & bowl you out. pic.twitter.com/ChvK9evzi2Life or game, one should always play to win. The more you plan in head, the more you perform on field.
— Tejashwi Yadav (@yadavtejashwi) July 17, 2022
Pleasure to try hands on bat & ball after ages. It becomes more satisfying when driver, cook, sweeper, gardener & care takers are your playmates and keen to hit & bowl you out. pic.twitter.com/ChvK9evzi2
ಹಾಗಾಗಿ ಇಂದು ತೇಜಸ್ವಿ ಅವರು ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಓಡಿಸುತ್ತಿದ್ದ ಹಳೆಯ ಜೀಪ್ನ್ನು ಎಳೆಯುವ ಮತ್ತು ತಳ್ಳುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮದುವೆಯ ನಂತರ ತೇಜಸ್ವಿ ಸಾಕಷ್ಟು ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮದುವೆಗೆ ಮೊದಲು ಅವರು 75 ಕೆಜಿ ಇದ್ದು, ನಂತರ ಅವರು 85 ಕೆಜಿ ತೂಕವನ್ನು ಹೊಂದಿದ್ದಾರೆ. ಸುಮಾರು 10 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.
ಇದನ್ನೂ ಓದಿ: ಈಟಿವಿ ಭಾರತ EXCLUSIVE: ಸಿಎಂ ನಿತೀಶ್ ಕುಮಾರ್ ಭ್ರಷ್ಟಾಚಾರದ ಪಿತಾಮಹ ಎಂದ ತೇಜಸ್ವಿ ಯಾದವ್!
ಪ್ರಧಾನಿ ಸಲಹೆಯ ನಂತರ ಅವರು ತಮ್ಮ ಆಹಾರಕ್ರಮವನ್ನು ನಿಯಂತ್ರಿಸಿದ್ದು, ಎಣ್ಣೆಯುಕ್ತ ಆಹಾರ ಮತ್ತು ಸಿಹಿತಿಂಡಿಗಳನ್ನು ತಪ್ಪಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಅವರು ಸಾಕಷ್ಟು ಸಲಾಡ್ ಮತ್ತು ಕಡಿಮೆ ಮಸಾಲೆಗಳೊಂದಿಗೆ ಆಹಾರವನ್ನು ಸೇವಿಸುತ್ತಿದ್ದಾರೆ. ಅವರು ಕೊಬ್ಬಿನ ಅಂಶಗಳನ್ನು ಹೊಂದಿರುವ ಎಲ್ಲಾ ಖಾದ್ಯಗಳನ್ನು ತಪ್ಪಿಸುತ್ತಿದ್ದಾರೆ ಎಂದು ತೇಜಸ್ವಿ ಅವರ ಆಪ್ತ ಸಹಾಯಕರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.