ETV Bharat / bharat

ಗುಜರಾತ್​ನಲ್ಲಿ ಬಿಜೆಪಿ ಆಂತರಿಕ ಸಮೀಕ್ಷೆ: ಕೇಸರಿ ಪಡೆಗೆ ಮತಗಳಿಕೆ ಉಳಿಸಿಕೊಳ್ಳುವ ಸವಾಲು - ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರಾ ನೇರ ಪೈಪೋಟಿ

ಬಿಜೆಪಿಯ ಆಂತರಿಕ ಸಮೀಕ್ಷಾ ವರದಿಯು ಗುಜರಾತ್​ನ 19 ಸ್ಥಾನಗಳಲ್ಲಿ ಆಮ್​ ಆದ್ಮಿ ಪಕ್ಷವು ತ್ರೀವ ಸವಾಲು ಒಡ್ಡಲಿದೆ ಎಂದು ಸುಳಿವು ನೀಡಿದೆ. ಹೀಗಾಗಿ ಈ 19 ಸ್ಥಾನಗಳಲ್ಲಿ ಆಪ್​ಅನ್ನು ನಿಯಂತ್ರಿಸಲು ಬಿಜೆಪಿ ವರಿಷ್ಠರು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.

on-nineteen-gujarat-assembly-seats-aap-will-pose-challenge-to-bjp
ಗುಜರಾತ್​ನಲ್ಲಿ ಬಿಜೆಪಿ ಆಂತರಿಕ ಸಮೀಕ್ಷೆ: ಕೇಸರಿ ಪಡೆಗೆ ಮತಗಳಿಕೆ ಉಳಿಸಿಕೊಳ್ಳುವ ಸವಾಲು
author img

By

Published : Nov 26, 2022, 4:00 PM IST

ನವದೆಹಲಿ: 2022ರ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಪ್ರವೇಶದಿಂದ ಗುಜರಾತ್​ನಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರ ಹಣಾಹಣಿ ಉಂಟಾಗುತ್ತಿದ್ದ ಕ್ಷೇತ್ರಗಳಲ್ಲಿ ಆಮ್​ ಆದ್ಮಿ ಪಕ್ಷ ಸಹ ಸ್ಪರ್ಧೆಗೆ ಇಳಿದಿದೆ. ಆದ್ದರಿಂದ ಇಂತಹ ಕ್ಷೇತ್ರಗಳಲ್ಲಿ ಪ್ರತಿ ಮತವೂ ಮುಖ್ಯ ಎಂಬ ಅಂಶವನ್ನು ಕೇಸರಿ ಪಕ್ಷವು ಎಚ್ಚರಿಕೆಯಿಂದ ಪರಿಗಣಿಸುತ್ತಿದೆ. ಅದೂ ಅಲ್ಲದೆ, ವಿವಿಧ ಅಂಶಗಳ ಕುರಿತು ಬಿಜೆಪಿ ಆಂತರಿಕ ಸಮೀಕ್ಷೆಗಳನ್ನು ನಡೆಸುತ್ತಿದೆ.

ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಗಂಭೀರ ಅಂಶಗಳು ಬಹಿರಂಗವಾಗಿದೆ. ಆಮ್​ ಆದ್ಮಿ ಪಕ್ಷವೇ ಬಿಜೆಪಿಗೆ 19 ಸ್ಥಾನಗಳಲ್ಲಿ ತ್ರೀವ ಪೈಪೋಟಿ ನೀಡಲಿದೆ. ಈ 19 ಕ್ಷೇತ್ರಗಳಲ್ಲಿ ಆಪ್​ ಗಣನೀಯ ಸಂಖ್ಯೆಯ ಮತಗಳನ್ನು ಗಳಿಸಿದರೆ, ಅದು ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾಗಲಿದೆ. ಅಲ್ಲದೇ, ಈ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಆಂತರಿಕ ಸಮೀಕ್ಷೆ ಬಯಲು ಮಾಡಿದೆ. ಹೀಗಾಗಿ, ಈ ಕ್ಷೇತ್ರಗಳಲ್ಲಿ ಆಮ್​ ಆದ್ಮಿ ಪಕ್ಷವನ್ನು ನಿಯಂತ್ರಿಸಲು ಬಿಜೆಪಿ ವರಿಷ್ಠರು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ

ಕೇಸರಿ ಪಡೆಯ ಆಂತರಿಕ ಸಮೀಕ್ಷೆಯು ಮುಖ್ಯವಾಗಿ ಮತದಾರರ ಚಿತ್ತವನ್ನು ಅಳೆಯುವ ಗುರಿಯನ್ನು ಹೊಂದಿವೆ ಮತ್ತು ಆಮ್​ ಆದ್ಮಿ ಪಕ್ಷ ಆಕ್ರಮಣವನ್ನು ಹೇಗೆ ಎದುರಿಸಬೇಕು ಎಂಬುವುದನ್ನು ಕೇಂದ್ರೀಕರಿಸಿದೆ ಎಂದು ಹೇಳಲಾಗಿದೆ. ಈ ಸಮೀಕ್ಷಾ ವರದಿಯ ವಿಶ್ಲೇಷಣೆ ಪ್ರಕಾರ, ಆಮ್​ ಆದ್ಮಿ ಪಕ್ಷವು ಶೇಕಡಾ ಹತ್ತಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಸೋಲಬಹುದು ಎಂದು ಎಚ್ಚರಿಸಲಾಗಿದೆ.

ಬಿಜೆಪಿಗೆ ಮತಗಳಿಕೆ ಉಳಿಸಿಕೊಳ್ಳುವ ಸವಾಲು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರಾ ನೇರ ಪೈಪೋಟಿ ಇತ್ತು. ಅದರಲ್ಲೂ, ಬಿಜೆಪಿಗೆ ಕಾಂಗ್ರೆಸ್​ ಭಾರಿ ಪೈಪೋಟಿ ನೀಡಿತ್ತು. ಪರಿಣಾಮ ಆಡಳಿತಾರೂಢ ಬಿಜೆಪಿ 99 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಆದ್ದರಿಂದ ಈಗ ಬಿಜೆಪಿಗೆ ತನ್ನ ಮತಗಳಿಕೆಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಕೇಸರಿ ಪಕ್ಷವು ಪ್ರತಿಸ್ಪರ್ಧಿಗಳಿಗೆ ವಿಶೇಷವಾಗಿ ಆಮ್​​ ಆದ್ಮಿ ಪಕ್ಷ ಮತ ಮತಗಳಿಕೆಯನ್ನು ಸಹಿಸುವುದಿಲ್ಲ. ಬಿಜೆಪಿಯ ಆಂತರಿಕ ಸಮೀಕ್ಷೆ ಪ್ರಕಾರವೇ, ಈ 19 ಸ್ಥಾನಗಳಲ್ಲಿ ಆಪ್​ ಶೇಕಡಾ ಎಂಟರಷ್ಟು ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಪಕ್ಷವು ನಷ್ಟವನ್ನು ಅನುಭವಿಸುತ್ತದೆ. ಅದೇ, ಆಪ್​ ಹತ್ತು ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದರೆ, ಅದು ಬಿಜೆಪಿಗೆ ಮಾರಕವಾಗಲಿದೆ.

ಬದಲಾವಣೆ ಬಯಸಿರುವ ಗುಜರಾತ್ ಜನ: ಮತ್ತೊಂದು ಪ್ರಮುಖ ಎಂದರೆ ನಲವತ್ತು ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಗುಜರಾತ್ ಮತದಾರರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಕೇಸರಿ ಪಕ್ಷದ ಆಂತರಿಕ ಸಮೀಕ್ಷೆ ಎಚ್ಚರಿಸಿದೆ ಎಂದೂ ಮೂಲಗಳು ತಿಳಿಸಿವೆ. ಹಾಗಾಗಿ ಈ ಮತದಾರರು ಆಮ್​ ಆದ್ಮಿ ಪಕ್ಷ ಅಥವಾ ಕಾಂಗ್ರೆಸ್‌ನತ್ತ ಹೊರಳುವುದನ್ನು ತಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.

ಒಂದು ಅಂದಾಜಿನ ಪ್ರಕಾರ, ಕೆಲವು ಸ್ಥಾನಗಳಲ್ಲಿ ಬಿಜೆಪಿಯ ಆಡಳಿತ ವಿರೋಧಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವು ಸ್ಥಾನಗಳಲ್ಲಿ ಆಮ್​ ಆದ್ಮಿ ಪಕ್ಷವು ಬಿಜೆಪಿಯ ವೋಟ್ ಬ್ಯಾಂಕ್ ಅನ್ನು ಕಸಿಯಲು ಪ್ರಯತ್ನಿಸುತ್ತಿದೆ. ಅದಕ್ಕೆ ತಕ್ಕಂತೆ ಬಿಜೆಪಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಇತರ ವಿಷಯಗಳನ್ನು ಹೊರತು ಪಡಿಸಿ ಈಗ ಅಭಿವೃದ್ಧಿ ವಿಚಾರಗಳನ್ನೇ ಜನರ ಮುಂದೆ ಪ್ರಸ್ತಾವ ಮಾಡುವ ಕೆಲಸ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾದವು. ಈ ಅಭಿವೃದ್ಧಿ ಪ್ರಕ್ರಿಯೆಯು ಇನ್ನೂ ಮುಂದುವರೆದಿದೆ. ಕೇಂದ್ರ ಮತ್ತು ಗುಜರಾತ್‌ನಲ್ಲಿ ಡಬಲ್ ಇಂಜಿನ್ ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗವನ್ನು ನೀಡುತ್ತಿದೆ ಎಂದು ಗುಜರಾತ್‌ನಲ್ಲಿ ಮೊಕ್ಕಾಂ ಹೂಡಿ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ರಾಷ್ಟ್ರೀಯ ವಕ್ತಾರರೊಬ್ಬರು ಹೇಳುತ್ತಾರೆ.

ಇದನ್ನೂ ಓದಿ: ಟಾರ್ಗೆಟ್​ 150... ಗುಜರಾತ್​ನಲ್ಲಿ ಕೇವಲ ಗೆಲುವಷ್ಟೇ ಸಾಲದು..! ಪ್ರಧಾನಿ ಮೋದಿ ಬಯಸಿರುವುದಾದರೂ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.