ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಶೃಂಗಸಭೆ ಜೊತೆಯಲ್ಲಿಯೇ ಪ್ರಧಾನಿ ಮೋದಿ ಮೂರು ದಿನದಲ್ಲಿ 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯೂನುಯಲ್ ಮ್ಯಾಕ್ರೋನ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರ ಜೊತೆ ಮಾತುಕತೆ ನಡೆಸುವರು.
ಮೊದಲ ದಿನ ಮೋದಿ ಅವರು ಬೈಡೆನ್ ಮತ್ತು ಬಾಂಗ್ಲಾ ಪ್ರಧಾನಿ ಜೊತೆಗೆ ತಮ್ಮ ಅಧಿಕೃತ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ಮಾರಿಷಿಯಸ್ ನಾಯಕರೊಂದಿಗೆ ಮಾತುಕತೆ ನಿಗದಿಯಾಗಿದೆ.
ಶನಿವಾರ ಜಿ20 ಶೃಂಗಸಭೆ ನಡುವಿನಲ್ಲಿಯೇ ಯುಕೆ (ಬ್ರಿಟನ್), ಜಪಾನ್, ಜರ್ಮನಿ ಮತ್ತು ಇಟಲಿ ದೇಶದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಜಿ20 ಸಭೆಯಲ್ಲಿ ವಿಶ್ವದ ಅನೇಕ ವಿಷಯಗಳ ಕುರಿತು ನಾಯಕರು ಚರ್ಚಿಸಲಿದ್ದಾರೆ.
ಸೆಪ್ಟೆಂಬರ್ 10ರಂದು ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯೂನಲ್ ಮ್ಯಾಕ್ರೋನ್ ಜೊತೆ ಮಧ್ಯಾಹ್ನದ ಔತಣಕೂಟ ಜೊತೆ ಚರ್ಚೆ ನಡೆಸಲಿದ್ದಾರೆ. ಶೃಂಗಸಭೆಯಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಹಾಗೂ 14 ಅಂತಾರಾಷ್ಟ್ರೀಯ ಸಂಸ್ಥೆ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ದಕ್ಷಿಣ ಅಜೆಂಡಾ ಕುರಿತು ಗಮನ ಹರಿಸಲಿದ್ದಾರೆ.
ಭಾರತ- ಅಮೆರಿಕ: ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಸಭೆಯಲ್ಲಿ ಸಣ್ಣ ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳ ಮೇಲೆ ಸಂಭವನೀಯ ಪರಮಾಣು ಒಪ್ಪಂದ, ಭಾರತದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ರಮ, ಡ್ರೋನ್ ಡೀಲ್ ಮತ್ತು ರಕ್ಷಣಾ ಒಪ್ಪಂದ ಪ್ರಗತಿ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ಭಾರತ-ಬಾಂಗ್ಲಾದೇಶ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸಿನ್ ತಮ್ಮ ಮಗಳು ಸೈಮ ವಾಜಿದ್ ಜೊತೆಗೆ ಭಾರತಕ್ಕೆ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದಾರೆ. ಇವರು ಶೃಂಗಸಭೆಯ ಜೊತೆಯಲ್ಲಿಯೇ ತ್ರಿಪುರ ರೈಲ್ ಸಂಪರ್ಕ ಮತ್ತು ರಾಂಪಾನ್ ಶಕ್ತಿ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ಇದರ ಜೊತೆ ಅನೇಕ ಒಪ್ಪಂದಗಳಿಗೂ ಸಹಿ ಹಾಕಲಿದ್ದಾರೆ. ಪ್ರವಾಸ ಸಂದರ್ಭದಲ್ಲಿ ಕರೆನ್ಸಿ ಬದಲಾಗಿ ಸ್ಥಳೀಯವಾಗಿ ರೂಪಿ- ಟಕ ಕಾರ್ಡ್ ಸೌಲಭ್ಯವನ್ನು ನೀಡುವ ಒಪ್ಪಂದ ಕೂಡ ನಡೆಯಲಿದೆ.
ಇದನ್ನೂ ಓದಿ: G20 Summit: ಜಿ20 ಶೃಂಗದಲ್ಲಿ ಭಾಗಿಯಾಗಲು ಭಾರತಕ್ಕೆ ಪ್ರಯಾಣಿಸಿದ ಅಮೆರಿಕ ಅಧ್ಯಕ್ಷ ಬೈಡನ್