ಪುಣೆ: ಕೊರೊನಾ ರೂಪಾಂತರಿ ಒಮಿಕ್ರೋನ್ ಭೀತಿ ಹಿನ್ನೆಲೆ ಪುಣೆ ಹಾಗೂ ನಾಗ್ಪುರ್ದಲ್ಲಿ ಶಾಲೆಗಳ ಪುನಾರಂಭವನ್ನು ಮುಂದೂಡಲಾಗಿದೆ.
20 ತಿಂಗಳ ನಂತರ ಡಿ.1ರಿಂದ 1-7ನೇ ತರಗತಿ ಶಾಲೆಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಒಮಿಕ್ರೋನ್ ಭೀತಿ ಹಿನ್ನೆಲೆಯಲ್ಲಿ ಶಾಲಾ ಪುನಾರಂಭ ದಿನಾಂಕವನ್ನು ಡಿ.15ಕ್ಕೆ ಮುಂದೂಡಲಾಗಿದೆ.
ಡಿ.15ರಿಂದ ಶಾಲೆ ಆರಂಭಿಸುತ್ತೇವೆ ಎಂದು ಪುಣೆ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ಇನ್ನು ನಾಗ್ಪುರ್ದಲ್ಲಿ ಡಿ.10ರಿಂದ ಶಾಲೆ ಆರಂಭಿಸುವುದಾಗಿ ನಗರ ಪಾಲಿಕೆ ತಿಳಿಸಿದೆ.
ಅಂದಿನ ಸ್ಥಿತಿಗತಿ ಪರಿಶೀಲಿಸಿ ಶಾಲೆ ಪುನಾರಂಭದ ಬಗ್ಗೆ ಯೋಚಿಸುವುದಾಗಿಯೂ ಮಹಾನಗರ ಪಾಲಿಕೆಗಳು ಮಾಹಿತಿ ನೀಡಿವೆ.
(ಇದನ್ನೂ ಓದಿ: ಒಮಿಕ್ರೋನ್ ವಿರುದ್ಧ ಕೆಲಸ ಮಾಡುತ್ತಾ ಕೋವ್ಯಾಕ್ಸಿನ್?... ಭಾರತ್ ಬಯೋಟೆಕ್ ಅಧ್ಯಯನ)