ETV Bharat / bharat

RT-PCR & RAT ಟೆಸ್ಟ್​​​ನಿಂದ ಹೊಸ ರೂಪಾಂತರಿ ತಪ್ಪಿಸಿಕೊಳ್ಳಲ್ಲ: ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ - RT-PCR & RAT ಪರೀಕ್ಷೆ

ವಿಶ್ವದ ನಿದ್ದೆಗೆಡಿಸಿರುವ ಒಮಿಕ್ರೋನ್‌ ರೂಪಾಂತರಿ RT-PCR & RAT ವೈದ್ಯಕೀಯ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಒಮಿಕ್ರೋನ್‌ ರೂಪಾಂತರಿ RT-PCR
ಒಮಿಕ್ರೋನ್‌ ರೂಪಾಂತರಿ RT-PCR
author img

By

Published : Nov 30, 2021, 7:53 PM IST

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್ ಹೊಸ ರೂಪಾಂತರಿ ತಳಿ ಒಮಿಕ್ರೋನ್​​ ಆತಂಕ ಶುರುವಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ಸೂಚನೆ ನೀಡಿದೆ. RT-PCR ಮತ್ತು RAT ಟೆಸ್ಟ್​​​ನಲ್ಲಿ ಈ ಸೋಂಕು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆ ನಡೆಸುವಂತೆ ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ಐಸಿಎಂಆರ್​​ನ ಡಾ. ಬಲರಾಮ್ ಭಾರ್ಗವ್​, ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದು, ರಾಜ್ಯ ಸರ್ಕಾರಗಳು ವಿದೇಶದಿಂದ ಬರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು ಎಂದಿದ್ದಾರೆ. ವಿದೇಶಗಳಿಂದ ವಿವಿಧ ರಾಜ್ಯಗಳಿಗೆ ಆಗಮಿಸುವ ಎಲ್ಲರಿಗೂ ಕಡ್ಡಾಯವಾಗಿ ಆರ್​​ಟಿ-ಪಿಸಿಆರ್​ ಪರೀಕ್ಷೆ ನಡೆಸುವಂತೆಯೂ ಸೂಚನೆ ನೀಡಲಾಗಿದ್ದು, ಅವರ ಮೇಲೆ ನಿಗಾ ಇಡುವಂತೆ ತಿಳಿಸಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಸಹ ರಿಲೀಸ್​​ ಆಗಿದ್ದು, ಪ್ರಬಲವಾಗಿ ಹೋರಾಡಲು ವ್ಯಾಕ್ಸಿನೇಷನ್​​ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ ಎಂದಿದ್ದಾರೆ.

ನೀತಿ ಆಯೋಗದ(ಆರೋಗ್ಯ) ಸದಸ್ಯ ಡಾ.ವಿ.ಕೆ.ಪಾಲ್​ ಮಾತನಾಡಿ, ಡಿಸೆಂಬರ್​​ 31ರವರೆಗೆ ಶೇ. 100ರಷ್ಟು ವ್ಯಾಕ್ಸಿನೇಷನ್​​ ನೀಡಲು ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಆರಂಭಿಸುತ್ತಿದ್ದು, ಈ ವೇಳೆ ಎರಡನೇ ಡೋಸ್​ ವ್ಯಾಕ್ಸಿನೇಷನ್​​​ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ ಒಮಿಕ್ರೋನ್ ರೂಪಾಂತರಿ ಪತ್ತೆಯಾಗಿಲ್ಲ, ಎದುರಿಸಲು ನಾವು ಸಿದ್ಧ : ಕೇಂದ್ರ ಸರ್ಕಾರ

ಪ್ರಶ್ನೋತ್ತರ ಕಲಾಪದ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವೀಯಾ, ದೇಶದಲ್ಲಿ ಇಲ್ಲಿಯವರೆಗೆ ಯಾವುದೇ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ರಾಜ್ಯಗಳಿಗೆ ಮಾರ್ಗಸೂಚಿ ರವಾನಿಸಿದ್ದೇವೆ ಎಂದರು.

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರೋನ್​​​ ತದನಂತರ ಲಂಡನ್, ಜರ್ಮನ್​, ಜಪಾನ್​, ಹಾಂಕಾಂಗ್​​ ಸೇರಿದಂತೆ 12 ದೇಶಗಳಲ್ಲಿ ಕಾಣಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.