ETV Bharat / bharat

ದೇಶದಲ್ಲಿ ಒಟ್ಟು 436 ಒಮಿಕ್ರಾನ್​ ಕೇಸ್​ : ವಿಶ್ಲೇಷಿತ ಸೋಂಕಿತರಲ್ಲಿ ಶೇ.91 ಮಂದಿಗೆ ಸಂಪೂರ್ಣ ಲಸಿಕೆ

author img

By

Published : Dec 25, 2021, 3:43 PM IST

Updated : Dec 25, 2021, 4:49 PM IST

ದೇಶದ 436 ಒಮಿಕ್ರಾನ್​ ಸೋಂಕಿತರ ಪೈಕಿ 183 ಜನರನ್ನು ವಿಶ್ಲೇಷಣೆಗೊಳಪಡಿಸಲಾಗಿದೆ. ವಿಶ್ಲೇಷಿತ 183 ಮಂದಿ ಸೋಂಕಿತರಲ್ಲಿ 121 ರೋಗಿಗಳು ಅಂದರೆ ಶೇ.91ರಷ್ಟು ಮಂದಿ ಕೋವಿಡ್​ ಲಸಿಕೆಯ ಎಡಡೂ ಡೋಸ್​ಗಳನ್ನು ಪಡೆದಿದ್ದಾರೆ..

Omicron
ಒಮಿಕ್ರಾನ್​

ನವದೆಹಲಿ: ಭಾರತದ 17 ರಾಜ್ಯಗಳಲ್ಲಿ ಕೊರೊನಾ ವೈರಸ್​ನ ಹೊಸ ರೂಪಾಂತರಿ ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 400ರ ಗಡಿ ದಾಟಿದೆ. ಈವರೆಗೆ ಒಟ್ಟು 436 ಒಮಿಕ್ರಾನ್​​​ ಕೇಸ್​ಗಳು ವರದಿಯಾಗಿವೆ. ಈ ಪೈಕಿ 115 ಮಂದಿ ಹೊಸ ರೂಪಾಂತರಿಯಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

108 ಸೋಂಕಿತರೊಂದಿಗೆ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಒಮಿಕ್ರಾನ್​ ಪ್ರಕರಣ ಪತ್ತೆಯಾಗಿದ್ದು, ದೆಹಲಿ (79), ಗುಜರಾತ್‌ (43), ರಾಜಸ್ಥಾನ (43), ತೆಲಂಗಾಣ (38), ಕೇರಳ (37), ತಮಿಳುನಾಡು (34) ಹಾಗೂ ಕರ್ನಾಟಕ (31) ರಾಜ್ಯಗಳು ನಂತರದ ಸ್ಥಾನದಲ್ಲಿದೆ. ಈಶಾನ್ಯದ ಯಾವುದೇ ರಾಜ್ಯವು ಒಮಿಕ್ರಾನ್ ಪ್ರಕರಣವನ್ನು ವರದಿ ಮಾಡಿಲ್ಲ.

  • Rajasthan | 21 new cases of #Omicron reported today, taking the total tally to 43: State Health Dept

    — ANI (@ANI) December 25, 2021 " class="align-text-top noRightClick twitterSection" data=" ">

ವಿಶ್ಲೇಷಿತ ಸೋಂಕಿತರಲ್ಲಿ ಶೇ.91 ಮಂದಿಗೆ ಸಂಪೂರ್ಣ ಲಸಿಕೆ

436 ಸೋಂಕಿತರ ಪೈಕಿ 183 ಜನರನ್ನು ವಿಶ್ಲೇಷಣೆಗೊಳಪಡಿಸಲಾಗಿದೆ. ವಿಶ್ಲೇಷಿತ 183 ಮಂದಿ ಸೋಂಕಿತರಲ್ಲಿ 121 ರೋಗಿಗಳು ಅಂದರೆ ಶೇ.91ರಷ್ಟು ಮಂದಿ ಕೋವಿಡ್​ ಲಸಿಕೆಯ ಎಡಡೂ ಡೋಸ್​ಗಳನ್ನು ಪಡೆದಿದ್ದಾರೆ. ಇವರಲ್ಲಿ ಶೇ.70ರಷ್ಟು ಮಂದಿ ಲಕ್ಷಣರಹಿತರಾಗಿದ್ದು, ಶೇ.61ರಷ್ಟು ಸೋಂಕಿತರು ಪುರುಷರಾಗಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ.

Last Updated : Dec 25, 2021, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.