ETV Bharat / bharat

ಮಹಾರಾಷ್ಟ್ರ, ರಾಜಸ್ತಾನದಲ್ಲಿ ಒಮಿಕ್ರಾನ್‌ ಸೋಂಕಿನಿಂದ ಇಬ್ಬರು ಸಾವನ್ನಪ್ಪಿರುವ ಶಂಕೆ - ಮಹಾರಾಷ್ಟ್ರ, ರಾಜಸ್ತಾನದಲ್ಲಿ ಕೊರೊನಾ ಸೋಂಕಿತರಿಬ್ಬರ ಸಾವು

ರಾಜಸ್ತಾನದಲ್ಲಿ ಇಂದು(ಶುಕ್ರವಾರ) 73 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಈತನಲ್ಲಿ ಒಮಿಕ್ರಾನ್​ ದೃಢಪಟ್ಟಿತ್ತು. ಇಲ್ಲಿನ ಉದಯಪುರ ಸವಿನಾನಗರ ಪ್ರದೇಶದವರಾಗಿದ್ದ ಈ ವ್ಯಕ್ತಿ ಕಳೆದ 15 ದಿನಗಳಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಅನಾರೋಗ್ಯದ ನಿಮಿತ್ತ ದಾಖಲಾಗಿದ್ದರು..

Omicron
ಒಮಿಕ್ರಾನ್
author img

By

Published : Dec 31, 2021, 4:28 PM IST

Updated : Dec 31, 2021, 4:42 PM IST

ಪುಣೆ/ಉದಯಪುರ : ಮಹಾರಾಷ್ಟ್ರ ಮತ್ತು ರಾಜಸ್ತಾನದಲ್ಲಿ ಇಬ್ಬರು ರೋಗಿಗಳು ಹೊಸ ರೂಪಾಂತರಿ ಒಮಿಕ್ರಾನ್​ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹೀಗಾಗಿ, ದೇಶದಲ್ಲಿ ಒಮಿಕ್ರಾನ್​ ಮೊದಲೆರಡು ಬಲಿ ಪಡೆದಿದೆ ಎಂದು ಹೇಳಲಾಗಿದೆ.

ನೈಜೀರಿಯಾದಿಂದ ವಾಪಸ್ಸಾಗಿದ್ದ ಮಹಾರಾಷ್ಟ್ರದ 52 ವರ್ಷದ ವ್ಯಕ್ತಿಯೊಬ್ಬ ಡಿಸೆಂಬರ್​ 28ರಂದು ಹೃದಯಾಘಾತದಿಂದ ಮೃತಪಟ್ಟಿದ್ದ. ಮರಣಾನಂತರ ಕೊರೊನಾ ಪರೀಕ್ಷೆ ವೇಳೆ ಆ ವ್ಯಕ್ತಿಯಲ್ಲಿ ಒಮಿಕ್ರಾನ್​ ದೃಢಪಟ್ಟಿತ್ತು. ಇದು ಒಮಿಕ್ರಾನ್​ನಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಎಂದು ಎಂದು ಹೇಳಲಾಗಿತ್ತು.

ಆದರೆ, ವೈದ್ಯರು ಇದು ಹೃದಯಾಘಾತದಿಂದ ಉಂಟಾದ ಸಾವು ಎಂದು ತಿಳಿಸಿದ್ದಾರೆ. ಈ ವ್ಯಕ್ತಿ ಕಳೆದ 13 ವರ್ಷಗಳಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಹಾಗಾಗಿ, ಇದು ಅನಾರೋಗ್ಯ ಸಮಸ್ಯೆಯಿಂದಾದ ಸಾವು ಎಂದು ವೈದ್ಯರು ಪರಿಗಣಿಸಿದ್ದಾರೆ.

ರಾಜಸ್ತಾನದಲ್ಲಿ ಇಂದು(ಶುಕ್ರವಾರ) 73 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಈತನಲ್ಲಿ ಒಮಿಕ್ರಾನ್​ ದೃಢಪಟ್ಟಿತ್ತು. ಇಲ್ಲಿನ ಉದಯಪುರ ಸವಿನಾನಗರ ಪ್ರದೇಶದವರಾಗಿದ್ದ ಈ ವ್ಯಕ್ತಿ ಕಳೆದ 15 ದಿನಗಳಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಅನಾರೋಗ್ಯದ ನಿಮಿತ್ತ ದಾಖಲಾಗಿದ್ದರು.

ಡಿಸೆಂಬರ್​ 25ರಂದು ಮಾಡಿದ ಕೊರೊನಾ ಪರೀಕ್ಷೆಯಲ್ಲಿ ಈ ವ್ಯಕ್ತಿಯಲ್ಲಿ ಒಮಿಕ್ರಾನ್​ ಇರುವುದು ಕಂಡು ಬಂದಿತ್ತು. ಇಂದು ಬೆಳಗ್ಗೆ ಈ ವ್ಯಕ್ತಿ ಅಸುನೀಗಿದ್ದಾನೆ.

ಆದರೆ, ಮೃತ ವ್ಯಕ್ತಿ ನ್ಯುಮೋನಿಯಾ, ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ. ಈ ಕಾರಣಕ್ಕಾಗಿ ಸಾವನ್ನಪ್ಪಿರಬಹುದು. ಒಮಿಕ್ರಾನ್​ನಿಂದಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕೊರೊನಾದಿಂದ ಗುಣಮುಖ.. ಒಮಿಕ್ರಾನ್​ ವರದಿಯೂ ನೆಗೆಟಿವ್.. ಆಸ್ಪತ್ರೆಯಿಂದ ಗಂಗೂಲಿ ಡಿಸ್ಚಾರ್ಜ್​

Last Updated : Dec 31, 2021, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.