ಜೈಪುರ್(ರಾಜಸ್ಥಾನ): ರಾಜ್ಯದಲ್ಲಿ ಮತ್ತೆ ನಾಲ್ಕು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಪಿಂಕ್ ಸಿಟಿಗೆ ವಿದೇಶದಿಂದ ಆಗಮಿಸಿದ್ದ ನಾಲ್ವರಿಗೆ ರೂಪಾಂತರಿ ಕೋವಿಡ್ ಒಮಿಕ್ರಾನ್ ವಕ್ಕರಿಸಿದೆ.
ಈಗಾಗಲೇ 9 ಒಮಿಕ್ರಾನ್ ಪ್ರಕರಣಗಳಿಂದ ಕಂಗೆಟ್ಟಿರುವ ರಾಜಸ್ಥಾನ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಹೌದು, ಪಿಂಕ್ ಸಿಟಿಗೆ ವಿದೇಶದಿಂದ ಆಗಮಿಸಿದ್ದ ನಾಲ್ವರಿಗೆ ರೂಪಾಂತರಿ ಕೋವಿಡ್ ಒಮಿಕ್ರಾನ್ ವಕ್ಕರಿಸಿದೆ. ಈ ಮೂಲಕ ರಾಜಸ್ಥಾನದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.
ಓದಿ: ಬೆಳಗ್ಗೆ ಪಾಸಿಟಿವ್ ಸಂಜೆ ನೆಗೆಟಿವ್.. ಇಟಲಿಯಿಂದ ಚಂಡೀಗಢಕ್ಕೆ ಬಂದಿದ್ದ ಯುವಕನಿಗಿಲ್ಲ ಒಮಿಕ್ರಾನ್ ಸೋಂಕು..
ವಿದೇಶದಿಂದ ಬಂದ ನಾಲ್ವರಿಗೆ ಕೋವಿಡ್-19 ಪರೀಕ್ಷೆ ಮಾಡಿದಾಗ ಪಾಸಿಟಿವ್ ಕಂಡುಬಂದಿತು. ಈ ಹಿನ್ನೆಲೆ ಮತ್ತೆ ಅವರ ಗಂಟಲು ದ್ರವವನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿದಾಗ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ಈಗಾಗಲೇ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದ್ದು, ಸೋಂಕಿತರ ಆರೋಗ್ಯ ಸ್ಥಿತಿ ಕೂಡ ಉತ್ತಮವಾಗಿದೆ.