ETV Bharat / bharat

ಓಮಿಕ್ರಾನ್ ಮಾರ್ಗಸೂಚಿಗಳು: ಪ್ರಯಾಣಿಕರೇ, ಇದು ನೀವು ತಿಳಿದಿರಬೇಕಾದ ಮಾಹಿತಿ - ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳು

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ರೂಪಾಂತರ ವೈರಸ್ ಒಮಿಕ್ರೋನ್ ಜಗತ್ತಿನಾದ್ಯಂತ ಆತಂಕವನ್ನು ಸೃಷ್ಟಿಸುತ್ತಿದೆ. ಇದರ ನಡುವೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಭಾರತೀಯ ಸರ್ಕಾರವು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

Omicron guidelines
Omicron guidelines
author img

By

Published : Dec 2, 2021, 11:15 AM IST

ನವದೆಹಲಿ: ಕೊರೊನಾ ರೂಪಾಂತರಿ ಒಮಿಕ್ರೋನ್ ಆತಂಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಿದೇಶಗಳಿಂದ ಅದರಲ್ಲೂ ಒಮಿಕ್ರೋನ್ ಪ್ರಕರಣಗಳು ದೃಢಪಟ್ಟ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಭಾರತದಲ್ಲಿ ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಹಾಗೂ ಕೋವಿಡ್-19 ತಡೆಗಟ್ಟುವ ಸಲುವಾಗಿ ಕೆಲ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದನ್ನು ಪಾಲಿಸಬೇಕು. ಈ ಮಾರ್ಗಸೂಚಿಗಳು ಡಿ.31ರ ವರೆಗೆ ಅನ್ವಯವಾಗಲಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಬೇಕು ಹಾಗೂ ಪರಿಣಾಮಕಾರಿಯಾಗಿ ಪರೀಕ್ಷೆ ಮಾಡಬೇಕು ಎಂದು ತಿಳಿಸಲಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ಪರೀಕ್ಷೆಗೆ ಒಳಪಡಿಸುವುದು, ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದು, 14 ದಿನಗಳ ಪ್ರಯಾಣ ವಿವರವನ್ನು ಸಲ್ಲಿಸುವುದು, RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್‌ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಮಿಕ್ರೋನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತದೆ. ಒಂದು ವೇಳೆ ಸೋಂಕು ಪತ್ತೆಯಾಗದಿದ್ದರೂ, 7 ದಿನಗಳವರೆಗೆ ಕ್ವಾರೆಂಟೈನ್‌ನಲ್ಲಿ ಇರುವುದು ಕಡ್ಡಾಯ.

ಇದನ್ನೂ ಓದಿ: ಅಮಲಲ್ಲಿ ಮಚ್ಚು ಬೀಸಿದ ಕುಡುಕ: ಮೈಸೂರಿನಲ್ಲಿ ಒಬ್ಬರ ಸಾವು, ಐವರ ಸ್ಥಿತಿ ಗಂಭೀರ

ಪ್ರಯಾಣ ಪ್ರಾರಂಭಿಸುವ ಮೊದಲು ತಿಳಿದಿರಬೇಕಾದ ಅಂಶಗಳೇನು?

1) ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಸಲ್ಲಿಸಬೇಕು.

2) ಪ್ರಯಾಣ ಆರಂಭಿಸುವುದಕ್ಕೂ 72 ಗಂಟೆಗಳ ಮೊದಲು ನಡೆಸಿದ ವೈದ್ಯಕೀಯ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡಬೇಕು.

3) ವಿಮಾನಯಾನ ಸಂಸ್ಥೆಗಳು ಈ ಷರತ್ತುಗಳ ನೆರವೇರಿಕೆಯನ್ನು ಖಚಿತಪಡಿಸಿಕೊಳ್ಳಬೇಕು.

ದೇಶಕ್ಕೆ ಆಗಮಿಸುವವರಿಗೆ ಈ ನಿಯಮಗಳು ಕಡ್ಡಾಯ:

1) ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ವಯಂ ಘೋಷಣೆ ಪ್ರತಿ ಹೊಂದಿರಬೇಕು.

2) RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್ ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

3) ಒಮಿಕ್ರೋನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತದೆ. ಒಂದು ವೇಳೆ ಸೋಂಕು ಪತ್ತೆಯಾಗದಿದ್ದರೂ, 7 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರುವುದು ಕಡ್ಡಾಯ.

4) ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, 7 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗುವುದು. ಭಾರತಕ್ಕೆ ಆಗಮಿಸಿದ 8ನೇ ದಿನದಂದು ಮರು-ಪರೀಕ್ಷೆ ನಡೆಸಿದ ವೇಳೆ ನೆಗೆಟಿವ್ ವರದಿ ಬಂದರೆ, ಮುಂದಿನ 7 ದಿನಗಳವರೆಗೆ ಅವರ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆಗೆ ಒಳಪಡಿಸಿಕೊಳ್ಳಬೇಕು.

5) ಒಮಿಕ್ರೋನ್ ಸೋಂಕು ಕಂಡುಬಂದ ದೇಶದಿಂದ ಬರುವ ಪ್ರಯಾಣಿಕರು 14 ದಿನಗಳ ಕಾಲ ಮನೆಯಲ್ಲಿ ಸ್ವಯಂ ನಿಗಾ ವಹಿಸುವಂತೆ ಸಲಹೆ.

6) ವಿಮಾನದಿಂದ ಇಳಿಯುವಾಗ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: ಕಾರು ಬಾವಿಯೊಳಗೆ ಬಿದ್ದು ತಾಯಿ, ಮಗ ಮೃತ್ಯು; ರಕ್ಷಣೆಗೆ ಧಾವಿಸಿದ ಈಜುಗಾರನೂ ಸಾವು

ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳೇನು?

ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ದೆಹಲಿಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳು ಈ ಕೆಳಗಿನಂತಿವೆ.

1) ಕರ್ನಾಟಕದಲ್ಲಿ ವಿದೇಶದಿಂದ ಆಗಮಿಸಿದ ಪ್ರಯಾಣಿಕರನ್ನು ಆಗಮನದ ನಂತರ ಪರೀಕ್ಷಿಸುವುದು. ಮತ್ತು ಏಳು ದಿನ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಕೋವಿಡ್​-19 ಆರ್‌ಟಿ-ಪಿಸಿಆರ್ ನೆಗೆಟಿವ್​ ವರದಿ ಕಡ್ಡಾಯ.

2) ಒಮಿಕ್ರೋನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್​ನಲ್ಲಿ ಎಲ್ಲಾ ಮಾಹಿತಿಯನ್ನು ನೀಡಬೇಕು. ಈ ಮಾಹಿತಿಯನ್ನು ವಿಭಾಗೀಯ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು.

3) ರಾಜ್ಯದ ಗಡಿಯಲ್ಲಿ ಕೊರೊನಾ ಟೆಸ್ಟ್​ ಹೆಚ್ಚಳಕ್ಕೆ ಕ್ರಮ

4) ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆ/ಹೋಮ್ ಐಸೋಲೇಶನ್, ಮಾನಿಟರಿಂಗ್ ತಂಡಗಳನ್ನು ಪುನಃ ಸಕ್ರಿಯಗೊಳಿಸಲಾಗಿದೆ.

5) ಹಾಸಿಗೆಯ ಲಭ್ಯತೆ ಮತ್ತು ಔಷಧಿ ಲಭ್ಯತೆಯ ಸ್ಥಿತಿಯನ್ನು ಕ್ರಮವಾಗಿ covid19.uk.gov.in ಮತ್ತು https://cdashboard.dcservices.in/ ನಲ್ಲಿ ನವೀಕರಿಸಬೇಕು.

6) ದೆಹಲಿಯಲ್ಲಿ ಕೇಂದ್ರೀಯ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವುದರ ಹೊರತಾಗಿ, LNJP ಆಸ್ಪತ್ರೆಯಲ್ಲಿ ಒಮಿಕ್ರೋನ್ ರೂಪಾಂತರದ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.