ETV Bharat / bharat

ಕ್ರೀಡಾಂಗಣದಲ್ಲಿ ಕೊಲೆ ಪ್ರಕರಣ: ಎಫ್​ಐಆರ್​​ನಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಹೆಸರು - Wrestler murder case

ಕ್ರೀಡಾಂಗಣದಲ್ಲಿ ನಡೆದ ಕುಸ್ತಿಪಟು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಹೆಸರನ್ನು ಎಫ್​ಐಆರ್​ನಲ್ಲಿ​ಸೇರಿಸಲಾಗಿದೆ.

FIR against Wrestler Sushil Kumar
ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಎಫ್​ಐಆರ್
author img

By

Published : May 6, 2021, 1:40 PM IST

ನವದೆಹಲಿ: ಉತ್ತರ ದೆಹಲಿಯ ಚಹತ್ರಸಲ್ ಕ್ರೀಡಾಂಗಣ ಸಂಕೀರ್ಣದೊಳಗೆ ನಡೆದ ಜಗಳದಲ್ಲಿ ಕುಸ್ತಿಪಟು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹೆಸರನ್ನು ಎಫ್​ಐಆರ್​ನಲ್ಲಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಶೀಲ್ ಕುಮಾರ್ ಒಲಿಂಪಿಕ್​ನಲ್ಲಿ ಎರಡು ವೈಯಕ್ತಿಕ ಪದಕಗಳನ್ನು ಪಡೆದ ದೇಶದ ಏಕೈಕ ಕ್ರೀಡಾಪಟುವಾಗಿದ್ದಾರೆ. ಉತ್ತರ ದೆಹಲಿಯ ಚಹತ್ರಸಲ್ ಕ್ರೀಡಾಂಗಣದೊಳಗೆ ಕುಸ್ತಿಪಟುಗಳ ನಡುವೆ ಜಗಳ ನಡೆದು ಓರ್ವ 23 ವರ್ಷದ ಕುಸ್ತಿಪಟು ಮೃತಪಟ್ಟಿದ್ದ. ಆತನ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯವಾಗಿತ್ತು.

ಚಹತ್ರಸ್ ಕ್ರೀಡಾಂಗಣದೊಳಗೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಡೆಲ್ ಟೌನ್​ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಪೊಲೀಸರು ಸ್ಥಳಕ್ಕೆ ತೆರಳಿದಾಗ ಕ್ರೀಂಡಾಂಗಣದ ಪಾರ್ಕಿಂಗ್ ಜಾಗದಲ್ಲಿ ಕೆಲವೊಂದು ಕಾರುಗಳನ್ನು ನಿಲ್ಲಿಸಿರುವುದು ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆಯ ವೇಳೆ, ಪಾರ್ಕಿಂಗ್ ಪ್ರದೇಶದಲ್ಲಿ ಸುಶೀಲ್ ಕುಮಾರ್, ಅಜಯ್, ಪ್ರಿನ್ಸ್, ಸೋನು, ಸಾಗರ್, ಅಮಿತ್ ಮತ್ತು ಇತರರ ನಡುವೆ ಜಗಳ ನಡೆದಿರುವುದು ಗೊತ್ತಾಗಿದೆ. ಈ ಸಂಬಂಧ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಿಜೆಆರ್​ಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡವರನ್ನು ಮಾಡೆಲ್ ಟೌನ್ ನಿವಾಸಿ ಸಾಗರ್, ಹರಿಯಾಣದ ರೋಹ್ಟಕ್ ನಿವಾಸಿ ಅಮಿತ್ ಕುಮಾರ್ (27) ಮತ್ತು ಹರಿಯಾಣದ ಸೋನಿಪತ್ ನಿವಾಸಿ ಸೋನು (35) ಎಂದು ಗುರುತಿಸಲಾಗಿದೆ.

ಘಟನೆ ನಡೆದ ಸ್ಥಳ ಮತ್ತು ಎಲ್ಲಾ ಐದು ವಾಹನಗಳನ್ನು ಪರಿಶೀಲಿಸಲಾಗಿದೆ. ತಪಾಸಣೆಯ ಸಮಯದಲ್ಲಿ ಒಂದು ಸ್ಕಾರ್ಪಿಯೋದಲ್ಲಿ ಐದು ಲೈವ್ ಕಾರ್ಟ್ರಿಡ್ಜ್​ಗಳೊಂದಿಗೆ ಒಂದು ಡಬಲ್ ಬ್ಯಾರೆಲ್ ಲೋಡ್ ಗನ್ ಮತ್ತು ಎರಡು ಮರದ ತುಂಡುಗಳು ಪತ್ತೆಯಾಗಿವೆ. ವಿಧಿ ವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ವಾಯುವ್ಯ) ಗುರಿಕ್ಬಾಲ್ ಸಿಂಗ್ ಸಿಧು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.