ಮಡಕಶಿರಾ( ಆಂಧ್ರಪ್ರದೇಶ): ಶಾತವಾಹನರ ಕಾಲದ ಲಾರ್ಡ್ ಗಣೇಶ ವಿಗ್ರಹವೊಂದು ಅನಂತಪುರ ಜಿಲ್ಲೆಯ ಮಡಕಶಿರಾ ಮಂಡಲದ ನೀಲಕಂಠಪುರಂ ಗ್ರಾಮದಲ್ಲಿ ಸಿಕ್ಕಿದೆ.
ಪಿಸಿಸಿ ಮಾಜಿ ಅಧ್ಯಕ್ಷ ರಘುವೀರ ರೆಡ್ಡಿ ಅವರ ಆಹ್ವಾನದ ಮೇರೆಗೆ ಸಂಸ್ಕೃತಿ ಕೇಂದ್ರದ ಸಿಇಒ ಡಾ ಶಿವನಾಗಿರೆಡ್ಡಿ ಈ ಭಾಗದಲ್ಲಿ ಉತ್ಖನನ ನಡೆಸಿದಾಗ ಈ ವಿಗ್ರಹ ದೊರೆತಿದ್ದು, ಈ ವಿಗ್ರಹ 2ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ನ ಆಚಾರ್ಯ ಆರ್ ಹೆಚ್ ಕುಲಕರ್ಣಿ ಹಾಗೂ ತೆಲಂಗಾಣ ಇತಿಹಾಸ ವಿಭಾಗದ ರಾಮಾಜು ಹರಗೋಪಾಲ್ ಅವರು ಇದು ತೆಲಗು ರಾಜ್ಯಗಳಲ್ಲಿ ಸಿಕ್ಕ ಅತ್ಯಂತ ಪುರಾತನ ಗಣೇಶ ವಿಗ್ರಹವಾಗಿದೆ ಎಂದು ಖಚಿತಪಡಿಸಿದ್ದಾರೆ.
ಓದಿ: ಹಸಿವು ತಾಳಲಾಗದೇ ಊಟ ಮಾಡಿ ಬಿಸಾಡಿದ ಫ್ಲೇಟ್ ನೆಕ್ಕಿದ ಬಾಲಕ... ವಿಡಿಯೋ ವೈರಲ್!