ETV Bharat / bharat

Building Collapses: ಮಥುರಾದಲ್ಲಿ ಹಳೆಯ ಕಟ್ಟಡ ಕುಸಿದು ಐವರು ಸಾವು; ಸಿಸಿಟಿವಿ ದೃಶ್ಯ!

Old Building Collapses in Mathura: ಉತ್ತರ ಪ್ರದೇಶದ ಮಥುರಾದಲ್ಲಿ ಹಳೆಯ ಕಟ್ಟಡ ಕುಸಿದು ಬಿದ್ದು ಐವರು ಸಾವನ್ನಪ್ಪಿದ್ದಾರೆ.

author img

By

Published : Aug 15, 2023, 8:33 PM IST

Updated : Aug 15, 2023, 10:36 PM IST

Old building collapses near Banke Bihari Temple in Mathura Vrindavan, Uttar pradesh
ಮಥುರಾದಲ್ಲಿ ಹಳೆಯ ಕಟ್ಟಡ ಕುಸಿದು ಐವರ ಸಾವು... ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಥುರಾ (ಉತ್ತರ ಪ್ರದೇಶ): ಹಳೆಯ ಕಟ್ಟಡವೊಂದು ಕುಸಿದು ಬಿದ್ದು ಐವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ಇಂದು (ಮಂಗಳವಾರ) ಸಂಜೆ ನಡೆಯಿತು. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳ ತಂಡ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿದರು.

ಮೃತರನ್ನು ಕಾನ್ಪುರ ನಿವಾಸಿಗಳಾದ ಗೀತಾ ಕಶ್ಯಪ್, ಅರವಿಂದ್ ಕುಮಾರ್, ರಶ್ಮಿ ಗುಪ್ತಾ ಹಾಗೂ ಸ್ಥಳೀಯ ನಿವಾಸಿ ಅಂಜು ಮುಗಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮಥುರಾ ವೃಂದಾವನ ಸಮೀಪದ ಬಂಕೆ ಬಿಹಾರಿ ದೇವಸ್ಥಾನದಿಂದ ಕೇವಲ 200 ಮೀಟರ್ ದೂರದಲ್ಲಿ ಹಳೆಯ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • VIDEO | A portion of an old building collapses near Banke Bihari Temple in Vrindavan. More details are awaited. pic.twitter.com/lRUd9H7GTr

    — Press Trust of India (@PTI_News) August 15, 2023 " class="align-text-top noRightClick twitterSection" data=" ">

ಹಲವು ಪ್ರವಾಸಿಗರು ಬೆಂಕಿ ಬಿಹಾರಿ ದೇವಸ್ಥಾನದ ಬಳಿಯಿಂದ ಬರುತ್ತಿದ್ದರು. ಈ ವೇಳೆ ಏಕಾಏಕಿ ಹಳೆಯ ಕಟ್ಟಡದ ಒಂದು ಭಾಗ ಕುಸಿದಿದೆ. ಅನೇಕರು ಚೆಲ್ಲಾಪಿಲ್ಲಿಯಾಗಿ ಓಡಲು ಯತ್ನಿಸಿದರು. ಅಷ್ಟರಲ್ಲೇ, ಕಟ್ಟಡದ ಅವಶೇಷಗಳ ಮೇಲೆ ಬಿದ್ದು ಐವರು ಸಾವನ್ನಪ್ಪಿದರು. ಹಲವರು ಗಾಯಗೊಂಡರು. ಗಾಯಾಳುಗಳ ನಿಖರ ಸಂಖ್ಯೆ ಇನ್ನಷ್ಟೇ ತಿಳಿಯಬೇಕಿದೆ ಎಂದು ಅವರು ಹೇಳಿದ್ದಾರೆ.

ಈ ದುರ್ಘಟನೆ ಸಂಭವಿಸುತ್ತಿದ್ದ ಸುತ್ತಮುತ್ತಲಿನ ಜನರು ಸಂತ್ರಸ್ತರ ಸಹಾಯಕ್ಕಾಗಿ ದೌಡಾಯಿಸಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳು ಸಹ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನಿಂದ ಅವಶೇಷಗಳ ಅಡಿಯಲ್ಲಿ ಹೂತುಹೋದ ಜನರನ್ನು ಹೊರತೆಗೆಯಲಾಗಿದೆ. ಕನಿಷ್ಟ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಕಟ್ಟಡದ ಒಂದು ಭಾಗ ಕುಸಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಪಿಟಿಐ ಸುದ್ದಿಸಂಸ್ಥೆ ಟ್ವೀಟ್​ ಮಾಡಿದೆ. ರಸ್ತೆ ಬದಿಯಲ್ಲಿ ಜನರು ತಿನಿಸುಗಳ ಅಂಗಡಿಯೊಂದರ ಮುಂದೆ ನಿಂತಿರುವುದು ಹಾಗೂ ಅದೇ ರಸ್ತೆಯಲ್ಲಿ ಕಾರು ಬರುತ್ತಿದ್ದು, ಈ ವೇಳೆ ಕಟ್ಟಡ ಕುಸಿಯುತ್ತಿರುವ ದೃಶ್ಯಗಳು ಇದರಲ್ಲಿ ಕಾಣಬಹುದು.

ಇದನ್ನೂ ಓದಿ: Rajasthan Accident: ನಿಂತಿದ್ದ ಕಂಟೇನರ್‌ಗೆ ಬೊಲೆರೋ ಡಿಕ್ಕಿ: ರಾಜಸ್ಥಾನದಲ್ಲಿ ಒಂದೇ ಕುಟುಂಬದ 6 ಮಂದಿ ಸಾವು!

ಸೂರತ್​ನಲ್ಲಿ ಇಬ್ಬರು ಕಾರ್ಮಿಕರ ಸಾವು: ಮತ್ತೊಂದೆಡೆ, ಗುಜರಾತ್​ನ ಸೂರತ್​ನಲ್ಲಿ ಶಾಲೆಯೊಂದರ ಛಾವಣಿ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಇಲ್ಲಿನ ಕಪೋದ್ರಾ ಪ್ರದೇಶದ ಡೈಮಂಡ್ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಗೆ ರಜೆ ಕಾರಣ ಛಾವಣಿ ದುರಸ್ತಿ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿತ್ತು.

ಈ ವೇಳೆ ಛಾವಣಿ ಕುಸಿದು ಬಿದ್ದಿದ್ದು, ಮೂವರು ಕಾರ್ಮಿಕರ ಅವಶೇಷಗಳಡಿ ಸಿಲುಕಿದ್ದರು. ಘಟನೆಯ ಮಾಹಿತಿ ಅರಿತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಅವಶೇಷಗಳಡಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಿದರು. ಅಲ್ಲದೇ, ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ವೇಳೆ ಇಬ್ಬರ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Last Updated : Aug 15, 2023, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.