ನವದೆಹಲಿ: ಕಳೆದೊಂದು ತಿಂಗಳಿನಿಂದ ಸ್ಥಿರತೆ ಕಾಯ್ದುಕೊಂಡಿ ತೈಲ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. ಸ್ಟೇಟ್ ರನ್ ಆಯಿಲ್ ಮಾರ್ಕೆಟಿಂಗ್ ಕಂಪನಿಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಭಾನುವಾರದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 15ರಿಂದ 20 ಪೈಸೆ ಹಾಗೂ ಡೀಸೆಲ್ನ ಪ್ರತಿ ಲೀಟರ್ಗೆ 18ರಿಂದ 20 ಪೈಸೆ ಇಳಿಕೆಯಾಗಿದೆ.
ಕಳೆದ ಒಂದು ತಿಂಗಳಿನಿಂದ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್ಗೆ 101.64 ರೂಪಾಯಿಯಂತೆ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 89.07 ರೂಪಾಯಿಯಂತೆ ಲಭ್ಯವಾಗುತ್ತಿದೆ. ಆದರೆ ಮುಂಬೈನಲ್ಲಿ ಈ ದರದಲ್ಲಿ ಭಾರಿ ವ್ಯತ್ಯಾಸವಿದ್ದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.66 ಹಾಗೂ ಡೀಸೆಲ್ಗೆ 96.64 ರೂಪಾಯಿ ನೀಡಬೇಕಿದೆ.
ಕಳೆದ ಮೇ 29ರಂದು ಮುಂಬೈ ಮಹಾನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100ರ ಗಡಿ ದಾಟಿತ್ತು. ಇದಾದ ಬಳಿಕ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ.
ಆದರೆ ತಮಿಳುನಾಡಿನಲ್ಲಿ ರಾಜ್ಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3 ರೂಪಾಯಿ ಶುಲ್ಕ ಕಡಿತಗೊಳಿಸಿ ಲೀಟರ್ ಪಟ್ರೋಲ್ ಈಗ 99.32 ರೂಪಾಯಿಗೆ ಲಭ್ಯವಾಗುತ್ತಿದೆ.
ಕೊನೆಯ ಬಾರಿ ಅಂದರೆ ಜುಲೈ 17ರಂದು ಕೊನೆಯ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು ಬಿಟ್ಟರೆ ಈವರೆಗೆ ಇಳಿಕೆಯಾಗಿರಲಿಲ್ಲ. 35 ದಿನಗಳ ಬಳಿಕ ಇದೀಗ ತೈಲ ಬೆಲೆಯಲ್ಲಿ ಇಳಿಕೆ ಕಂಡಿದೆ.