ಬಲಂಗಿರ್ (ಒಡಿಶಾ): ಬೆರಳ ತುದಿಯಲ್ಲಿ ಹಾಕಿ ಸ್ಟಿಕ್ ಬ್ಯಾಲೆನ್ಸ್ ಮಾಡಿ ಒಡಿಶಾದ ಬಲಂಗಿರ್ ಜಿಲ್ಲೆಯ ಯುವಕನೊಬ್ಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪ್ರವೇಶಿಸಿದ್ದಾರೆ. ಕರ್ನಾಟಕ ಯುವಕನ ದಾಖಲೆ ಮುರಿದು ರಾಜ್ ಗೋಪಾಲ್ ಭೋಯ್ ಈ ಸಾಧನೆ ಮಾಡಿದ್ದಾರೆ.
2017 ರಲ್ಲಿ ಕರ್ನಾಟಕದ ಹಿಮಾಂಶು ಗುಪ್ತಾ 2 ಗಂಟೆ, 22 ನಿಮಿಷ 22 ಸೆಕೆಂಡುಗಳ ಕಾಲ ಬೆರಳ ತುದಿಯಲ್ಲಿ ಹಾಕಿ ಸ್ಟಿಕ್ ನಿಲ್ಲಿಸಿಕೊಂಡು ಬ್ಯಾಲೆನ್ಸ್ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಿದ್ದರು. ಆದರೆ ಬಲಂಗಿರ್ ಜಿಲ್ಲೆಯ ಜಮುತ್ಜುಲಾ ಗ್ರಾಮದ ರಾಜ್ ಗೋಪಾಲ್ ಭೋಯ್ ಅವರು 3 ಗಂಟೆ 35 ನಿಮಿಷಗಳ ಕಾಲ ಹಾಕಿ ಸ್ಟಿಕ್ ಬ್ಯಾಲೆನ್ಸ್ ಮಾಡಿ ಹಳೆಯ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ: ಬೆರಳ ತುದಿಯಲ್ಲಿ ಕೋಲು ನಿಲ್ಲಿಸಿ ಸಖತ್ ಬ್ಯಾಲೆನ್ಸ್: ಶಿವಮೊಗ್ಗದ ಶಿಕ್ಷಕ ಸ್ಟ್ಯಾನಿ ದಾಖಲೆಗಳ ವೀರ
ಒಡಿಶಾದ ಕಾಂತಬಂಜಿಯಲ್ಲಿ ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವ 'ಪಂಚ್ ಮ್ಯಾನ್ ಆಫ್ ಇಂಡಿಯಾ' ಎಂದು ಕರೆಯುವ ಸತ್ಯಪೀರಾ ಪಧಾನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ ಗೋಪಾಲ್ ಈ ಸಾಧನೆ ಮಾಡಿದ್ದಾರೆ.