ಕೇಂದ್ರಾಪರಾ(ಒಡಿಶಾ): ಮದುವೆಯಾದ ಐದು ದಿನಗಳ ನಂತರ ಯುವಕ ಸಾವಿಗೀಡಾಗಿದ್ದು, ಕೋವಿಡ್ ನಿಂದ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಕೇಂದ್ರಾಪರಾ ಜಿಲ್ಲೆಯ ರಾಜ್‌ನಿಕಿಕಾ ಬ್ಲಾಕ್‌ನ ವ್ಯಾಪ್ತಿಯ ದುರ್ಗಡೆಬಿಪದ ಗ್ರಾಮದಲ್ಲಿ ಈ ಘಟನೆ ಜರುಗಿದೆ.
ಸಂಜಯ್ ಕುಮಾರ್ ನಾಯಕ್ ಎಂಬ ಯುವಕ ಸಾವಿಗೀಡಾದವ. ಈತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೇ 9 ರಂದು ನಿಗದಿಯಾಗಿದ್ದ ಮದುವೆಗಾಗಿ ಮೇ 1 ರಂದು ಗ್ರಾಮಕ್ಕೆ ತೆರಳಿದ್ದ.
26 ವರ್ಷದ ಯುವಕ ಗ್ರಾಮಕ್ಕೆ ಬರುವ ಮುನ್ನ ಬೆಂಗಳೂರಿನಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೆ, ಗ್ರಾಮವನ್ನು ತಲುಪಿದ ನಂತರ ಆತನ ಆರೋಗ್ಯ ಸ್ಥಿತಿ ಕ್ಷೀಣಿಸಲು ಪ್ರಾರಂಭಿಸಿತ್ತು.
ವಿವಾಹ ಸಮಾರಂಭದದಲ್ಲಿ ಓಡಾಡುತ್ತಿದ್ದರಿಂದ ಈತನೂ ಸೇರಿದಂತೆ ಕುಟುಂಬದವರೂ ಕೂಡ ಆರೋಗ್ಯದ ಕಡೆ ಗಮನ ಹರಿಸಿಲ್ಲ. ಮೇ 12 ರಂದು ಮದುವೆಯ ನಂತರದ ನಾಲ್ಕನೇ ದಿನದ ರಾತ್ರಿ ಆಚರಣೆಯಲ್ಲಿ ಆತನ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಜಾಜ್‌ಪುರದ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಅವರನ್ನು ಚಿಕಿತ್ಸೆಗಾಗಿ ಭುವನೇಶ್ವರ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಭುವನೇಶ್ವರಕ್ಕೆ ಹೋಗುವ ಮಾರ್ಗಮಧ್ಯೆ ಈತ ಪ್ರಾಣ ಬಿಟ್ಟಿದ್ದಾನೆ.