ETV Bharat / bharat

Odisha train tragedy: ಇನ್ನೂ ಸಿಗದ 81 ಶವಗಳ ಗುರುತು, ಸಿಬಿಐನಿಂದ ಮೂವರು ರೈಲ್ವೆ ನೌಕರರ ವಿಚಾರಣೆ - ಒಡಿಶಾ ರೈಲು ದುರಂತ

ಒಡಿಶಾ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಪೈಕಿ ಇನ್ನೂ 81 ಶವಗಳ ಗುರುತು ಪತ್ತೆಯಾಗುತ್ತಿಲ್ಲ. ಇತ್ತ ದುರಂತವನ್ನು ತನಿಖೆ ನಡೆಸುತ್ತಿರುವ ಸಿಬಿಐ ತಂಡ ಮೂವರು ರೈಲ್ವೆ ಸಿಬ್ಬಂದಿಯನ್ನು ವಿಚಾರಣೆಗೆ ಕರೆದೊಯ್ದಿದೆ.

ಇನ್ನೂ ಪತ್ತೆಯಾಗದ 81 ಶವ
ಇನ್ನೂ ಪತ್ತೆಯಾಗದ 81 ಶವ
author img

By

Published : Jun 12, 2023, 7:18 PM IST

ಭುವನೇಶ್ವರ್​: ಒಡಿಶಾ ಭೀಕರ ತ್ರಿವಳಿ ರೈಲು ದುರಂತದಲ್ಲಿ ಸಾವನ್ನಪ್ಪಿದ 275 ಮಂದಿ ಪೈಕಿ 81 ಶವಗಳ ಗುರುತು ಪತ್ತೆಯಾಗುತ್ತಿಲ್ಲ. ಛಿದ್ರವಾಗಿರುವ ದೇಹಗಳನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಲಾಗಿದೆ. ಮತ್ತೊಂದೆಡೆ ದುರಂತದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಮೂವರು ರೈಲ್ವೆ ಸಿಬ್ಬಂದಿಯನ್ನು ವಿಚಾರಣೆಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ರೈಲು ದುರಂತ ಸೃಷ್ಟಿಸಿದ ಭಯಾನಕತೆ ಅಷ್ಟಿಷ್ಟಲ್ಲ. ಮಡಿದವರ ಶವ ವಿಲೇವಾರಿಯೇ ದೊಡ್ಡ ಸವಾಲಾಗಿದೆ. ಈವರೆಗೂ 193 ದೇಹಗಳನ್ನು ಏಮ್ಸ್ ಮತ್ತು ಇತರ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು. 112 ದೇಹಗಳನ್ನು ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ 81 ಶವಗಳ ಗುರುತೇ ಸಿಗುತ್ತಿಲ್ಲ ಎಂದು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಕಮಿಷನರ್ ವಿಜಯ್ ಅಮೃತ ಕುಲಂಗೆ ಹೇಳಿದ್ದಾರೆ.

ಮೃತರ ವಾರಸುದಾರರು ಯಾರೆಂಬುದು ತಿಳಿಯದ ಕಾರಣ, ಆ ಶವಗಳನ್ನು ಡೀಪ್ ಫ್ರೀಜರ್ ಕಂಟೇನರ್‌ನಲ್ಲಿ ಇರಿಸಿದ್ದೇವೆ. ಕುಟುಂಬಸ್ಥರನ್ನು ಗುರುತಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಇಲಾಖೆಯು ಇತರ ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅವರು ಹೇಳಿದರು.

ಒಡಿಶಾ ಸರ್ಕಾರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಇಲ್ಲಿ ಸಂರಕ್ಷಿಸಲಾಗಿರುವ ಮಾನವ ಮೃತದೇಹಗಳನ್ನು ಶೀಘ್ರವಾಗಿ ಗುರುತಿಸಲು ಮತ್ತು ವಿಲೇವಾರಿ ಮಾಡಲು ಸಹಾಯ ಕೋರಿದೆ.

ವಿಪಕ್ಷಗಳು- ಕೇಂದ್ರದ ನಡುವೆ ಕಿತ್ತಾಟ; ರೈಲು ದುರಂತವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ದೇಶದಲ್ಲಿ ರೈಲುಗಳ ಸುರಕ್ಷತಾ ಕಾರ್ಯವಿಧಾನದ ಮೇಲೆ ಹಲವು ವಿರೋಧ ಪಕ್ಷಗಳು ಶಂಕೆ ವ್ಯಕ್ತಪಡಿಸಿವೆ. ಪ್ರಯಾಣಿಕರ ರೈಲ್ವೆ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿವೆ.

ಇತ್ತ, ರೈಲ್ವೇ ಮಂಡಳಿ ಎಲ್ಲಾ ಸಿಗ್ನಲಿಂಗ್​ಗಳಿಗೆ ಡಬಲ್ ಲಾಕಿಂಗ್ ವ್ಯವಸ್ಥೆಯನ್ನು ಮಾಡಲು ಆದೇಶಿಸಿದೆ. ಒಡಿಶಾ ರೈಲು ದುರಂತದಲ್ಲಿ ಇಂಟರ್‌ಲಾಕಿಂಗ್‌ ವ್ಯವಸ್ಥೆಯಲ್ಲಿ ಲೋಪ ಎಸಗಲಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ರೈಲ್ವೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ತಂತ್ರವನ್ನು 'ಟ್ಯಾಂಪರ್ ಪ್ರೂಫ್' ಮಾಡಲಾಗಿದೆ. ಹೀಗಾಗಿ ಡಬಲ್​ ಲಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲು ಸೂಚಿಸಲಾಗಿದೆ. ಇದು ಅನುಮತಿ ರಹಿತ ಕಾರ್ಯವನ್ನು ಖಚಿತಪಡಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬಿಐನಿಂದ ರೈಲ್ವೆ ನೌಕರರ ವಿಚಾರಣೆ: 275 ಜನರ ಸಾವಿಗೆ ಕಾರಣವಾಗಿರುವ ರೈಲು ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ತಂಡವು ಬಹನಗಾ ರೈಲ್ವೆ ನಿಲ್ದಾಣದ ಮೂವರು ಸಿಬ್ಬಂದಿಯನ್ನು ಸೋಮವಾರ ವಿಚಾರಣೆಗೆ ಕರೆದೊಯ್ದಿದೆ ಎಂದು ವರದಿಯಾಗಿದೆ. ಸಿಬಿಐ ಅಧಿಕಾರಿಗಳ ತಂಡ ಸ್ಟೇಷನ್ ಮಾಸ್ಟರ್, ತಾಂತ್ರಿಕ ಸಿಬ್ಬಂದಿ ಮತ್ತು ಇನ್ನೊಬ್ಬ ಉದ್ಯೋಗಿಯನ್ನು ಕರೆದೊಯ್ದಿದೆ. ಮೂವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ನಂತರ ದುರಂತಕ್ಕೆ ಕಾರಣವಾದ ಅಂಶಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಸಂಭವನೀಯ ಪಿತೂರಿ ಮತ್ತು ತಾಂತ್ರಿಕ ದೋಷದಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದೆ.

ಇದಕ್ಕೂ ಮುನ್ನ, ಸಿಬಿಐ ಕೆಲವು ರೈಲ್ವೆ ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ. ಅವರ ಕರೆ ದಾಖಲೆಗಳು, ವಾಟ್ಸಾಪ್ ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆ ಸೇರಿದಂತೆ ಎಲ್ಲ ರೀತಿಯಲ್ಲಿ ಪರಿಶೀಲನೆ ನಡೆಸುತ್ತಿದೆ. ಇದಲ್ಲದೆ, ತನಿಖೆಯ ಭಾಗವಾಗಿ ಲೋಕೋ ಪೈಲಟ್‌ಗಳನ್ನೂ ಸಿಬಿಐ ಪ್ರಶ್ನಿಸಿದೆ. ಈ ಹಿಂದೆ ವಿಧಿವಿಜ್ಞಾನ ಮತ್ತು ತಾಂತ್ರಿಕ ತಂಡಗಳ ಜತೆಗೆ ಸಿಬಿಐ ತಂಡ ಕೂಡ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿತ್ತು.

ಇದನ್ನೂ ಓದಿ: Odisha Rail Mishap Video: ಒಡಿಶಾ ಭೀಕರ ರೈಲು ದುರಂತಕ್ಕೂ ಮುನ್ನ ಸೆರೆಯಾದ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.