ETV Bharat / bharat

75 ವರ್ಷಗಳಿಂದ ಮಕ್ಕಳಿಗೆ ಉಚಿತ ವಿದ್ಯಾದಾನ: 98 ವರ್ಷದ ನಂದ ಮಾಸ್ಟರ್​ಗೆ 'ಪದ್ಮಶ್ರೀ'

ಒಡಿಶಾದ ಶಿಕ್ಷಕ ನಂದಕಿಶೋರ್ ಪ್ರಸ್ಟಿ(98) ಅವರಿಗೆ 2020ನೇ ಸಾಲಿನ ಪದ್ಮಶ್ರೀ ಪುರಸ್ಕಾರ ದೊರೆತಿದೆ. ಇವರು ಕಳೆದ 7 ದಶಕದಿಂದ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ.

Odisha Nanda Sir received Padmashree for free teaching from last 75 years
ನಂದ ಮಾಸ್ಟರ್​ಗೆ ಪದ್ಮಶ್ರೀ ಪುರಸ್ಕಾರ
author img

By

Published : Nov 8, 2021, 7:15 PM IST

Updated : Nov 8, 2021, 7:27 PM IST

ಜೈಪುರ(ಒಡಿಶಾ): 98 ವರ್ಷ ವಯಸ್ಸಿನ ನಂದಕಿಶೋರ್ ಪ್ರಸ್ಟಿ ಅಲಿಯಾಸ್ ನಂದಾ ಸರ್ ಅವರು 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಮ್ಮ ಊರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಂದಾ ಮಾಸ್ಟರ್ ಚತ್ಸಾಲಿ ಎಂದೇ ಚಿರಪರಿಚಿತರಾಗಿರುವ ಇವರು, ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವುದು ನಂದಾ ಸರ್​​ ಅವರ ಉದ್ದೇಶವಾಗಿದೆ.

ಇದನ್ನೂ ಓದಿ: ಮೈಸೂರಿನ ಸುಧರ್ಮ ಸಂಸ್ಕೃತ ಪತ್ರಿಕೆಯ ಕೆ.ಎಸ್.ಜಯಲಕ್ಷ್ಮಿಗೆ 'ಪದ್ಮಶ್ರೀ' ಗೌರವ

98ರ ಹರೆಯದಲ್ಲಿಯೂ ನಂದ ಮಾಸ್ಟರ್​ ಇಂದಿಗೂ ಮರದ ಕೆಳಗೆ ಬಯಲಿನಲ್ಲಿ ಮರದ ಕೆಳಗೆ ಕುಳಿತು ಮಕ್ಕಳಿಗೆ ಪಾಠ ಹೇಳುವ ಕಾರ್ಯವನ್ನು ಮುಂದುವರಿಸಿದ್ದಾರೆ. ಜೈಪುರ ಜಿಲ್ಲೆಯ ಕಂಠೀರ ಗ್ರಾಮದಲ್ಲಿ ನಂದಾ ಮಾಸ್ಟರ್​​ ಇಂದಿಗೂ ಮಕ್ಕಳಿಗೆ ಹಾಗೂ ಹಿರಿಯ ಅನಕ್ಷರಸ್ಥ ನಾಗರಿಕರಿಗೆ ಅಕ್ಷರ ಹೇಳಿಕೊಡುವ ತಮ್ಮ ಚತ್ಸಾಲಿ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಸುಮಾರು 7 ದಶಕಗಳಿಂದ ಗ್ರಾಮದ ಹನುಮಾನ್​​ ದೇವಸ್ಥಾನದ ಬಳಿ ಇರುವ ಮರದ ಕೆಳಗೆ ಈ ಚತ್ಸಾಲಿ ನಡೆಯುತ್ತಿದೆ.

ಇದನ್ನೂ ಓದಿ: ಹರೇಕಳ ಹಾಜಬ್ಬರಿಗೆ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರದಾನ

3 ರಿಂದ 4 ವರ್ಷದೊಳಗಿನ ಮಕ್ಕಳು ಹತ್ತಿರದ ಶಾಲೆಗೆ ದಾಖಲಾಗುವ ಮೊದಲು ಇಲ್ಲಿಗೆ ಬಂದು ಒರಿಯಾ ವರ್ಣಮಾಲೆಯನ್ನು ಕಲಿಯುತ್ತಾರೆ. 1946 ರಿಂದಲೂ ನಂದ ಸರ್ ಉಚಿತವಾಗಿ​​ ಶಿಕ್ಷಣ ನೀಡುವ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ. ತಮ್ಮ ಚತ್ಸಾಲಿ ಮೂಲಕ 3000 ಸಾವಿರಕ್ಕೂ ಹೆಚ್ಚು ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಇಂದು ಅವರು ತಮ್ಮ ಈ ಸೇವೆಗಾಗಿ ಭಾರತದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಯನ್ನು ಪಡೆದಿದ್ದಾರೆ.ಜೈಪುರ ಜಿಲ್ಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಏಕೈಕ ವ್ಯಕ್ತಿ ನಂದಕಿಶೋರ್ ಪ್ರಸ್ಟಿ.

Last Updated : Nov 8, 2021, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.