ಭುವನೇಶ್ವರ(ಒಡಿಶಾ): ಇಚ್ಛೆಯೊಂದಿದ್ದರೆ ದಾರಿ ತಾನಾಗೇ ಸೃಷ್ಟಿಯಾಗುವುದು ಎಂಬ ನಾಣ್ಣುಡಿಯಂತೆ ಇಲ್ಲೊಬರು ಜನಪ್ರತಿನಿಧಿ ತಮ್ಮ 58ನೇ ವಯಸ್ಸಿನಲ್ಲಿ ಮಕ್ಕಳಂತಾಗಿ, ಪರೀಕ್ಷೆಗೆ ಕುಳಿತು ಪಾಸ್ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಫುಲ್ಬಾನಿಯ 58 ವರ್ಷದ ಬಿಜೆಡಿ ಶಾಸಕ ಅಂಗದಾ ಕನ್ಹರ್ ಅವರು, 10 ನೇ ತರಗತಿಯ ಪರೀಕ್ಷೆ ಎದುರಿಸಿ ಪಾಸ್ ಆಗಿ ಇತರರಿಗೆ ಮಾದರಿಯಾಗಿದ್ದಾರೆ. 500 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಬಿಜೆಡಿ ಶಾಸಕರು 364 ಅಂಕಗಳನ್ನು ಪಡೆಯುವ ಮೂಲಕ ಬಿ ಗ್ರೇಡ್ ಪಡೆದು ತೇರ್ಗಡೆಯಾಗಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ 1978ರಲ್ಲಿ ಎಚ್‌ಎಸ್‌ಸಿ ಪರೀಕ್ಷೆಗೆ ಹಾಜರಾಗಲು ಶಾಸಕರಿಗೆ ಸಾಧ್ಯವಾಗಲಿಲ್ಲ. ಆ ಕೊರತೆ ಅವರನ್ನು ಕಾಡುತ್ತಲೇ ಇತ್ತು.
ಜೀವನ ನಡೆಸಲು ಆಗ ಕಷ್ಟಪಟ್ಟ ಕನ್ಹರ್ ಅವರು ನಂತರ ರಾಜ್ಯದ ಜನಪ್ರತಿನಿಧಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಈಗ ತಾವು ಹಿಂದೆ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು 58ರ ಹರೆಯದಲ್ಲಿ ಪೂರೈಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಮನದ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ.
ಇದನ್ನು ಓದಿ: ವೀರೇಂದ್ರ ಹೆಗ್ಗಡೆ,ಇಳಯರಾಜ, ಪಿಟಿ ಉಷಾ ಸೇರಿ ನಾಲ್ವರು ದಿಗ್ಗಜರು ರಾಜ್ಯಸಭೆಗೆ ನಾಮನಿರ್ದೇಶನ.. ಮೋದಿ ಅಭಿನಂದನೆ