ETV Bharat / bharat

ಒಡಿಶಾ ಬಿಜೆಪಿ ಮುಖಂಡ ಹತ್ಯೆ ಕೇಸ್ ​: ಎಫ್​ಐಆರ್​ನಲ್ಲಿ ಬಿಜೆಡಿ ಸಚಿವನ ಹೆಸರು

ಒಡಿಶಾ ಸರ್ಕಾರದ ಸಚಿವ ಪ್ರತಾಪ್ ಜೆನಾ ಅವರ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ ಕಾರಣ ಮಹಾಂಗಾದ ಹಿರಿಯ ಬಿಜೆಪಿ ಮುಖಂಡ ಕುಲಮಣಿ ಬರಾಲಾ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಸಚಿವರ ಹೆಸರು ಎಫ್‌ಐಆರ್‌ನಲ್ಲೂ ಉಲ್ಲೇಖವಿದೆ. ಒಡಿಶಾ ಬಂಗಾಳ ದಾರಿಯಲ್ಲಿ ಹೋಗುತ್ತಿದೆಯೇ?..

ಎಫ್​ಐಆರ್​ನಲ್ಲಿ ಬಿಜೆಡಿ ಸಚಿವನ ಹೆಸರು
ಎಫ್​ಐಆರ್​ನಲ್ಲಿ ಬಿಜೆಡಿ ಸಚಿವನ ಹೆಸರು
author img

By

Published : Jan 4, 2021, 2:14 PM IST

ಭುವನೇಶ್ವರ : ಬಿಜೆಪಿ ಮುಖಂಡ ಕುಲಮಣಿ ಬರಾಲಾ ಕೊಲೆ ಪ್ರಕರಣದ ಎಫ್‌ಐಆರ್​ನಲ್ಲಿ ಆಡಳಿತರೂಢ ಪಕ್ಷ ಬಿಜೆಡಿಯ ಸಚಿವ ಮತ್ತು ಮಹಂಗಾ ಶಾಸಕ ಪ್ರತಾಪ್ ಜೆನಾ ಹೆಸರಿದೆ.

ಮೃತರ ಪುತ್ರ ರಾಮಕಾಂತ್ ಬರಾಲ್ ನೀಡಿದ ದೂರಿನ ಪ್ರಕಾರ, "ಬಿಜೆಪಿಯ ಸಾಲಿಪುರ ಉಸ್ತುವಾರಿ, ಮಹಂಗಾ ಬ್ಲಾಕ್ ಮಾಜಿ ಅಧ್ಯಕ್ಷ ಕುಲಮಣಿ ಜೆನಾ ಮತ್ತು ಅವರ ಸಹವರ್ತಿ ದಿಬಯಸಿಂಗ್ ಬರಾಲ್ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ 13 ಮಂದಿಯಲ್ಲಿ ಸಚಿವರು ಸೇರಿದ್ದಾರೆ" ಎಂದು ಆರೋಪಿಸಿದ್ದರು.

ನವೀನ್ ಪಟ್ನಾಯಕ್ ಕ್ಯಾಬಿನೆಟ್​ನಲ್ಲಿ ಸಚಿವರಾಗಿರುವ ಪ್ರತಾಪ್ ಜೆನಾ, ಪಂಚಾಯತ್ ರಾಜ್ ಮತ್ತು ಕುಡಿಯುವ ನೀರು, ವಸತಿ ಮತ್ತು ನಗರಾಭಿವೃದ್ಧಿ ಖಾತೆ ಹೊಂದಿದ್ದಾರೆ. ಈ ವಿಷಯವನ್ನು ಕೈಗೆತ್ತಿಕೊಂಡ ಬಿಜೆಪಿ ನಾಯಕರು, ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಟ್ವಿಟರ್​ನಲ್ಲಿ, “ಒಡಿಶಾ ಸರ್ಕಾರದ ಸಚಿವ ಪ್ರತಾಪ್ ಜೆನಾ ಅವರ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ ಕಾರಣ ಮಹಾಂಗಾದ ಹಿರಿಯ ಬಿಜೆಪಿ ಮುಖಂಡ ಕುಲಮಣಿ ಬರಾಲಾ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಸಚಿವರ ಹೆಸರು ಎಫ್‌ಐಆರ್‌ನಲ್ಲೂ ಉಲ್ಲೇಖವಿದೆ. ಒಡಿಶಾ ಬಂಗಾಳ ದಾರಿಯಲ್ಲಿ ಹೋಗುತ್ತಿದೆಯೇ? ” ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಹಿನ್ನೆಲೆ : ಕುಲಮಣಿ ಮತ್ತು ಅವರ ಸಹವರ್ತಿ ದಿಬಯಸಿಂಗ್ ಬರಾಲ್ ಅವರು ಬೈಕಿನಲ್ಲಿ ತಮ್ಮ ಮನೆಗಳಿಗೆ ಹಿಂದಿರುಗುವಾಗ ಶುಕಾನೈ ಒಡ್ಡು ರಸ್ತೆಯಲ್ಲಿ 10ಕ್ಕೂ ಹೆಚ್ಚು ದುಷ್ಕರ್ಮಿಗಳು ತಡೆದು, ಅವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಬಳಿಕ ರಾಮಕಾಂತ್ ಇಬ್ಬರನ್ನೂ ಮಹಾಂಗ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಹೆಚ್‌ಸಿ) ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.