ETV Bharat / bharat

ನವ ವಿವಾಹಿತರಿಗೆ ಕಾಂಡೋಮ್‌ ಒಳಗೊಂಡಿರುವ ಕಿಟ್‌ಗಳನ್ನುಉಡುಗೊರೆ ನೀಡಲಿರುವ ಸರ್ಕಾರ - ನಯಿ ಪಹಲ್ ಕಿಟ್

ನವವಿವಾಹಿತರಿಗೆ ಕಾಂಡೋಮ್‌ಗಳನ್ನು ಒಳಗೊಂಡಿರುವ ಮದುವೆ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಒಡಿಶಾ ಸರ್ಕಾರ ನಿರ್ಧಾರ ಕೈಗೊಂಡಿದೆ.

Odisha govt to gift wedding kits  wedding kits with condoms to newlywed couples  Odisha news  wedding kit for newly married couples in Odisha  ನವವಿವಾಹಿತರಿಗೆ ಕಾಂಡೋಮ್‌ಗಳು ಒಳಗೊಂಡಿರುವ ಮದುವೆಯ ಕಿಟ್‌  ಮದುವೆಯ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಒಡಿಶಾ ಸರ್ಕಾರ ನಿರ್ಧಾರ  ಒಡಿಶಾ ಸುದ್ದಿ  ಕುಟುಂಬ ಯೋಜನಾ ಕಿಟ್‌  ವೆಡ್ಡಿಂಗ್ ಕಿಟ್  ನಯಿ ಪಹಲ್ ಕಿಟ್  ಸೆಪ್ಟಂಬರ್‌ನಿಂದ ನವವಿವಾಹಿತರಿಗೆ ಮದುವೆ ಕಿಟ್‌
ಮದುವೆಯ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲಿರುವ ಸರ್ಕಾರ
author img

By

Published : Aug 13, 2022, 12:00 PM IST

ಭುವನೇಶ್ವರ: ಒಡಿಶಾ ಸರ್ಕಾರ ನವವಿವಾಹಿತರಿಗೆ ಕಾಂಡೋಮ್‌ ಸೇರಿದಂತೆ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಇತರ ಆರೋಗ್ಯ ಅಗತ್ಯ ವಸ್ತುಗಳನ್ನು ಹೊಂದಿರುವ ಕುಟುಂಬ ಯೋಜನಾ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಸಿದ್ಧವಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ 'ನಯಿ ಪಹಲ್ ಯೋಜನೆ' ಎಂಬ ಹೊಸ ಉಪಕ್ರಮವನ್ನು ಜಾರಿಗೆ ತರುತ್ತಿದೆ.

ಈ ಮೂಲಕ ಯುವ ದಂಪತಿಗಳು ತಾತ್ಕಾಲಿಕ ಮತ್ತು ಶಾಶ್ವತವಾದ ಕುಟುಂಬ ಯೋಜನೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕುಟುಂಬ ಯೋಜನೆ, ವಿವಾಹ ನೋಂದಣಿ ನಮೂನೆ, ಕಾಂಡೋಮ್‌ಗಳು, ಮೌಖಿಕ ಮತ್ತು ತುರ್ತು ಗರ್ಭನಿರೋಧಕಗಳ ವಿಧಾನಗಳು ಮತ್ತು ಪ್ರಯೋಜನಗಳ ಕುರಿತು ಬುಕ್‌ಲೆಟ್ ಹೊಂದಿರುವ ನವವಿವಾಹಿತರಿಗೆ 'ವೆಡ್ಡಿಂಗ್ ಕಿಟ್'ಗಳನ್ನು ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ಯೋಜಿಸಿದೆ.

ಇದರ ಹೊರತಾಗಿ, ಗರ್ಭಧಾರಣೆಯ ಪರೀಕ್ಷಾ ಕಿಟ್, ಟವೆಲ್, ಬಾಚಣಿಗೆ, ಬಿಂದಿ, ಉಗುರು ಕತ್ತಿರಿಸುವ ಸಾಧನ ಮತ್ತು ಕನ್ನಡಿ ಸೇರಿದಂತೆ ಇತರ ಸಾಮಗ್ರಿಗಳನ್ನು ಸಹ ಒಳಗೊಂಡಿರುತ್ತದೆ. ಈ ವರ್ಷದ ಸೆಪ್ಟಂಬರ್‌ನಿಂದ ನವವಿವಾಹಿತರಿಗೆ ಮದುವೆ ಕಿಟ್‌ಗಳನ್ನು ವಿತರಿಸುವ ಕಾರ್ಯವನ್ನು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ (ಆಶಾ) ವಹಿಸಲಾಗುವುದು ಎಂದು ಕುಟುಂಬ ಯೋಜನಾ ನಿರ್ದೇಶಕ ಡಾ. ಬಿಜಯ್ ಪಾಣಿಗ್ರಾಹಿ ಹೇಳಿದರು. ಇದರ ಬಗ್ಗೆ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ.

ಹೊಸದಾಗಿ ಮದುವೆಯಾದ ದಂಪತಿಗಳು ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲು ನಾವು ಅವರಿಗೆ ನವ ದಂಪತಿ ಕಿಟ್ ಅಥವಾ ನಯಿ ಪಹಲ್ ಕಿಟ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ಕಿಟ್​ನಲ್ಲಿ ಕುಟುಂಬ ಯೋಜನೆ, ಕಾಂಡೋಮ್‌ಗಳಂತಹ ಗರ್ಭನಿರೋಧಕಗಳು, ತುರ್ತು ಗರ್ಭನಿರೋಧಕ ಮಾತ್ರೆಗಳು ಸೇರಿದಂತೆ ಇತರ ವಸ್ತುಗಳನ್ನು ಒಳಗೊಂಡಿದೆ ಎಂದು ಅವರು ಕಿಟ್‌ನಲ್ಲಿರುವ ವಿವರಗಳನ್ನು ಹಂಚಿಕೊಂಡರು.

ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮಹಿಳಾ ಸ್ಪರ್ಧಿ ಕಯಾಕ್‌ಗೆ ಕಾಂಡೋಮ್‌ ಬಳಸಿದ್ದೇಕೆ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.