ಭುವನೇಶ್ವರ(ಒಡಿಶಾ) : ಕಾಂಗ್ರೆಸ್‌ನ ಹಿರಿಯ ಶಾಸಕ ತಾರಾ ಪ್ರಸಾದ್ ಬಹಿನಿಪತಿ ಅವರು ಪೂಜಾರಿ ವೇಷ ಧರಿಸಿ ಒಡಿಶಾ ವಿಧಾನಸಭೆಗೆ ಪ್ರವೇಶಿದ್ದಲ್ಲದೇ ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸಿ ವಿಧಾನಸಭೆಯನ್ನು ಶುದ್ಧೀಕರಿಸಿದ ವಿಚಿತ್ರ ಘಟನೆ ನಿನ್ನೆ ನಡೆದಿದೆ.
ಶಿಕ್ಷಕಿ ಮಮಿತಾ ಮೆಹರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗೋವಿಂದ ಸಾಹು ಜೊತೆ ನಂಟು ಹೊಂದಿರುವ ಆರೋಪವನ್ನು ಸಚಿವ ದಿವ್ಯಾ ಶಂಕರ್ ಮಿಶ್ರಾ ಎದುರಿಸುತ್ತಿದ್ದಾರೆ.
ಹೀಗಾಗಿ, ಅವರ ‘ಅಪವಿತ್ರ ಪಾದ’ಗಳನ್ನು ಸದನದಲ್ಲಿ ಇಟ್ಟು ಪ್ರಜಾಪ್ರಭುತ್ವವೆಂಬ ಮಂದಿರವನ್ನ ‘ಅಪವಿತ್ರ’ ಮಾಡಿದ್ದಾರೆ ಎಂದು ಶಾಸಕ ತಾರಾ ಪ್ರಸಾದ್ ಆರೋಪಿಸಿ ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸಿದ್ದಾರೆ.
ಇದನ್ನೂ ಓದಿ: ಶಬರಿಮಲೆಗೆ ಭಕ್ತರ ದಂಡು.. ಒಂದೇ ದಿನ ದಾಖಲೆಯ 42 ಸಾವಿರ ಮಂದಿ ಅಯ್ಯಪ್ಪಸ್ವಾಮಿಯ ದರ್ಶನ..
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾರಾ ಪ್ರಸಾದ್, ಕಾಳಹಂಡಿಯ ಮಹಾಲಿಂಗ್‌ನಲ್ಲಿರುವ ಸನ್‌ಶೈನ್ ಆಂಗ್ಲ ಮಾಧ್ಯಮ ಶಾಲೆಯ ಮಹಿಳಾ ಶಿಕ್ಷಕಿ ಮಮಿತಾ ಮೆಹರ್ ಹತ್ಯೆಯ ಪ್ರಮುಖ ಆರೋಪಿ ಗೋವಿಂದ ಸಾಹು ಜೊತೆ ದಿವ್ಯಾ ಶಂಕರ್ ಮಿಶ್ರಾ ಸಂಪರ್ಕ ಹೊಂದಿದ್ದಾರೆ.
ಆದರೆ, ಆಡಳಿತಾರೂಢ ಬಿಜು ಜನತಾ ದಳವು ಆರೋಪಗಳನ್ನು ತಳ್ಳಿ ಹಾಕಿದೆ. ಶಿಕ್ಷಕಿ ಹತ್ಯೆ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.