ETV Bharat / bharat

ಬೇಲಿಯೇ ಎದ್ದು ಹೊಲ ಮೇಯ್ದಾಗ.. ಗಾಂಜಾ ಕಳ್ಳಸಾಗಣೆ ಆರೋಪದಡಿ ASI ಸೇರಿ ನಾಲ್ವರ ಬಂಧನ - ASI has been identified as Jayadash Khara

ಎಎಸ್‌ಐ ಜಯದಶ್ ಖಾರಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಮಲ್ಕಾನ್​​ಗಿರಿ ಪೊಲೀಸರು ಗಾಂಜಾ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಿದ್ದಾರೆ.

ASI among four arrested over ganja smuggling
ಎಎಸ್‌ಐ ಸೇರಿ ನಾಲ್ವರ ಬಂಧನ
author img

By

Published : Mar 13, 2022, 6:05 PM IST

ಮಲ್ಕಾನ್​​​ಗಿರಿ: ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಗಾಂಜಾ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಓರ್ವ ಎಎಸ್‌ಐ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಎಎಸ್‌ಐ ಅವರನ್ನು ಜಯದಾಶ್ ಖಾರಾ ಎಂದು ಗುರುತಿಸಲಾಗಿದೆ. ಅವರನ್ನು ಜಿಲ್ಲೆಯ ಕರ್ತನಪಲ್ಲಿ ಪ್ರದೇಶದಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು.

ವರದಿಗಳ ಪ್ರಕಾರ, ಆರೋಪಿಗಳಿಂದ 420 ಕೆಜಿ ತೂಕದ ಗಾಂಜಾ, 10,000 ರೂಪಾಯಿ ನಗದು, ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಇವ್ನು ಕೊಡುವ ಸೂಪ್ ಸೇವಿಸಿದ್ರೆ ಕಥೆ ಅಷ್ಟೇನೆ.. ಬೆಚ್ಚಿಬೀಳಿಸುತ್ತೆ ಈತನ ಕೃತ್ಯ!

ಎಎಸ್‌ಐ ಖಾರಾ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಲ್ಕಾನ್​​ಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದರು. ಮಲ್ಕಾನ್​​​ಗಿರಿಯಿಂದ ಇತರ ರಾಜ್ಯಗಳಿಗೆ ಗಾಂಜಾ ಸಾಗಿಸಲು ಎಎಸ್​ಐ ಖಾರಾ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.