ETV Bharat / bharat

ಒಡಿಶಾ: ಹಾಸ್ಟೆಲ್​ನಲ್ಲಿದ್ದ 64 ಶಾಲಾ ಮಕ್ಕಳಿಗೆ ಕೋವಿಡ್ ಪಾಸಿಟಿವ್

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಬೆನ್ನಲ್ಲೇ ಒಡಿಶಾದ ರಾಯಗಡ ಜಿಲ್ಲೆಯ ಎರಡು ಹಾಸ್ಟೆಲ್‌ಗಳಲ್ಲಿದ್ದ 64 ಶಾಲಾ ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್
ಕೋವಿಡ್ ಪಾಸಿಟಿವ್
author img

By

Published : May 9, 2022, 11:13 AM IST

ರಾಯಗಡ: ಒಡಿಶಾದ ರಾಯಗಡ ಜಿಲ್ಲೆಯ ಎರಡು ಹಾಸ್ಟೆಲ್‌ಗಳಲ್ಲಿದ್ದ ಸುಮಾರು 64 ಶಾಲಾ ಮಕ್ಕಳಿಗೆ ಭಾನುವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾದೃಚ್ಛಿಕವಾಗಿ (ರ್‍ಯಾಂಡಮ್) ಪರೀಕ್ಷೆ ನಡೆಸಿದ ನಂತರ ಸೋಂಕು ಕಂಡುಬಂದಿದೆ. ಆದರೆ, ವಿದ್ಯಾರ್ಥಿಗಳಿಗೆ ಯಾವುದೇ ಕೊರೊನಾ ಲಕ್ಷಣಗಳಿಲ್ಲ, ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಐಸೋಲೇಷ್‌ನಲ್ಲಿ ಇಡಲಾಗಿದೆ ಎಂದು ರಾಯಗಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಸರೋಜ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿಲ್ಲ. ಆದರೆ, ರ್‍ಯಾಂಡಮ್ ಪರೀಕ್ಷೆ ವೇಳೆಯಲ್ಲಿ ಎರಡು ವಸತಿ ನಿಲಯಗಳಲ್ಲಿ ಕೆಲ ಕೇಸ್‌ಗಳು ವರದಿಯಾಗಿವೆ. ಸೋಂಕು ದೃಢಪಟ್ಟ 64 ವಿದ್ಯಾರ್ಥಿಗಳ ಸ್ಯಾಂಪಲ್​ಗಳನ್ನು ಸಂಗ್ರಹಿಸಿ ಮರು ತಪಾಸಣೆಗಾಗಿ ರಾಜ್ಯದ ಕೇಂದ್ರ ಕಚೇರಿಗಳಿಗೆ ಕಳುಹಿಸಲಾಗಿದೆ. ಹಾಸ್ಟೆಲ್​ನಲ್ಲಿ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ ನಂತರ ಮಾತನಾಡಿದ ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿ ಭುವನೇಶ್ವರಿ ಡಾ.ಸತ್ಯನಾರಾಯಣ, ‘ಮಕ್ಕಳು ಆರೋಗ್ಯವಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ರೋಗದ ಲಕ್ಷಣಗಳಿಲ್ಲ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ, ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ರಾಯಗಡ ಜಿಲ್ಲಾ ಕೇಂದ್ರ ಅನ್ವೇಶಾ ಹಾಸ್ಟೆಲ್‌ನಲ್ಲಿ ಒಟ್ಟು 44 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಲ್ಲಿನ ವಿದ್ಯಾರ್ಥಿಗಳು ಒಂಬತ್ತು ವಿವಿಧ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದೇ ರೀತಿ, ರಾಯಗಡ ಜಿಲ್ಲೆಯ ಬಿಸ್ಮಾಮ್ ಕಟಕ್ ಬ್ಲಾಕ್‌ನಲ್ಲಿರುವ ಹತಮುನಿಗುಡ ಹಾಸ್ಟೆಲ್‌ನಲ್ಲಿ 22 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

ಇದನ್ನೂ ಓದಿ: ಭಾರತದಲ್ಲಿ ಮತ್ತೆ ಕೋವಿಡ್ ಭೀತಿ: 3,207 ಹೊಸ ಸೋಂಕಿತರು ಪತ್ತೆ, 29 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.